ಬಯಲಾದ ದೇವರು
ಈ
ದೇವರು
ಒಂದು ಕನಸು
ನಿಜವೂ ಅಹುದು
ಸುಳ್ಳೂ ಅಹುದು
ಕಲ್ಪನೆಯ ಹಾಗೆ
ಕಾಣುವುದು ಕಾಣದು
ನಂಬಿದರೆ ಕೇಡಿಲ್ಲ
ನಂಬದಿರಲೂ ಕೇಡಿಲ್ಲ
ಕೇಡೆಲ್ಲವೂ ನನ್ನವು
ಈ
ಸುಳ್ಳಿಗೊಂದು ಕಾಣಿಸಲಾರೆ ನಿಜ
ಹುಡುಕುತಿರುವೆ ಸತ್ಯ ಮಿಥ್ಯ
ಮೂಗನ ಕನಸೊಂದು ಮೌನದ ಮೊನೆಯಲಿದೆ
ಸುಳ್ಳು ಕತೆಗಳ ಸತ್ಯದ ಹುಡುಕಾಟ
ಜೀವ ಮರೆಯ ಸಾವು
ಸಾವಿನ ಮರೆಯ ಜೀವನ
ಬದುಕಿನ ಮರೆಯ ಬಯಲು
ಒಣಗಿದ ಎಲೆ
ಉದುರಲು ಕಾಯುತಿರುವ ಚಿಗುರು
ಮೌನವಾದಷ್ಟೂ ಕ್ಷೇಮ
ಹೆತ್ತ ಕರುವ ನೆಕ್ಕಿ ನೆಕ್ಕಿ ತೊಳೆದು ನಿಲಿಸುವ ತಾಯತನ
ನಾ ಹೆತ್ತ ಕೂಸಲ್ಲವೇ…
ಈ ದೇವರು ಬಯಲೇ…





Comments 1
Vijaya Bagevadi
Jan 20, 2026ಸುಳ್ಳು ಕತೆಗಳ ಸತ್ಯದಝಘಘ ಹುಡುಕಾಟ😟