Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಾದಿಯ ಹಣತೆ…
Share:
Poems June 12, 2025 ಕೆ.ಆರ್ ಮಂಗಳಾ

ಹಾದಿಯ ಹಣತೆ…

ಕೈಯಲಿ ಹಿಡಿದು
ಅಲೆಯುತಲಿದ್ದೆ
ಕಣ್ಣಿಗೊತ್ತಿಕೊಂಡು
ಕರಗುತಲಿದ್ದೆ
ಎದೆಗವುಚಿಕೊಂಡು
ಮುದ್ದಾಡುತಲಿದ್ದೆ
ತಲೆಯ ಮೇಲೆ ಹೊತ್ತು
ಬೀಗುತಲಿದ್ದೆ…

ವಚನ ರಾಶಿಯಲಿ
ಅರಸುತಲಿದ್ದೆ
ಹಿರಿಯರ ಮಾತಲಿ
ಹುಡುಕುತಲಿದ್ದೆ
ಯೋಗಸಿದ್ದಿಗಳಿಗೆ
ತವಕಿಸುತಿದ್ದೆ
ಪೂಜೆ-ಪ್ರಾರ್ಥನೆಯಲಿ
ಪರಿತಪಿಸುತಿದ್ದೆ…

ಅಲ್ಲೆಲ್ಲೋ ಮಿಂಚಿದಂತೆ
ಇಲ್ಲೇನೋ ಹೊಳೆದಂತೆ
ಮತ್ತೆಲ್ಲೋ ಸುಳಿದಂತೆ
ಸಿಕ್ಕು ಸಿಗದ
ಬಿಸಿಲ್ಗುದುರೆಯಂತೆ…

ನೀರು ಹಿಡಿದು
ಬಾಯಾರಿ ಬಳಲುವ
ಬುತ್ತಿ ಹಿಡಿದು
ಹಸಿವಿಗೆ ಹಲಬುವ
ಬೆಪ್ಪುತನಕೆ ಮರುಗಿ
ಬಂದ ನೋಡವ್ವಾ… ನನ್ನ ಗುರು

ಕಣ್ಣೊಳಿತ್ತು
ಕಾರುಣ್ಯದ ಕಡಲು
ಹೃದಯವೋ
ವಾತ್ಸಲ್ಯದ ಒಡಲು
ಮಾತುಗಳೋ
ಚಾಟಿಯ ಏಟು

ಜ್ಞಾನದ ಬಣವೆಗೆ
ಕಿಚ್ಚನು ಹಚ್ಚಿದ
ಭಾವುಕ ಭ್ರಮೆಗೆ
ಬೆಂಕಿಯ ಹಾಕಿದ
ಕಳೆ-ಕೊಳೆ ತುಂಬಿದ
ಮನವ ತೊಳೆಸಿದ
ಕಣ್ಣಿಗೆ ಮೆತ್ತಿದ
ಪೊರೆಗಳ ಹರಿಸಿದ

ಅವಿತಿಹ ಅಹಮಿನ
ಆಟವ ತೋರಿಸಿ
ನಿಜನೆಲೆ ಅರಿಯಲು
ದಾರಿಯ ಮಾಡಿದ
ಹಿಂದಣ ಹಂಗಿನ
ಸಂಗವ ಬಿಡಿಸಿದ
ಮುಂದಣ ಮಾಯೆಯ
ತೆರೆಯನು ಸರಿಸಿದ

ಮಂತ್ರವ ಮರೆಸಿದ
ಮಾತನು ಬಿಡಿಸಿದ
ಮೌನದ ಬಯಲಿಗೆ
ಮಾರ್ಗವ ತೋರಿದ

Previous post ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು
Next post ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ

Related Posts

ಎರಡು ಎಲ್ಲಿ?
Share:
Poems

ಎರಡು ಎಲ್ಲಿ?

October 5, 2021 ಕೆ.ಆರ್ ಮಂಗಳಾ
ನಾನು ದ್ವೈತವೋ ಅದ್ವೈತವೋ ಹೀಗೊಂದು ಪ್ರಶ್ನೆ ಎದ್ದದ್ದೇ ತಡ ನಡೆದಿತ್ತು ಒಳಗೊಂದು ತಾಕಲಾಟ- ಒಂದೆಡೆ- ನೆನಪುಗಳಿಗೆ, ಕನಸುಗಳಿಗೆ ಪ್ರೀತಿಯ ಕನವರಿಕೆಗಳಿಗೆ ಎದೆಯ ಹಂಬಲಗಳಿಗೆಲ್ಲ...
ನೆಲದ ನಿಧಾನ
Share:
Poems

ನೆಲದ ನಿಧಾನ

April 29, 2018 ಕೆ.ಆರ್ ಮಂಗಳಾ
ನನ್ನ ಶರಣರು ಅವರು ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Comments 3

  1. Dr. K.S.Mallesh, Mysuru
    Jun 12, 2025 Reply

    ನಿಮ್ಮ ಕವನ “ಹಾದಿಯ ಹಣತೆ” ( ಅರಿವಿನ ಹಣತೆ ಅಲ್ಲ) ಸರಳ ಭಾಷೆ ಚಿಕ್ಕ ಸಾಲುಗಳಲ್ಲಿ ನಿಮ್ಮ ನಿರಂತರ ಹುಡುಕಾಟದ ದಾರಿಯಲ್ಲಿ ಸಿಕ್ಕ ಗುರುವಿನ ಬಗ್ಗೆ ಹೃದ್ಯವಾಗಿ ಮೂಡಿದೆ.

  2. ಶೋಭಾದೇವಿ, ಧಾರವಾಡ
    Jun 19, 2025 Reply

    ಗುರುವು ನಿಜವಾದ ಆಧ್ಯಾತ್ಮದ ದಾರಿ ತೋರಿದ ಹಾದಿಯ ಹಣತೆ. ಕವನ ತುಂಬಾ ಚೆನ್ನಾಗಿದೆ.

  3. Mate Kasturidevi
    Jun 19, 2025 Reply

    ಹಾದಿಯ ಹಣತೆಯ ಬೆಳಕಲ್ಲಿ ನಿಮ್ಮ ಮನದ ಅಳಲು ಜತೆಗೆ ಅರಸುವ ಧಾವಂತ ನಿಚ್ಚಳವಾಗಿ ಕಾಣಬರುತ್ತಿದೆ

Leave a Reply to Mate Kasturidevi Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮೂರನೇ ಕಣ್ಣು: ಅನಿಮಿಷ(11)
ಮೂರನೇ ಕಣ್ಣು: ಅನಿಮಿಷ(11)
October 19, 2025
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಪ್ರಭುವಿನ ಗುರು ಅನಿಮಿಷ -2
ಪ್ರಭುವಿನ ಗುರು ಅನಿಮಿಷ -2
September 14, 2024
ಪ್ರಭುವಿನ ಗುರು ಅನಿಮಿಷ -3
ಪ್ರಭುವಿನ ಗುರು ಅನಿಮಿಷ -3
October 21, 2024
WHO AM I?
WHO AM I?
June 17, 2020
ದಾಸೋಹ ತತ್ವ
ದಾಸೋಹ ತತ್ವ
January 10, 2021
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ಹೀಗೊಂದು ಸಂವಾದ…
ಹೀಗೊಂದು ಸಂವಾದ…
April 6, 2023
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
Copyright © 2026 Bayalu