Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕು ನುಂಗಿದ ಕತ್ತಲು
Share:
Poems December 9, 2025 ಜಬೀವುಲ್ಲಾ ಎಂ.ಅಸದ್

ಬೆಳಕು ನುಂಗಿದ ಕತ್ತಲು

ಬೂದಿ ಮುಚ್ಚಿದ ಮುಗಿಲು
ಹರಿದ ಗಾಳಿ ಅಲೆಗಳಿಗೆ ನೆನೆದು
ನೆಲದ ಬಾಗಿಲು ತೆರೆದು
ತೋರಿ ಬಯಲು

ಮುರಿದ ಕೈ
ಕುಂಟುವ ಕಾಲು
ನಾಲಿಗೆ ಚಾಚಿದ ಬಯಕೆ ನೂರು
ನೋಡು… ನೋಡು… ನೋಡು…
ದಾಟುವುದಾದರೂ ಹೇಗೆ
ಈ ಆಲಯವನು?

ಏನನ್ನೂ ಕಾಣದ ಕಣ್ಣು
ಕಾಣದೇನನ್ನೋ ಅರಸುವುದು
ಉತ್ತರ ಸಿಗದ ಒಗಟಿನ ಪ್ರಶ್ನೆಗೆ
ತಲೆ ಸಿಡಿದು ಚೂರಾಗುವುದು ಸಾವಿರ

ಕಾಲಚಕ್ರದಿ ಸಿಲುಕಿದ ಬದುಕಿನ ಪುಟಗಳು
ಉಸಿರ ಬಿಗಿ ಹಿಡಿದು
ನಾಟುತ್ತಿವೆ ಬಿದಿರ ಕೊಲುಗಳನ್ನು
ಮನದ ಕೊಳದಲ್ಲಿ

ಹೇಳಿಕೊಳ್ಳಲಾಗದ ನೋವು
ನಗುವನ್ನು ಕೊಂದು ನಡೆದಿದೆ
ಕರಗಳ ಬಿರುಸಾಗಿ ಬೀಸುತ ಏಕಾಂಗಿಯಾಗಿ

ಉಳಿದಿದ್ದೇನೆ ಹೀಗೆ…
ಅಮೂರ್ತ ಸಂಕೋಲೆಗಳಲ್ಲಿ ಸಿಲುಕಿ
ಏಕಾಂತದ ಬಂಧನದಲ್ಲಿ

ಬೆಳಕು ನುಂಗಿದ ಕತ್ತಲು
ಭ್ರಮೆಯ ಕುಯಿಲು
ತೆರೆದ ಬಾಗಿಲು ಮತ್ತೆ ಮುಚ್ಚಿಹೋಗುವ ಹೊತ್ತು

ಎಲ್ಲಿದೆ ಬಿಡುಗಡೆ
ಗಮ್ಯ ಕಾಣದವನ ನಿಲುಗಡೆ.

Previous post ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು
ಬೌದ್ಧ ಮೀಮಾಂಸೆ ಹಾಗೂ ವರ್ತಮಾನದ ಸವಾಲುಗಳು
Next post ಗ್ರಹಣ
ಗ್ರಹಣ

Related Posts

ಆಸರೆ
Share:
Poems

ಆಸರೆ

August 6, 2022 ಜ್ಯೋತಿಲಿಂಗಪ್ಪ
ಅರಿವಿನ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತಿರುವೆ ನಿಂತು ನೀಡುವರು ಯಾರು ಮನೆ ಖಾಲಿ ಅರಿಯದೆ ಅರಿವು ನಿಲ್ಲದು ಊರ ಹೊರಗೆ ನಿಂತು ಒಳಗೆ ಹೋಗುವ ದಾರಿ ಕೇಳುತಿರುವೆ ಹೇಳರು. ಗಾಳಿಯ...
ನನ್ನೆದುರು ನಾ…
Share:
Poems

ನನ್ನೆದುರು ನಾ…

March 6, 2024 ಕೆ.ಆರ್ ಮಂಗಳಾ
ಅದೇಕೋ ಮೊನ್ನೆ ಮೊನ್ನೆ ಸಂತೆ ತೋರುವೆ, ಜಾತ್ರೆ ನೋಡುವೆ ನಡಿ ನನ್ನೊಡನೆ ಎಂದ ಗುರು ಹಿಗ್ಗಿನಲಿ, ಗೆಲುವಿನಲಿ ಚೆಂದದ ಸಿಂಗಾರದಲಿ ಹೊರಟಿತ್ತು ನನ್ನ ಮೆರವಣಿಗೆ ಸಂಭ್ರಮವೇನು,...

Comments 1

  1. ಮಂದಾರಾ ವಿ ಚನ್ನಗಿ
    Dec 15, 2025 Reply

    ಮುಗಿಲು ಬಯಲಿಗೆ ಬಾಗಿಲು ತೋರುವುದೆನ್ನುವ ಕಲ್ಪನೆ👌🤌

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ನಾನೆಂಬುದ ಅಳಿದು…
ನಾನೆಂಬುದ ಅಳಿದು…
April 6, 2023
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
ಸಾವಿನ ಸುತ್ತ…
ಸಾವಿನ ಸುತ್ತ…
January 8, 2023
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ಅರಸೊತ್ತಿಗೆಯಿಂದ ಅರಿವಿನೆಡೆಗೆ
ಅರಸೊತ್ತಿಗೆಯಿಂದ ಅರಿವಿನೆಡೆಗೆ
April 29, 2018
ಒಳಗಣ ಮರ
ಒಳಗಣ ಮರ
March 12, 2022
Copyright © 2026 Bayalu