Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಜಲ್…
Share:
Poems February 16, 2026 ಜಬೀವುಲ್ಲಾ ಎಂ.ಅಸದ್

ಗಜಲ್…

ಬದುಕೊಂದು ಪಯಣ ಸುಮ್ಮನೆ ನಡೆಯುತ ನೀ ಸಾಗು
ನಿನ್ನ ಜೀವನ ಗಮ್ಯವ ಅರಿತು ನೆಮ್ಮದಿ ಅರಸುತ ನೀ ಸಾಗು

ಯಾರಿಗೂ ಇಲ್ಲಿ ಯಾರಿಲ್ಲ ಯಾವುದೂ ಶಾಶ್ವತವಿಲ್ಲ
ನಿನ್ನಲ್ಲಿರುವ ಪ್ರೀತಿಯನೆ ಎಲ್ಲರಿಗೂ ಹಂಚುತ ನೀ ಸಾಗು

ನಿನ್ನದೆಂಬುದು ಏನೂ ಇಲ್ಲ ನೀನೆ ನಶ್ವರ ನೆನಪಿರಲಿ
ಮಮತೆ, ಮಾನವೀಯತೆಯ ಬೀಜ ಬಿತ್ತುತ ನೀ ಸಾಗು

ಜಗವೊಂದು ಬಯಕೆಗಳ ಕಾಡು ಕಳೆದು ಹೋಗದಿರು
ಇರುವುದೆಲ್ಲವ ಕಳೆದು ಖಾಲಿಯಾಗಿ ನಗುತ ನೀ ಸಾಗು

ಸತ್ಯದ ಆಯ್ಕೆ ನಿನ್ನದಾಗಿರಲಿ ಎಂದೆಂದಿಗೂ ಅಸದ್
ಕಣ್ಣಿಗೆ ಕಾಣದ ಸುಳ್ಳಿನ ಬೇಲಿಗಳ ದಾಟುತ ನೀ ಸಾಗು.

Previous post ಅನುಭವ ಮಂಟಪದ ವಿನ್ಯಾಸ…
ಅನುಭವ ಮಂಟಪದ ವಿನ್ಯಾಸ…
Next post ಕುರುಹೇ ಬಯಲು
ಕುರುಹೇ ಬಯಲು

Related Posts

ನಾನು… ನನ್ನದು
Share:
Poems

ನಾನು… ನನ್ನದು

July 4, 2021 ಜ್ಯೋತಿಲಿಂಗಪ್ಪ
ಅಪ್ಪ ತನ್ನೆಲ್ಲಾ ಆಸೆಗಳ ಸಾಕಿಕೊಂಡೇ ಮಗನ ಬೆಳೆಸಿದ ಮಗ ತನ್ನೆಲ್ಲಾ ಆಸೆ ಇಟ್ಟುಕೊಂಡೇ ಮಗನ ಸಾಕಿದ ಅಪ್ಪನ ಸಾವಿನ ನೆರಳು ಮಗನನು ಮುಟ್ಟದೇ… ಈ ಕತ್ತಲಲಿ ಒಬ್ಬನೇ ಹೋಗುವಾಗ...
ನೆಟ್ಟ ನಂಜು ಹಾಲೀಂಟದು
Share:
Poems

ನೆಟ್ಟ ನಂಜು ಹಾಲೀಂಟದು

June 5, 2021 Bayalu
ಯಾರ ಮನೆ ಯಾರ ತೆನೆ ಯಾರ ಅನ್ನ ಯಾರ ಚಿನ್ನ ಸಾವಲಿ ಜೊತೆ ಬರಲಿಹುದೆ ಕಟ್ಟಿ ಒಯ್ಯಲಾಗುವುದೆ ಆ ಬಂಧು ಈ ಬಳಗ ಆ ಹಣವು ಈ ಎಣೆಯು ಕಟ್ಟು ಕಟ್ಟಿ ಇಟ್ಟ ಗಂಟು ಯಾರಿಗೊ ಹೋಗಲಿಕುಂಟು...

Comments 1

  1. ನಿರಂಜನ ಶಿರಗುಪ್ಪ
    Feb 22, 2026 Reply

    ನಮ್ಮೊಳಗೇ ನಾವು ಹೇಳಿಕೊಳ್ಳುವ ಇಂತಹ ಮಾತುಗಳು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುತ್ತವೆ. ನಿಮ್ಮ ಕವನಗಳ ಆಶಯ ಬಹಳ ವಿಸ್ತರವಾಗಿದ್ದು, ಮಾನವತೆಯ ಜೇನು ಜಿನುಗುತ್ತಿರುತ್ತದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?
December 3, 2018
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
ಕನ್ನಡಿ ನಂಟು
ಕನ್ನಡಿ ನಂಟು
October 10, 2023
ಬರಿದಾಗುವ ಬೆರಗು
ಬರಿದಾಗುವ ಬೆರಗು
February 6, 2025
ಸರ್ವ ಧರ್ಮ ಸಮನ್ವಯ
ಸರ್ವ ಧರ್ಮ ಸಮನ್ವಯ
February 16, 2026
ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
September 13, 2025
ಹಣತೆ ಸಾಕು
ಹಣತೆ ಸಾಕು
September 14, 2024
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
ನನ್ನೆದುರು ನಾ…
ನನ್ನೆದುರು ನಾ…
March 6, 2024
Copyright © 2026 Bayalu