
ಕೊನೆಯಿರದ ಚಕ್ರದ ಉರುಳು
ಬೆಳಗು ಕತ್ತಲಿನೊಳಗೊ
ಕತ್ತಲು ಬೆಳಗಿನೊಳಗೊ
ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ
ಎಲ್ಲಾ ಬಯಲಾಗಿ
ಬಯಲೊಳಗೊ…
ಸತ್ಯ ಸುಳ್ಳಿನೊಳಗೊ
ಸುಳ್ಳು ಸತ್ಯದೊಳಗೊ
ಹತ್ತಿ ಉರಿಯುತ್ತಿರೆ ಬಯಕೆ
ನೋವಿನ ಹೊಗೆ ಮೆತ್ತಿ ಆಗಸಕೆ
ಮನದ ಭಿತ್ತಿಯೊಳಗೊ…
ಹುಟ್ಟು ಸಾವಿನೊಳಗೊ
ಸಾವು ಹುಟ್ಟಿನೊಳಗೊ
ಅಳಿದು ಉಳಿವ ರೀತಿ
ಎಲ್ಲಾ ಕಳೆವ ಭೀತಿ
ಕೊನೆಯಿರದ ಚಕ್ರದ ಉರುಳು
ಜಗದ ಬಂಧನದೊಳಗೊ…
Comments 2
Nagesh Sali
Apr 20, 2025Greetings! I’ve been reading your blog for a while now. The articles and the poems are of real quality. Just wanted to say keep up the excellent work!
Lavanya Arkavathi
Apr 28, 2025ಸತ್ಯ- ಸುಳ್ಳು; ಬೆಳಗು-ಕತ್ತಲು: ಹುಟ್ಟು-ಸಾವು ಇವುಗ ನಡುವೆ ಬದುಕಿನ ತೇರು! ಕವನ ಚೆನ್ನಾಗಿದೆ.