Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿನ್ನೆ-ಇಂದು
Share:
Poems May 10, 2022 ಕೆ.ಆರ್ ಮಂಗಳಾ

ನಿನ್ನೆ-ಇಂದು

ನಿನ್ನೆ-

ಬೆಳಗ ಕಾಣದ ಮಸುಕು
ಚಿತ್ತದ ಜಾಡ್ಯ, ಮರೆವಿನ ಬಾಧೆ
ಬೆಂಬಿಡದ ಕಾಮನೆಗಳಲಿ
ಬಂಧಿಯಾಗಿದೆ ಜೀವ
ಬಿಡಿಸು ಗುರುವೆ ಇದರ ಪ್ರವರ…

ಇಂದು-

ಬೆಳಕ ಕೊಡುತಿಹ ಆ ದೀಪ
ಯಾವುದಕೆ ಅಂಟಿದೆ?
ಹಣತೆಗೋ, ಬತ್ತಿಗೋ,
ಎಣ್ಣೆಗೋ, ಗಾಳಿಗೋ…
ಇಲ್ಲಾ ನೋಡುವ ಕಣ್ಣ ಪಾಪೆಗೋ?

ಈ ಪ್ರಾಣ ಅದಾವುದಕೆ
ಅಂಟಿಕೊಂಡಿದೆ…
ದೇಹಕ್ಕೋ, ಉಸಿರಿಗೋ,
ನೀರಿಗೋ, ಸೇವಿಸುವ ಆಹಾರಕೋ
ಇಲ್ಲಾ ಒಳಗಣ ಪರಿಕರಗಳಿಗೋ…?

ಆ ಬೆಳಕಿನಂತೆ
ಈ ಪ್ರಾಣಕ್ಕೂ ಅಂಟಿಗೂ ಯಾವ ನಂಟೂ ಇಲ್ಲ…

ದೀಪ ಹಣತೆಯಲ್ಲಿ
ಜೀವ ದೇಹದಲ್ಲಿ
ಬಂಧಿಗಳೇ ಅಲ್ಲಾ!
ಅದು ಉರಿಯುತಲೇ ಬೆಳಗುವ…
ಇದು ಆಗುತಲೇ ಜೀವಿಸುವ…
ಸಹಜ ಪ್ರಕೃತಿಯ ಸೊಬಗು!
ಆಹಾ! ಎಂತಹ ಬೆಡಗು!!

Previous post ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
Next post ಹಿರಿಯರ ಹಾದಿ…
ಹಿರಿಯರ ಹಾದಿ…

Related Posts

ಸಂಭ್ರಮಿಸುವೆ ಬುದ್ದನಾಗಿ
Share:
Poems

ಸಂಭ್ರಮಿಸುವೆ ಬುದ್ದನಾಗಿ

August 11, 2025 ಜಬೀವುಲ್ಲಾ ಎಂ.ಅಸದ್
ಓಡೆದಿರುವುದು ಕನ್ನಡಕದ ಗಾಜಷ್ಟೆ ಲೋಕ ಎಂದಿನಂತೆಯೇ ಇದೆ ಮುರಿದಿರುವುದು ನಿನ್ನ ಮನಸ್ಸಷ್ಟೆ ಸೇತುವೆಗಳು ಗಟ್ಟಿಮುಟ್ಟಾಗಿಯೇ ಇವೆ ನೀ ನಡೆವ ದಾರಿ ನಿನ್ನೋಬ್ಬನದಲ್ಲ ಎಲ್ಲರದೂ...
…ಬಯಲನೆ ಬಿತ್ತಿ
Share:
Poems

…ಬಯಲನೆ ಬಿತ್ತಿ

August 11, 2025 ಜ್ಯೋತಿಲಿಂಗಪ್ಪ
ಅಲ್ಲಿ ನೇತಾಡುವ ಪಟಗಳೆಲ್ಲಾ ನಿನ್ನೆಯವು ಯಾರಿದ್ದಾರೆ…ಯಾರಿಲ್ಲ…ಯಾರೆಲ್ಲ ಕಣ್ಣೊಳಗಣ ರೂಹು ಕಣ್ಣ ಕೊಲ್ಲದು ಕಂಗಳ ಮರೆಯ ಕತ್ತಲಿಗೆ ಕಂಗಳೇ ಪ್ರಮಾಣ ಪದದ ಅರ್ಥ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೋಟದ ಕೂಟ…
ನೋಟದ ಕೂಟ…
May 10, 2023
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ಲಿಂಗಪೂಜೆ – ಜಂಗಮಸೇವೆ
ಲಿಂಗಪೂಜೆ – ಜಂಗಮಸೇವೆ
March 12, 2022
ಗುರು ಲಿಂಗ ಜಂಗಮ…
ಗುರು ಲಿಂಗ ಜಂಗಮ…
February 10, 2023
ನೆಲದ ನಿಧಾನ
ನೆಲದ ನಿಧಾನ
April 29, 2018
ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
May 6, 2020
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
August 11, 2025
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ಮತ್ರ್ಯಲೋಕದ ಮಹಾಮನೆ
ಮತ್ರ್ಯಲೋಕದ ಮಹಾಮನೆ
January 15, 2026
ದಾರಿ ಬಿಡಿ…
ದಾರಿ ಬಿಡಿ…
December 6, 2020
Copyright © 2026 Bayalu