Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬಿಂಬ-ಪ್ರತಿಬಿಂಬ
Share:
Poems February 5, 2020 ಜ್ಯೋತಿಲಿಂಗಪ್ಪ

ಬಿಂಬ-ಪ್ರತಿಬಿಂಬ

ನೀನು
ಅಲ್ಲಿ ಉಂಟೆಂದು
ನಾನು
ಇಲ್ಲಿ ತೆವಳಿ ತೆವಳಿ ಬಳಲಿದೆ
ನೀನು ಎಲ್ಲಿರುವೆ
ಎಂಬುದು ನನ್ನ ಕಣ್ಣರಿವು
ಎಂಬುದ
ನಾನಲ್ಲದೆ ನೀನರಿದೆಯಾ ಹೇಳೇ
ಅಕ್ಕಾ
ಬೆಳಕ ತಿಂದಲ್ಲದೆ ಕನ್ನಡಿಯಲಿ ಉದಯಿಸದು ಬಿಂಬ
ಅರಿದ ಅರಿವನು ಉಪಮಿಸಬಾರದು

ತನ್ನರಿವ ತಾನುಣದೆ ಅನ್ಯರಿಗೆ
ಉಣಬಡಿಸುವ ಕೇಡು ನನದಲ್ಲ

ತನ್ನರಿವ ತಾನರಿಯದಾ ಕತ್ತಲು
ಇಳಿದು ಬಾರದಾ ಅರಿವು ತಾನರಿಯದೆ

ಒಳಗಣ ಜ್ಯೋತಿಯೂ
ಹೊರಗಣ ಕತ್ತಲೂ ಸಮನಿಸವು.

****************

ಆ ಮರದ ಕಾಯಲಿ ನೀರು
ತುಂಬಿದೆ ಹೇಗೆಂಬುದ ಎಚ್ಚರದಲಿ
ಹೇಳು ಪುರಾಣ ಕಟ್ಟಿಡು

ಅರಿಯುವ ಅರಿವ ಕಿತ್ತಿಡಲಾರೆ
ಒಣಹುಲ್ಲಿಗೆ ಬೆಂಕಿ ಇಟ್ಟು
ಹಸಿ ಹುಲ್ಲಲಿ ನಂದಿಸದಿರು

ನನ್ನ ಬಿಂಬ ನಿನ್ನಲಿ ಮೂಡದಿರೆ
ನಿನ್ನ ಕನ್ನಡಿ ಎಂಬುವವರು
ಯಾರೇ ಅಕ್ಕಾ
ನಾನಲ್ಲವೇ ನಿನ್ನ ಬಿಂಬ

ಇರಲಿ ಈಗ ಹೇಳು
ಲೌಕಿಕ ಪಾರಮಾರ್ಥಿಕ
ಜ್ಞಾನ ಕರ್ಮ
ಯಾವುದು

ನನ್ನ ನೆರಳು ನನಗಂಟದು
ಕಣ್ಣ ಮುಚ್ಚದು ಕನ್ನಡಿ ಬಿಂಬ
ಕಣ್ಣ ಮುಚ್ಚಿದರೆ ಕಾಣದು ಬಿಂಬ

ನನ್ನ ಹುಟ್ಟಿನೊಂದಿದೆ ಈ ಜೀನ್ಸ್
ನಕ್ಷತ್ರ ಸುಡುವ ಕಣ್ಣ ಹೊಳಪು.

Previous post ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
Next post ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ

Related Posts

ಕಾಣದ ಬೆಳಕ ಜಾಡನರಸಿ…
Share:
Poems

ಕಾಣದ ಬೆಳಕ ಜಾಡನರಸಿ…

December 13, 2024 ಜಬೀವುಲ್ಲಾ ಎಂ.ಅಸದ್
ಮರೆತ ಇಳಿ ಸಂಜೆಯೊಂದು ಮುಂಜಾನೆಗೆ ಕಾಡುವಾಗ ಕಾಫಿ ಮುಗಿದ ಕಪ್ಪಿನಲಿ ತುಂಬಿ ಚೆಲ್ಲಿದೆ ವೈರಾಗ್ಯ ಶೂನ್ಯ ಹೀರಿದವನೆ ವಶ ಕಾಲು ಮುರಿದ ಕುರ್ಚಿಯ ಮೇಲು ಕಾಲಿನ ಮೇಲೆ ಕಾಲು ಹಾಕಿ...
ನನ್ನೊಳಗಿನ ನೀನು
Share:
Poems

ನನ್ನೊಳಗಿನ ನೀನು

April 29, 2018 ಕೆ.ಆರ್ ಮಂಗಳಾ
ನಿನ್ನೆ ನಾಳೆಯ ನಡುವೆ ಜೀವಯಾನ ಮಾತು-ಮೌನದ ನಡುವೆ ಭಾವಯಾನ… ಅಲ್ಲಿಷ್ಟು ಇಲ್ಲಿಷ್ಟು ಆಗಸದ ಅಗಲಕ್ಕೂ ಹರಿದ ಹತ್ತಿಯ ತುಂಡು ಮನದ ಭಿತ್ತಿಯ ಮೇಲೆ ಅಸ್ಪಷ್ಟ ಹೆಜ್ಜೆ ಗುರುತು ಕಳವಳದ...

Comments 2

  1. Geetha Jayraj
    Feb 6, 2020 Reply

    ಒಳಗಣ ಜ್ಯೋತಿಯೂ, ಹೊರಗಣ ಕತ್ತಲು ಸಮನಿಸವು! ಆಹಾ!!

  2. ಕವಿತಾ ಲಕ್ಷ್ಮೇಶ್ವರ
    Feb 9, 2020 Reply

    ಮತ್ತೆ ಕವನಗಳು ಬಯಲಿನಲ್ಲಿ ಶುರುವಾಗಿದ್ದು ತುಂಬಾ ಖುಷಿಯಾಯಿತು. ಇಲ್ಲಿಯ ಕವನಗಳು ವಿಶಿಷ್ಟವಾಗಿರುತ್ತವೆ. ಹೊಸ ದಿಕ್ಕಿನತ್ತ ಬೊಟ್ಟು ಮಾಡುತ್ತವೆ.

Leave a Reply to ಕವಿತಾ ಲಕ್ಷ್ಮೇಶ್ವರ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ಗುರುವಂದನೆ
ಗುರುವಂದನೆ
October 13, 2022
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ಶಿವನ ಕುದುರೆ…
ಶಿವನ ಕುದುರೆ…
May 1, 2019
ಹುಡುಕಾಟ
ಹುಡುಕಾಟ
July 21, 2024
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
October 21, 2024
Copyright © 2026 Bayalu