ನದಿಯನರಸುತ್ತಾ…
ಜ್ಞಾನವೆಂಬುದೇನು? ಮನೋ ಭೇದ.
-ಅಲ್ಲಮ
ನಾನು
ಹುಟ್ಟುವಾಗ
ಹೇಳಿ ಬಂದೆನೇ ಸಾಯುವಾಗಲೂ
ಅಷ್ಟೇ ಬದುಕು ಹೇಳದು ಏನೂ
ಈ
ಕಡಲಲಿ
ಕಳೆದಿರುವ ನದಿ ಹುಡುಕುತಿರುವೆ
ಹುಡುಕುತಿರುವ
ನದಿ
ಕಳೆದಿದೆ ಕಡಲು
ಕಡಲಲಿ ಕಳೆಯುವ
ನದಿ
ಹುಡುಕುವುದೇ
ಕಡಲಿನಲಿ ಕಳೆಯುವ ನದಿಯ
ಬೆನ್ನೇರಿದೆ ಉಪ್ಪು
ಅವಲಂಬಿತನ ಹಂಗು ಬಿತ್ತಿದೆ
ದ್ವೇಷದ ಬೀಜ
ಹೇಳು ಸಾಯಲು ಬಿತ್ತ ಬೇಕು
ಬಂಜೆ
ಬೀಜ ಬಿತ್ತಿ ನೆಲ
ಬಂಜೆ ನನ್ನ ಮನಸ್ಸಿಗೆ ನಾನೇ
ಸಾಕ್ಷಿ
ಸದಾ ಸುಳ್ಳು ಒಂದರ
ಪಡಿನೆಳಲು ಇನ್ನೊಂದು
ರೂಹು ಕಣ್ಣ ಚೆಲುವು
ನಾನೇ ಒಂದು ಹೊರೆ
ಈ
ನೆಲಕ್ಕೆ ನನ್ನ ತಲೆಯ ಮೇಲಿನ
ಹೊರೆ
ಯಾಕೆ ಹೊರಿಸಲಿ ನಾನೇ ಹೊರುವೆ
ನಕ್ಕಿತು ನೆಲ
ಕಣ್ಣೀರು ಸವಿದರೆ ಉಪ್ಪರಿಯದು.
Comments 1
Nirmala R
Oct 10, 2020ಕಡಲಲ್ಲಿ ನದಿ ತನ್ನ ಹುಡುಕುವ ಇಮೇಜ್ ಸೊಗಸಾಗಿದೆ.