ಸೃಜನಾತ್ಮಕ ಬರವಣಿಗೆ, ಕಾವ್ಯ, ಉಪನ್ಯಾಸಗಳಲ್ಲಿ ಆಪ್ತ ಶೈಲಿಯಿಂದ ಹೆಸರಾದ ಓಎಲ್ಎನ್ ಇಂದಿನ ಹೆಜ್ಜೆ, ನುಡಿಯೊಳಗಾಗಿ, ಯುದ್ಧ ಮತ್ತು ಶಾಂತಿಯಂತಹ 75 ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಕೇಂದ್ರಸಾಹಿತ್ಯ ಅಕಾಡೆಮಿ, ಅನುವಾದ ಸಾಹಿತ್ಯ ಅಕಾಡೆಮಿ, ಜೆ.ಕೆ.ಫೌಂಡೇಶನ್ ಸಂಸ್ಥೆಗಳಲ್ಲಿ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ ಅನುಭವ. ರಾಜ್ಯೋತ್ಸವ ಪ್ರಶಸ್ತಿ, ಜೆಎಸ್ಎಸ್ ಪ್ರಶಸ್ತಿಯ, ಸಾಹಿತ್ಯ ಅಕಾಡೆಮಿಯಂತಹ ಬಹುಮಾನಗಳು ಅವರನ್ನು ಗೌರವಿಸಿವೆ.