Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುವೆಂಬೋ ಬೆಳಗು…
Share:
Poems February 6, 2025 ಕೆ.ಆರ್ ಮಂಗಳಾ

ಗುರುವೆಂಬೋ ಬೆಳಗು…

ಒಳಗಿರುವುದೆಲ್ಲವೂ
ಕೂಡಿಸಿಟ್ಟುಕೊಂಡದ್ದೇ
ಬುದ್ಧಿ ಬಲಿತಾಗಿನಿಂದ
ಗೊತ್ತಿದ್ದೋ… ಇಲ್ಲದೆಯೋ

ನನಗೆ ನೆನಪಿದೆ
ಕಂಡದ್ದು ಉಂಡದ್ದು
ಮುಟ್ಟಿದ್ದು ಮೂಸಿದ್ದು
ತಟ್ಟಿದ್ದು ಸೆಳೆದದ್ದು
ನಕ್ಕಿದ್ದು ನಗಿಸಿದ್ದು
ಅತ್ತದ್ದು ಅಳಿಸಿದ್ದು..
ಎಲ್ಲ ಒಳಗಿಳಿದು
ಕಡು ಕೆಂಪಗಾಗಿ
ನರನಾಡಿಗಳಿಗೆಲ್ಲ ನುಗ್ಗಿ
ಲೆಕ್ಕಕ್ಕೆ ಸಿಗದಷ್ಟು
ಕತೆಗಳನು ಹೇಳೋ
ನೆನಪಿನ ಕೋಶಗಳಾಗಿ
ಹೆಜ್ಜೆಹಜ್ಜೆಗೂ ಕುರುಹಾಗಿ
ಕೆಣಕುತಿರುವುದೆಲ್ಲವೂ
ಹಿಂದಣ ಹಂಗು…

ಇಂದಲ್ಲ ನಾಳೆ
ಮತ್ತೆ ಯಾವಾಗಲಾದರೂ
ಸಿಕ್ಕೀತು, ದಕ್ಕೀತು
ಎನುವ ಬಯಕೆಗಳೆಲ್ಲ
ಕನವರಿಕೆಗಳಾಗಿ
ನಾಳೆಗಳ ಹಳವಂಡಗಳಾಗಿ
ಅದಾಗಿದ್ದರೆ ಇದಾಗಿದ್ದರೆ
ಎನುವ ರೆಗಳ ಲೋಕವಾಗಿ
ಹಾಗಾದರೆ ಹೀಗಾದರೆ
ಎನುವ ಲೆಕ್ಕಾಚಾರಗಳಾಗಿ
ಆಸೆಗಳಾಗಿ ಮೋಹವಾಗಿ
ನಿರೀಕ್ಷೆಯ ಭಾರವಾದದ್ದೆಲ್ಲಾ
ಮುಂದಣ ಮಾಯೆ…

ಹಿಂದು-ಮುಂದುಗಳ
ಸೆಳೆತದ ಸುಳಿಯೊಳಗೆ
ಸಮಯ ಸರಿದದ್ದು ಗೊತ್ತಾಗಿ
ಎಲ್ಲೋ ಎಡವಟ್ಟಾಯ್ತಲ್ಲ
ಅಯ್ಯೋ ಸಾಕೆನಗೆಂದು
ಜೀವ ಬಸವಳಿದಾಗ…
ಪ್ರಾಣವಾಯುವಿನಂತೆ
ಉಸಿರಾದ ನನ್ನ ಗುರು
ಅರಿವಾಗಿ, ಬೆಳಕಾಗಿ
ಎಚ್ಚರದ ಗಂಟೆಯಾಗಿ
ಇರುವಿಕೆಯ ಬಯಲಾಗಿ
ಕೈಹಿಡಿದ ತಾಯಾಗಿ!

Previous post ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
Next post ಅನಿಮಿಷನ ಕಥೆ- 6
ಅನಿಮಿಷನ ಕಥೆ- 6

Related Posts

ನಾನೆಲ್ಲಿ ಇದ್ದೆ?
Share:
Poems

ನಾನೆಲ್ಲಿ ಇದ್ದೆ?

April 29, 2018 ಕೆ.ಆರ್ ಮಂಗಳಾ
ಶರಧಿ ಭೂಮಿಯ ನುಂಗಿ ಸೂರ್ಯ ಶರಧಿಯ ನುಂಗಿ ಆಗಸ ಸೂರ್ಯನ ನುಂಗಿ ವಾಯು ಆಗಸ ನುಂಗಿ ಎಲ್ಲ ಎಲ್ಲವ ನುಂಗಿ ನೊಣೆಯುವಾಗ ನಾನೆಲ್ಲಿ ಅಡಗಿದ್ದೆ? ಬಾಲ್ಯ ಭ್ರೂಣವ ನುಂಗಿ ಹರಯ ಬಾಲ್ಯವ...
ಆ ದಾರಿಯೇನು ಕುರುಡೇ…
Share:
Poems

ಆ ದಾರಿಯೇನು ಕುರುಡೇ…

June 5, 2021 ಜ್ಯೋತಿಲಿಂಗಪ್ಪ
ಅಪ್ಪ ಬೆಳೆಸಿದ ಆಲ ಬಯಲ ಮುಟ್ಟಲಿಲ್ಲ ಮಗ ಕಡಿದ ಬಿಳಿಲು ನೆಲ ಮುಟ್ಟಲಿಲ್ಲ ಈಗ ಆಲದ ಬುಡ ಬಯಲೊಳಗೆ ನೆಲಕಂಟಿದೆ ಈ ಹುಣುಸೇ ಮರದ ಹುಳಿಗೇನು ಮುಪ್ಪೇ ಕನ್ಯೆಯ ಬೆನ್ನ ಬೆವರ ಉಪ್ಪು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಆಗು ಕನ್ನಡಿಯಂತೆ…
ಆಗು ಕನ್ನಡಿಯಂತೆ…
September 13, 2025
ಕುರುಹೇ ಬಯಲು
ಕುರುಹೇ ಬಯಲು
February 16, 2026
ಅಳಿದು ಕೂಡುವುದು- ಅಳಿಯದೆ ಕೂಡುವುದು
ಅಳಿದು ಕೂಡುವುದು- ಅಳಿಯದೆ ಕೂಡುವುದು
March 9, 2023
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
June 10, 2023
Copyright © 2026 Bayalu