Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಣತೆ ಸಾಕು
Share:
Poems September 14, 2024 ಜ್ಯೋತಿಲಿಂಗಪ್ಪ

ಹಣತೆ ಸಾಕು

ಬೆಳಕ ನೋಡಲಾಗದ ಕಣ್ಣು
ದೀಪ ಹಚ್ಚಿದರೆ ಕಣ್ಣು ಕತ್ತಲು
ಹಚ್ಚದಿರೆ ಹೃದಯ ಕತ್ತಲು

ದೀಪ ಬೆಳಗಿಸುವ ಕಷ್ಟ

ಕತ್ತಲೆಂಬುದು ಕತ್ತಲಾಗದು
ಬೆಳಕೆಂಬುದು ಬೆಳಕಾಗದು

ಏನೂ ಕೂಡಿಡದೆ
ಕಳೆಯುವುದು ಹೇಗೆ

ಈಗ
ಇರುವ ಸುಳ್ಳೇ ಅರಗಿಸಲಾಗಿಲ್ಲ
ಇನ್ನೇನು ಹೊಸಾ ಸುಳ್ಳು

ಬೆಟ್ಟದ
ತುದಿಯ ಬಂಡೆ
ಬಂಡೆಯ ಮೇಲೆ ನಿಂತಿರುವ
ಹೆಮ್ಮೆ
ಅಲುಗಾಡದೆ ಬಂಡೆ

ನಾನು ಸಾಯದೆ
ಕಾಣುವುದೇ ಬಯಲು

ಮತ್ತೇನೂ ಇಲ್ಲ ಸಾಯಲಿ

ಮುದ್ದಾದ ಮಿಥ್ಯ ಈ ದೇವರು

ಮನ ಮರೆತು
ಅಚಲವಾಗಿ ಹಾಯ್ಕು

ಮರೆತುದು ಏನು

ಈ ಕತ್ತಲು
ಬೆಳಗಿಸಲು ಒಂದು
ಹಣತೆ ಸಾಕು

ದೀಪ ಹಚ್ಚಲು ಗಾಳಿಗೆ
ಹೇಳಿರುವೆ.

Previous post ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
Next post ಕಾಲ ಕಲ್ಪಿತವೇ?!
ಕಾಲ ಕಲ್ಪಿತವೇ?!

Related Posts

ನದಿಯನರಸುತ್ತಾ…
Share:
Poems

ನದಿಯನರಸುತ್ತಾ…

October 6, 2020 ಜ್ಯೋತಿಲಿಂಗಪ್ಪ
ಜ್ಞಾನವೆಂಬುದೇನು? ಮನೋ ಭೇದ. -ಅಲ್ಲಮ ನಾನು ಹುಟ್ಟುವಾಗ ಹೇಳಿ ಬಂದೆನೇ ಸಾಯುವಾಗಲೂ ಅಷ್ಟೇ ಬದುಕು ಹೇಳದು ಏನೂ ಈ ಕಡಲಲಿ ಕಳೆದಿರುವ ನದಿ ಹುಡುಕುತಿರುವೆ ಹುಡುಕುತಿರುವ ನದಿ...
ಹುಡುಕಾಟ…
Share:
Poems

ಹುಡುಕಾಟ…

August 8, 2021 ಜ್ಯೋತಿಲಿಂಗಪ್ಪ
ಈ ಮರವೆ ಯಾವಾಗ ಬರುತ್ತೋ ಕಾಯುತಾ ಕುಳಿತಿರುವೆ ಅಲೆದಾಡಿ ಕಾಲು ಸೋತಿವೆ ಹುಡುಕಾಡಿ ಕಣ್ಣು ಸೋತಿವೆ ಅರಗಿಸಲಾಗದ ರುಚಿ ಕಂಡಿದೆ ನಾಲಿಗೆ ಹೇಳಲಾಗದ ವಾಸನೆಯೊಳಗೆ ಮೂಗು ತೂರಿದೆ...

Comments 4

  1. ಲಹರಿ ಬೆಂಗಳೂರು
    Sep 19, 2024 Reply

    ತಮಂಧ ಘನವ ಓಡಿಸಲು ಹಣತೆ ಸಾಕು. ಬಯಲ ಅರಿಯಲು ‘ನಾನು’ ಸಾಯಲೇ ಬೇಕು… ಕವನ ಅರ್ಥಗರ್ಭಿತ.💥💥

  2. ಸಂತೋಷ ಕುಮಾರ್, ಸಿ
    Sep 22, 2024 Reply

    ದೇವರು ಅದ್ಭುತ ಸುಳ್ಳು ಅಂತ ಹೇಳುತ್ತಿದ್ದೆ, ‘ಮುದ್ದಾದ ಮಿಥ್ಯ’ ಅನ್ನೋದು ಇನ್ನೂ ಮುದ್ದಾಗಿದೆ ಸರ್😀

  3. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Sep 27, 2024 Reply

    ನಿಮ್ಮ ಓದಿಗಾಗಿ ಧನ್ಯವಾದಗಳು

  4. ಶ್ರೀಶೈಲ ಹಾದಿಮನಿ, ಅಮೆರಿಕ
    Oct 3, 2024 Reply

    ತುಂಬಾ ಚೆನ್ನಾಗಿ ರಚಿತವಾದ ಕವನಗಳು. ತಮ್ಮ ನಿರಂತರ ಸೇವೆಗೆ ಧನ್ಯವಾದಗಳು 💐🙏

Leave a Reply to ಲಹರಿ ಬೆಂಗಳೂರು Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೆಳಕು ನುಂಗಿದ ಕತ್ತಲು
ಬೆಳಕು ನುಂಗಿದ ಕತ್ತಲು
December 9, 2025
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ಶಿವನ ಕುದುರೆ…
ಶಿವನ ಕುದುರೆ…
May 1, 2019
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ತತ್ವಪದಗಳ ಗಾಯನ ಪರಂಪರೆ
ತತ್ವಪದಗಳ ಗಾಯನ ಪರಂಪರೆ
February 7, 2021
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…
May 6, 2021
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಬೆಳಕಿನ ಹುಳು
ಬೆಳಕಿನ ಹುಳು
December 9, 2025
Copyright © 2026 Bayalu