Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿಜ ನನಸಿನ ತಾವ…
Share:
Poems July 10, 2023 ಕೆ.ಆರ್ ಮಂಗಳಾ

ನಿಜ ನನಸಿನ ತಾವ…

ಕಣ್ಣು ಮುಚ್ಚಿದಾಗ ಬರುವ ಕನಸಿಗೂ
ಕಣ್ಬಿಟ್ಟಾಗಿನ ದಿನದ ಚಿತ್ರಾವಳಿಗೂ
ಏನಿಹುದು ಅಂತರ?
ನಗು, ಅಳು, ನೋವು, ಸಂಕಟ…
ಅನುಭವದಲ್ಲಿ ಅದ್ದಿ ತೆಗೆದಂತೆ
ಎಲ್ಲ ಎದುರೆದುರೇ ನಡೆದಂತೆ!
ಹೊಯ್ದಾಟಗಳ ಹಗಲ ನನಸು,
ಕನವರಿಕೆಗಳಾ ಇರುಳ ಕನಸು

ನನಸಂತೆ ಕನಸಲೂ ಅದೇ ಅದೇ
ಒಡಲ ಹಸಿವು, ಹುಸಿಗಳು
ಚಡಪಡಿಕೆಗಳು, ಹುಡುಕಾಟಗಳು
ಅಸಹಾಯಕತೆಯ ತಡವರಿಕೆಗಳು
ಇಲ್ಲಿರುವವರೆಲ್ಲಾ ಅಲ್ಲಿ ಸಿಗುತ್ತಾರೆ
ಅಲ್ಲಿಯವರೆಲ್ಲಾ ಇಲ್ಲಿ ಕಾಣುತ್ತಾರೆ
ಸಂಬಂಧಗಳು, ವಿರೋಧಗಳು,
ದಡಗಳೆರಡರ ಮೇಲೂ ನಿತ್ಯ ಹರಿದಾಡುತ್ತವೆ

ಕನಸು-ನನಸಿನ ಮೋಡಿಯಾಟದಲಿ
ನಾಳೆಗಳು ನಿನ್ನೆಗಳಾಗುತಿವೆ
ಮಲಗಿದಾಗ ದಿನ ಮರೆಯಾಗುತ್ತದೆ
ಎಚ್ಚರಾದಾಗ ಕನಸು ಸರಿಯುತ್ತದೆ
ಯಾವುದು ದಿಟ, ಯಾವುದು ಸಟೆ?
ಅಲ್ಲಿ ತೋರಿದ್ದೋ, ಇಲ್ಲಿ ಕಂಡದ್ದೋ?

ಅರಿವಾಗಿ ಎದೆಗಿಳಿದ ಗುರು ಹೇಳಿದ-
ಎರಡೂ ಸುಳ್ಳಲ್ಲ, ನಿಜದಿರುವೂ ಅಲ್ಲಿಲ್ಲ
ವಿಷಮ ವಿಷಯಗಳ ಹಗಲಿನ ಜಾತ್ರೆ
ಸಿಗದ ಬೇಗುದಿಗಳ ಇರುಳಿನ ಸಂತೆ
ಎಚ್ಚರವಾಗದ ಅಮಲಿನ ಬದುಕಿಗೆ
ಸತ್ಯದ ನೆಲೆಯು ಕಾಣುವುದೆ?
ಕನಸೊಳಗೊಂದು ಕನಸನು ಕಟ್ಟಲು
ನಿಜ ನನಸಿನ ಮರ್ಮ ತಿಳಿಯುವುದೆ?

ನಿನ್ನ ಕದಳಿಯ ನೀ ದಾಟಲೇ ಬೇಕು
ನಿನ್ನ ತಾವಕೆ ನೀ ಸೇರಲೇ ಬೇಕು
ಜಂಗಮ ಚಲನೆಯ ಲಾಸ್ಯವನರಿಯಲು
ಅಚಲವಾಗಿ ನೀ ನಿಲ್ಲಲೇ ಬೇಕು.

Previous post ಗೇಣು ದಾರಿ
ಗೇಣು ದಾರಿ
Next post ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2

Related Posts

ಹುಡುಕಿಕೊಡು ಗುರುವೇ…
Share:
Poems

ಹುಡುಕಿಕೊಡು ಗುರುವೇ…

July 4, 2022 ಕೆ.ಆರ್ ಮಂಗಳಾ
ದೇಹದಲ್ಲೋ ಭಾವದಲ್ಲೋ ಎದೆಯ ಒಳಗೋ ತಲೆಯ ಒಳಗೋ ಕಳೆದುಹೋಗಿದ್ದೇನೆ ನಾನು ಕಳೆದುಹೋಗಿದ್ದೇನೆ… ಕುಲದಲ್ಲೋ ಛಲದಲ್ಲೋ ಹಠದಲ್ಲೋ ಅಹಮಿನಲ್ಲೋ ಸೇರಿಹೋಗಿದ್ದೇನೆ ನಾನು...
ಬೆಳಕಲಿ ದೀಪ
Share:
Poems

ಬೆಳಕಲಿ ದೀಪ

December 8, 2021 ಜ್ಯೋತಿಲಿಂಗಪ್ಪ
ಅಕಾಲ; ಹಗಲು ಕನಸು ಬೆಳಕೆಂಬುದೇನೆಂದರಿಯದೆ ಕತ್ತಲು; ಬೆಳಕಾಗಿತ್ತು ಬಯಲ ಬಂಧಿಸಲು ಮೋಡದಿಂದಿಳಿಯುವ ನೀರ ಸೂತ್ರ.. ಈ ಜ್ಞಾನದ ಕೇಡು ನನಗೆ ಕಣ್ಣಲ್ಲಿ ಕತ್ತಲಿರಿಸಿದೆ ಬೆಳಕಲಿ ದೀಪ...

Comments 1

  1. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Jul 13, 2023 Reply

    ಕಣ್ಣೆಚ್ಚರದಲಿ ಕನಸ ನೋಡಬೇಕು.. ಎಂಬುದನ್ನು ಎಷ್ಟು ಸರಳವಾಗಿ ಹೇಳಿರುವಿರಿ.
    ಓದುವುದೇ ಒಂದು ಚೆಂದ .

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
ಗಜಲ್…
ಗಜಲ್…
February 16, 2026
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
‘ಅಲ್ಲಮ’ ಎಂಬ ಹೆಸರು
‘ಅಲ್ಲಮ’ ಎಂಬ ಹೆಸರು
August 6, 2022
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
ಮುಖ- ಮುಖವಾಡ
ಮುಖ- ಮುಖವಾಡ
February 7, 2021
ಅವಿರಳ ಅನುಭಾವಿ-4
ಅವಿರಳ ಅನುಭಾವಿ-4
June 17, 2020
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
Copyright © 2026 Bayalu