Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಾದಿಯ ಹಣತೆ…
Share:
Poems June 12, 2025 ಕೆ.ಆರ್ ಮಂಗಳಾ

ಹಾದಿಯ ಹಣತೆ…

ಕೈಯಲಿ ಹಿಡಿದು
ಅಲೆಯುತಲಿದ್ದೆ
ಕಣ್ಣಿಗೊತ್ತಿಕೊಂಡು
ಕರಗುತಲಿದ್ದೆ
ಎದೆಗವುಚಿಕೊಂಡು
ಮುದ್ದಾಡುತಲಿದ್ದೆ
ತಲೆಯ ಮೇಲೆ ಹೊತ್ತು
ಬೀಗುತಲಿದ್ದೆ…

ವಚನ ರಾಶಿಯಲಿ
ಅರಸುತಲಿದ್ದೆ
ಹಿರಿಯರ ಮಾತಲಿ
ಹುಡುಕುತಲಿದ್ದೆ
ಯೋಗಸಿದ್ದಿಗಳಿಗೆ
ತವಕಿಸುತಿದ್ದೆ
ಪೂಜೆ-ಪ್ರಾರ್ಥನೆಯಲಿ
ಪರಿತಪಿಸುತಿದ್ದೆ…

ಅಲ್ಲೆಲ್ಲೋ ಮಿಂಚಿದಂತೆ
ಇಲ್ಲೇನೋ ಹೊಳೆದಂತೆ
ಮತ್ತೆಲ್ಲೋ ಸುಳಿದಂತೆ
ಸಿಕ್ಕು ಸಿಗದ
ಬಿಸಿಲ್ಗುದುರೆಯಂತೆ…

ನೀರು ಹಿಡಿದು
ಬಾಯಾರಿ ಬಳಲುವ
ಬುತ್ತಿ ಹಿಡಿದು
ಹಸಿವಿಗೆ ಹಲಬುವ
ಬೆಪ್ಪುತನಕೆ ಮರುಗಿ
ಬಂದ ನೋಡವ್ವಾ… ನನ್ನ ಗುರು

ಕಣ್ಣೊಳಿತ್ತು
ಕಾರುಣ್ಯದ ಕಡಲು
ಹೃದಯವೋ
ವಾತ್ಸಲ್ಯದ ಒಡಲು
ಮಾತುಗಳೋ
ಚಾಟಿಯ ಏಟು

ಜ್ಞಾನದ ಬಣವೆಗೆ
ಕಿಚ್ಚನು ಹಚ್ಚಿದ
ಭಾವುಕ ಭ್ರಮೆಗೆ
ಬೆಂಕಿಯ ಹಾಕಿದ
ಕಳೆ-ಕೊಳೆ ತುಂಬಿದ
ಮನವ ತೊಳೆಸಿದ
ಕಣ್ಣಿಗೆ ಮೆತ್ತಿದ
ಪೊರೆಗಳ ಹರಿಸಿದ

ಅವಿತಿಹ ಅಹಮಿನ
ಆಟವ ತೋರಿಸಿ
ನಿಜನೆಲೆ ಅರಿಯಲು
ದಾರಿಯ ಮಾಡಿದ
ಹಿಂದಣ ಹಂಗಿನ
ಸಂಗವ ಬಿಡಿಸಿದ
ಮುಂದಣ ಮಾಯೆಯ
ತೆರೆಯನು ಸರಿಸಿದ

ಮಂತ್ರವ ಮರೆಸಿದ
ಮಾತನು ಬಿಡಿಸಿದ
ಮೌನದ ಬಯಲಿಗೆ
ಮಾರ್ಗವ ತೋರಿದ

Previous post ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು
Next post ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ

Related Posts

ನಾನು… ನನ್ನದು
Share:
Poems

ನಾನು… ನನ್ನದು

July 4, 2021 ಜ್ಯೋತಿಲಿಂಗಪ್ಪ
ಅಪ್ಪ ತನ್ನೆಲ್ಲಾ ಆಸೆಗಳ ಸಾಕಿಕೊಂಡೇ ಮಗನ ಬೆಳೆಸಿದ ಮಗ ತನ್ನೆಲ್ಲಾ ಆಸೆ ಇಟ್ಟುಕೊಂಡೇ ಮಗನ ಸಾಕಿದ ಅಪ್ಪನ ಸಾವಿನ ನೆರಳು ಮಗನನು ಮುಟ್ಟದೇ… ಈ ಕತ್ತಲಲಿ ಒಬ್ಬನೇ ಹೋಗುವಾಗ...
…ಬಯಲನೆ ಬಿತ್ತಿ
Share:
Poems

…ಬಯಲನೆ ಬಿತ್ತಿ

August 11, 2025 ಜ್ಯೋತಿಲಿಂಗಪ್ಪ
ಅಲ್ಲಿ ನೇತಾಡುವ ಪಟಗಳೆಲ್ಲಾ ನಿನ್ನೆಯವು ಯಾರಿದ್ದಾರೆ…ಯಾರಿಲ್ಲ…ಯಾರೆಲ್ಲ ಕಣ್ಣೊಳಗಣ ರೂಹು ಕಣ್ಣ ಕೊಲ್ಲದು ಕಂಗಳ ಮರೆಯ ಕತ್ತಲಿಗೆ ಕಂಗಳೇ ಪ್ರಮಾಣ ಪದದ ಅರ್ಥ...

Comments 3

  1. Dr. K.S.Mallesh, Mysuru
    Jun 12, 2025 Reply

    ನಿಮ್ಮ ಕವನ “ಹಾದಿಯ ಹಣತೆ” ( ಅರಿವಿನ ಹಣತೆ ಅಲ್ಲ) ಸರಳ ಭಾಷೆ ಚಿಕ್ಕ ಸಾಲುಗಳಲ್ಲಿ ನಿಮ್ಮ ನಿರಂತರ ಹುಡುಕಾಟದ ದಾರಿಯಲ್ಲಿ ಸಿಕ್ಕ ಗುರುವಿನ ಬಗ್ಗೆ ಹೃದ್ಯವಾಗಿ ಮೂಡಿದೆ.

  2. ಶೋಭಾದೇವಿ, ಧಾರವಾಡ
    Jun 19, 2025 Reply

    ಗುರುವು ನಿಜವಾದ ಆಧ್ಯಾತ್ಮದ ದಾರಿ ತೋರಿದ ಹಾದಿಯ ಹಣತೆ. ಕವನ ತುಂಬಾ ಚೆನ್ನಾಗಿದೆ.

  3. Mate Kasturidevi
    Jun 19, 2025 Reply

    ಹಾದಿಯ ಹಣತೆಯ ಬೆಳಕಲ್ಲಿ ನಿಮ್ಮ ಮನದ ಅಳಲು ಜತೆಗೆ ಅರಸುವ ಧಾವಂತ ನಿಚ್ಚಳವಾಗಿ ಕಾಣಬರುತ್ತಿದೆ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
October 19, 2025
ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
January 10, 2021
ಅನಿಮಿಷ: ಚಿಗುರಿದ ಒಲುಮೆ (4)
ಅನಿಮಿಷ: ಚಿಗುರಿದ ಒಲುಮೆ (4)
December 13, 2024
ಬೆಳಗಿನ ಬೆಳಗು ಮಹಾಬೆಳಗು
ಬೆಳಗಿನ ಬೆಳಗು ಮಹಾಬೆಳಗು
November 1, 2018
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ಬೆಳಕಿನ ಹುಳು
ಬೆಳಕಿನ ಹುಳು
December 9, 2025
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು
April 5, 2026
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
Copyright © 2026 Bayalu