Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಪ್ಪನಿಲ್ಲದ ಮನೆ
Share:
Poems January 10, 2021 ಕೆ.ಆರ್ ಮಂಗಳಾ

ಅಪ್ಪನಿಲ್ಲದ ಮನೆ

ಅಪ್ಪನಿಲ್ಲದ ಮನೆ
ಎಲ್ಲ ಇದ್ದೂ ಭಣಗುಡುತ್ತಿದೆ.
ಎದೆಯ ಬೆಳಕೇ ಆರಿ ಹೋದಂತೆ
ಮನದಲ್ಲಿ ಗಾಢ ಕಾರ್ಗತ್ತಲೆ

ಅವ್ವ ಹೇಳಿಕೊಂಡು ಹಗುರಾಗುತ್ತಿದ್ದಳು
ಅಪ್ಪ ಮೌನ ಹೊದ್ದು ನಿರ್ಲಿಪ್ತನಾಗುತ್ತಿದ್ದ
ಅವ್ವನ ಮಾತಿಗೆ ಕಿವಿಯಾದೆವು
ಅಪ್ಪನ ಮೌನಕ್ಕೆ ಕಣ್ಣಾದೆವು…

ಕೊನೆಗೆ ಮಾತು ಮರೆತ ಅಪ್ಪ
ನೆನಪುಗಳನ್ನೂ ತೂರಿಬಿಟ್ಟ
ಬಿಸಿ ರೊಟ್ಟಿಗೆ, ರಾಗಿ ಗಂಜಿಗೆ,
ಹಸಿವು- ಬಾಯಾರಿಕೆಗೆ,
ರಾತ್ರಿ- ಬೆಳಗುಗಳಿಗೆ ಸ್ಪಂದಿಸದೇ
ತನ್ನೊಳಗೆ ಇಳಿಯುತ್ತಾ
ಮೌನವಾಗಿ
ಕಣ್ಣು ತೆರೆಯುವುದನ್ನೇ ನಿಲ್ಲಿಸಿದ…
ಜೋಪಾನ ಮಾಡಿದ ಹೆಂಡತಿ,
ಒಡಲ ಮಕ್ಕಳು, ಮೊಮ್ಮಕ್ಕಳು,
ಜೀವದಂತಿದ್ದ ಗೆಳೆಯರು,
ಹತ್ತಿರದ ಬಸವ ಬಂಧುಗಳು,
ದೂರದ ಬಳಗಕ್ಕೆ ಕರೆ ಮಾಡಲು
ರೀಚಾರ್ಜ್ ಮಾಡಿಸಿಕೊಳ್ಳುತ್ತಿದ್ದ ಮೊಬೈಲ್,
ಬಸವ ಟಿವಿ ನೋಡಲು
ಪಕ್ಕದಲ್ಲೇ ಇಟ್ಟುಕೊಳ್ಳುತ್ತಿದ್ದ ರಿಮೋಟ್,
ಕೊನೆಗೆ ಎದೆಯ ಮೇಲಿನ
ಲಿಂಗವನ್ನೂ ಮರೆತು ಬಿಟ್ಟ…

ಮುಂಜಾನೆಯ ಅಂಗಳ,
ನಡುಮನೆಯ ಕುರ್ಚಿ,
ಕೋಣೆಯ ಮಂಚ,
ಮೂಲೆಯಲ್ಲಿನ ಕೋಲು,
ಟೀಪಾಯಿ ಮೇಲಿನ ಕನ್ನಡಕ,
ಸಿಂಕ್ ಪಕ್ಕದಲ್ಲಿನ ಹಲ್ಲಿನ ಸೆಟ್,
ಕಾಯುತ್ತಿರುವಂತಿವೆ ಅಪ್ಪನಿಗಾಗಿ…

ಇದ್ದಾಗ ಅಪ್ಪನ ಜಗತ್ತಿನಲ್ಲಿ
ತೂರಿಕೊಳ್ಳದ ಸಂಕಟ,
ಮಸಣದ ಮಣ್ಣಲ್ಲಿ
ವಿಭೂತಿ ಬೂದಿಯ ಹಚ್ಚಿಸಿಕೊಳ್ಳುತ್ತಿದ್ದ
ಅಪ್ಪನ ಶಾಂತ ಮುಖ
ಮಿಸುಕಾಡುತ್ತಿದೆ ಮನದಲ್ಲಿ ಒಂದೆ ಸಮ
ಬಯಲಲ್ಲಿ ಬಯಲಾದ ಅಪ್ಪ
ಪದಾರ್ಥದಿಂದ ಪ್ರಸಾದಕ್ಕೆ
ಎಲ್ಲೆ ದಾಟಿದ ಜೀವ
ಮಾತನಾಡದೆಯೇ
ಕಲಕುತಿದೆ ಎದೆಯ ಭಾವ
ಅಪ್ಪನಿಲ್ಲದ ಮನೆ
ಹೇಗೆ ಮರೆಯುವುದು ನೋವ?

Previous post ಇದ್ದಷ್ಟೇ…
ಇದ್ದಷ್ಟೇ…
Next post ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ

Related Posts

ಕಾಯದೊಳಗಣ ಬಯಲು
Share:
Poems

ಕಾಯದೊಳಗಣ ಬಯಲು

November 7, 2020 ಜ್ಯೋತಿಲಿಂಗಪ್ಪ
ಈ ಬಯಲು ಗುರುತಿಸಲಾರೆ ನನ್ನ ಕಣ್ಣ ಎದುರು ನಾನು ಬಯಸುವ ರೂಹು ಇಲ್ಲ ಕಣ್ಣು ಹೇಳಿದುದು ಸುಳ್ಳೇ ನೀ ಬಿಟ್ಟ ಉಸಿರಲೊಂದು ದನಿ ಇದೆ ನಾ ಕೇಳಲಾರೆ ಉಸಿರು ಒಳಗಣ ದನಿ ಉಸಿರು ನುಂಗಿತು...
ಈ ಬಳ್ಳಿ…
Share:
Poems

ಈ ಬಳ್ಳಿ…

October 21, 2024 ಜ್ಯೋತಿಲಿಂಗಪ್ಪ
ಗಾಳಿ ಉರಿಸುವುದು ಆರಿಸುವುದು ದೀಪ ಬೆಳಗಿಸುವುದು ಯಾರು…? ನಾನೂ ಒಂದು ದೀಪ ದ್ವೀಪದ ದಡ ಕಾಯುತ್ತಾ ಕಾಯುತ್ತಾ ಅಲೆ ಎಣಿಸುತಿರುವೆ ಈ ಸಂಖ್ಯೆ ಮೂರನ್ನು ದಾಟದೇ… ಈ...

Comments 1

  1. ಪಂಕಜಾ
    Jan 14, 2021 Reply

    ಎರಡು ವರ್ಷಗಳ ಹಿಂದೆ ನಾನೂ ತಂದೆಯನ್ನು ಕಳೆದುಕೊಂಡೆ, ಇದೇ ನೋವನ್ನು ಅನುಭವಿಸಿದೆ, ಓದುತ್ತಾ ಕಣ್ಣು ಹನಿಯಾದವು.

Leave a Reply to ಪಂಕಜಾ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗುರುಪಥ
ಗುರುಪಥ
January 4, 2020
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
ಶಬ್ದದೊಳಗಣ ನಿಃಶಬ್ದ…
ಶಬ್ದದೊಳಗಣ ನಿಃಶಬ್ದ…
April 11, 2025
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ಹುಲಿ ಸವಾರಿ…
ಹುಲಿ ಸವಾರಿ…
June 10, 2023
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
ಒಂದಷ್ಟು ಸರಳ ಸಲಹೆಗಳು…
ಒಂದಷ್ಟು ಸರಳ ಸಲಹೆಗಳು…
June 10, 2023
ಆಸರೆ
ಆಸರೆ
August 6, 2022
Copyright © 2025 Bayalu