Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗೇಣು ದಾರಿ
Share:
Poems July 10, 2023 ಜ್ಯೋತಿಲಿಂಗಪ್ಪ

ಗೇಣು ದಾರಿ

ಮುಂದಿನ ಕಾಲು ಹಿಂದಕೆ ಬಾರದೇ
ಹಿಂದಿನ ಕಾಲು ಮುಂದಕೆ ಬಾರದೇ
ಹಿಂದು ಮುಂದು ಸಂತೆ ದಾರಿ

ತನ್ನರಿವೇ ತನ್ನ ಕುರುಹು
ತನ್ನ ಕುರುಹೇ ತನ್ನರಿವು
ಹಿಂದು ಮುಂದಾದು

ಪೂಜಿಸಿದೆ ಭಕ್ತಿ ಬಾರದೇ
ಭಕ್ತಿ ಬಾರದೇ ಪೂಜಿಸದಾದೆ

ಇದೇನು ಬೆಂಕಿಯೋ
ಒಳಗೆ ಸುಡುವುದು ಹೊರಗೆ ಉರಿಯುವುದು

ಕರುಳಿಲ್ಲ ಕಣ್ಣಿಲ್ಲ
ತಿಂದುದೆಲ್ಲವ ಹಿಂಡುವುದು

ಇರುವ ಎರಡು ಕಾಲು
ಹಿಂದು ಮುಂದಾದರೆ ನಡೆ

ಇನ್ನೇನು ಇನ್ನೇನೋ
ಒಂದೇ ಗೇಣು ಈ ದಾರಿ…

Previous post ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
Next post ನಿಜ ನನಸಿನ ತಾವ…
ನಿಜ ನನಸಿನ ತಾವ…

Related Posts

ಮಣ್ಣಲ್ಲಿ ಹುಟ್ಟಿ…
Share:
Poems

ಮಣ್ಣಲ್ಲಿ ಹುಟ್ಟಿ…

February 6, 2025 ಜ್ಯೋತಿಲಿಂಗಪ್ಪ
ಬರಿದಾಗದ ಕನಸುಗಳು ಮರೆವಿಗೆ ಸರಿಯವೇ.. ಕನಸುಗಳ ನುಂಗಿ ನುಂಗಿ ಕಣ್ಣೇನೂ ಬತ್ತವು ತುಂಬಲು ಆಸೆಯೇ ಇಲ್ಲ ಖಾಲಿ ಆಗುವುದು ಏನೂ ಇರದು ಆಸೆ ಹೊತ್ತ ಮನವಿಲ್ಲ ನಿರಾಸೆ ಎಂಬುದೇನೋ...
ಸಂಭ್ರಮಿಸುವೆ ಬುದ್ದನಾಗಿ
Share:
Poems

ಸಂಭ್ರಮಿಸುವೆ ಬುದ್ದನಾಗಿ

August 11, 2025 ಜಬೀವುಲ್ಲಾ ಎಂ.ಅಸದ್
ಓಡೆದಿರುವುದು ಕನ್ನಡಕದ ಗಾಜಷ್ಟೆ ಲೋಕ ಎಂದಿನಂತೆಯೇ ಇದೆ ಮುರಿದಿರುವುದು ನಿನ್ನ ಮನಸ್ಸಷ್ಟೆ ಸೇತುವೆಗಳು ಗಟ್ಟಿಮುಟ್ಟಾಗಿಯೇ ಇವೆ ನೀ ನಡೆವ ದಾರಿ ನಿನ್ನೋಬ್ಬನದಲ್ಲ ಎಲ್ಲರದೂ...

Comments 3

  1. BasanGowda Patil
    Jul 12, 2023 Reply

    ಗೇಣು ದಾರಿಯ ನಡಿಗೆ ಜೀವನ ಪೂರ್ತಿ ನಡೆದರೂ ಸಾಗುವುದಿಲ್ಲವಲ್ಲಾ!

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Jul 13, 2023 Reply

      ಹೌದಲ್ವಾ… ನಿಮ್ಮ ಓದಿಗೆ ಶರಣು.

  2. Mahantesh Murakonda
    Jul 17, 2023 Reply

    ಗೇಣು ದಾರಿ ಚಲಿಸಲು ಹಿನ್ನಡೆಯಬೇಕೋ, ಮುಂದಕ್ಕೆ ಚಲಿಸಬೇಕೋ… ಜಿಜ್ಞಾಸೆಗೆ ಹಚ್ಚುವ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ
November 7, 2020
ಶರಣನಾಗುವುದು…
ಶರಣನಾಗುವುದು…
February 10, 2023
ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
June 5, 2021
ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?
March 9, 2023
ಅನಿಶಾ…
ಅನಿಶಾ…
September 6, 2026
ಸಾವಿಲ್ಲದ ಝೆನ್ ಗುರು-2
ಸಾವಿಲ್ಲದ ಝೆನ್ ಗುರು-2
May 10, 2022
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
Copyright © 2026 Bayalu