Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಇದ್ದಷ್ಟೇ…
Share:
Poems January 10, 2021 ಜ್ಯೋತಿಲಿಂಗಪ್ಪ

ಇದ್ದಷ್ಟೇ…

ಇದ್ದಷ್ಟೇ ಇದರಾಚೆ ಕನಸೂ ಇಲ್ಲ ನಿದ್ದೆಯೂ ಇಲ್ಲ
ಇರುವಷ್ಟು ಇರುವುದು ಇದ್ದ ಹಾಗೆ ಇರು

ಕನಸು ಇದ್ದಾಗಷ್ಟೇ ಕನಸು ಇರುವುದು
ಎಚ್ಚರಾದರೆ ಕನಸು ಕನವರಿಸುವುದು

ಎಚ್ಚರಾಗು ಉದಯದ ಮೊದಲ ಕಿರಣ ಕಣ್ಣ ತುಂಬಲಿ
ಈಗಷ್ಟೇ ಮುಂಝಾವದ ಕನಸು ಕಳೆದಿದೆ

ಕಳೆದಿರುಳಿನ ನಿರ್ಮೌನ ನಿನ್ನೆ ಕಳೆದಿದೆ
ನೆನಹುಗಳು ಒಂದೊಂದು ತೂರಿ ಬರುವದರಲಿ ತೂರಿ ಬಿಡು
ತೋರುವ ದಾರಿಯಲಿ ಕತ್ತಲೂ ಇದೆ ಬೆಳಕೂ ಇದೆ

ಮೆಟ್ಟಲುಗಳಿಲ್ಲದ ಬಾವಿ ಬಿಂಬ ಕಾಣದು
ಅಪ್ಪುವಿನಿಂದೆದ್ದ ಕೆಂಡದಲಿ ಜ್ಯೊತಿ ಇದೆ

ಬಯಲು ನುಡಿಯಲಾಗದು ಎಂದೇನಲ್ಲ
ಇದೇ ಎಂದು ನುಡಿಯಬಾರದು

ಅಳತೆ ಇಲ್ಲದೆ ಅಳೆಯುವ ಕಣ್ಣು ನನದಲ್ಲ.

Previous post ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
Next post ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ

Related Posts

ಸೂರ್ಯ
Share:
Poems

ಸೂರ್ಯ

January 8, 2023 ಜ್ಯೋತಿಲಿಂಗಪ್ಪ
ಸೂರ್ಯ ಈ ಸಂತೆಯೊಳಗೇನು ಹುಡುಕುತಿರುವೇ…? ನಿಶ್ಶಬ್ದ, ಮಾರುವುದಿಲ್ಲವೇ…! ಅದು ಮಂದಿರ ಮಸೀದಿ ಚರ್ಚು ಮಠಗಳ ಹಕ್ಕು ಸುಮ್ಮನೇ ಕುಳಿತು ಕಣ್ಣೊಳಗಣ ಬೆಳಕ ಸದ್ದು ಕೇಳು ಈ ಸಂತೆಗೆ...
ಗುರುಪಥ
Share:
Poems

ಗುರುಪಥ

January 4, 2020 ಕೆ.ಆರ್ ಮಂಗಳಾ
ಎಲ್ಲೆಲ್ಲಿಯೋ ಸುತ್ತಿ, ಎಲ್ಲೆಲ್ಲಿಯೋ ಅಲೆದು ಕಂಡಕಂಡವರನ್ನೆಲ್ಲ ಕೇಳಿ ಓದುಬಲ್ಲವರನ್ನೆಲ್ಲ ಹುಡುಕಿ ಸುಸ್ತಾದದ್ದೆ ಬಂತು, ದಾರಿ ಸಿಗಲಿಲ್ಲ ಹೇಳುವದನ್ನೆಲ್ಲ ಹಿಡಿದು...

Comments 1

  1. Karthik Mannur
    Jan 14, 2021 Reply

    ಯಾವುದು ಕನಸು, ಯಾವುದು ಎಚ್ಚರ? ಎರಡರಲ್ಲೂ ಜೀವ ಬಳಲುತ್ತದೆ! ಸುಂದರ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
May 10, 2022
ಹಣತೆ ಸಾಕು
ಹಣತೆ ಸಾಕು
September 14, 2024
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ಗುರು ಲಿಂಗ ಜಂಗಮ…
ಗುರು ಲಿಂಗ ಜಂಗಮ…
February 10, 2023
ಹಿರಿಯರ ಹಾದಿ…
ಹಿರಿಯರ ಹಾದಿ…
July 4, 2022
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಅನಿಮಿಷ- ಕಾದು ಗಾರಾದ ಮಣ್ಣು(7)
ಅನಿಮಿಷ- ಕಾದು ಗಾರಾದ ಮಣ್ಣು(7)
June 12, 2025
Copyright © 2025 Bayalu