Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬಯಲಾದ ದೇವರು
Share:
Poems January 15, 2026 ಜ್ಯೋತಿಲಿಂಗಪ್ಪ

ಬಯಲಾದ ದೇವರು

ಈ
ದೇವರು
ಒಂದು ಕನಸು

ನಿಜವೂ ಅಹುದು
ಸುಳ್ಳೂ ಅಹುದು

ಕಲ್ಪನೆಯ ಹಾಗೆ
ಕಾಣುವುದು ಕಾಣದು

ನಂಬಿದರೆ ಕೇಡಿಲ್ಲ
ನಂಬದಿರಲೂ ಕೇಡಿಲ್ಲ

ಕೇಡೆಲ್ಲವೂ ನನ್ನವು

ಈ
ಸುಳ್ಳಿಗೊಂದು ಕಾಣಿಸಲಾರೆ ನಿಜ
ಹುಡುಕುತಿರುವೆ ಸತ್ಯ ಮಿಥ್ಯ
ಮೂಗನ ಕನಸೊಂದು ಮೌನದ ಮೊನೆಯಲಿದೆ

ಸುಳ್ಳು ಕತೆಗಳ ಸತ್ಯದ ಹುಡುಕಾಟ
ಜೀವ ಮರೆಯ ಸಾವು
ಸಾವಿನ ಮರೆಯ ಜೀವನ
ಬದುಕಿನ ಮರೆಯ ಬಯಲು

ಒಣಗಿದ ಎಲೆ
ಉದುರಲು ಕಾಯುತಿರುವ ಚಿಗುರು

ಮೌನವಾದಷ್ಟೂ ಕ್ಷೇಮ
ಹೆತ್ತ ಕರುವ ನೆಕ್ಕಿ ನೆಕ್ಕಿ ತೊಳೆದು ನಿಲಿಸುವ ತಾಯತನ

ನಾ ಹೆತ್ತ ಕೂಸಲ್ಲವೇ…
ಈ ದೇವರು ಬಯಲೇ…

Previous post ಹುಡುಕಾಟ
ಹುಡುಕಾಟ
Next post ನಾನೆಂಬ ನಿನಾದ…
ನಾನೆಂಬ ನಿನಾದ…

Related Posts

ಸಂತೆಯ ಸಂತ
Share:
Poems

ಸಂತೆಯ ಸಂತ

September 7, 2020 ಜ್ಯೋತಿಲಿಂಗಪ್ಪ
ಕನ್ನಡಿಯೊಳಗಿನ ಕಣ್ಣ ನಿಲುವಿಗೆ ನನ್ನದೇನು ಕಾಣಿಕೆ ಕಣ್ಣಿಗೆ ಕರುಳು ಇರಬಾರದು ಒಂದೆಂಬುದು ಒಂದಲ್ಲ ಎರಡೆಂಬುದು ಎರಡಲ್ಲ ಸಂತೆಯೊಳಗೊಬ್ಬ ಸಂತನಿದ್ದಾನೆ ಕಂಡಿರಾ ಈ ಮೂರು ಮೊಳದ...
ಈ  ದಾರಿ…
Share:
Poems

ಈ ದಾರಿ…

May 10, 2023 ಜ್ಯೋತಿಲಿಂಗಪ್ಪ
ಈ ದಾರಿ ಹೋಗುವುದು ಎಲ್ಲಿಗೆ ನಾನೂ ಅರಿಯೆ ನೀವೂ ಅರಿಯೆರಿ ಅರಿದವನಂತೆ ನಾನು ಹೋಗುತಿರಲು ಅರಿಯದವರಂತೆ ನೀವು ಸುಮ್ಮನೇ ಇರುವಿರಿ ಏನು ಚೆಂದ ಅಲ್ಲಲ್ಲಿಗೆ ಅಲ್ಲಲ್ಲಿಗೆ ದಾರಿ...

Comments 3

  1. Vijaya Bagevadi
    Jan 20, 2026 Reply

    ಸುಳ್ಳು ಕತೆಗಳ ಸತ್ಯದ ಹುಡುಕಾಟ😟

  2. Dr. Umesh Soraba
    Jan 23, 2026 Reply

    ಜ್ಯೋತಿಲಿಂಗಪ್ಪ ಶಿವನಕೆರೆ ಅವರ ಕವಿತೆಗಳಿಗೆ ಭಾವಲೋಕದ ಸತ್ಯ-ಮಿಥ್ಯಗಳೊಂದಿಗೆ ಸೆಣಸುವ ಆರೋಗ್ಯಕರ ಜವಾಬ್ದಾರಿಯ ನಡೆಯೊಂದು ಇದ್ದೇ ಇದೆ. ಇದು ‘ಬಯಲಾದ ದೇವರು’ ಕವಿತೆಯಲ್ಲೂ ಮುಂದುವರೆದಿರುವುದನ್ನು ಕಾಣಬಹುದು… ದೇವರ ಅಸ್ತಿತ್ವದ ಕುರಿತು ಈಗಾಗಲೇ ಇರುವ ಪ್ರಚಲಿತ ವ್ಯಾಖ್ಯಾನ-ವಿವರಣೆಗಳ ಮಧ್ಯೆ ಈ ಕವಿತೆಯಲ್ಲಿ ದೇವರು ಕುರಿತು ಆಲೋಚಿಸಿರುವ ಬಗೆ ಭಿನ್ನವೂ ಆಪ್ತವೂ ಆದುದು. ಈ ದೇವರನ್ನು ನಂಬಿದರೂ ಕೇಡಿಲ್ಲ…. ನಂಬದಿರಲೂ ಕೇಡಿಲ್ಲ…. ಒಣಗಿದ ಎಲೆ ಉದುರಲು ಕಾಯುತಿರುವ ಚಿಗುರಿನಂತೆ ಈ ದೇವರು ಮರಮರಳಿ ಹೊಸತಾಗುವ ರೂಪಕ. ಹುಟ್ಟು- ಸಾವುಗಳ ಮಧ್ಯೆ ಬದುಕಿನ ಸ್ಥಿತಿಸ್ಥಾಪಕತೆಗೆ ಕಾರಕ… ಹೀಗೆ ದೇವರು ಮತ್ತು ದೇವರ ಅಸ್ತಿತ್ವ ಮಾನವ ಪ್ರಜ್ಞೆಯಲ್ಲಿ ನಿಂತ ಬಗೆಯನ್ನು ಕವಿ ಇಲ್ಲಿ ಭಾವಿಸಿದ ಮತ್ತು ಭಾಷ್ಯೀಕರಿಸಿದ ಬಗೆ ವಿಶಿಷ್ಟವಾಗಿದೆ. ಕವಿಗೆ ಅಭಿನಂದನೆಗಳು.

  3. ನವೀನ್ ಕುಮಾರ್, ಬೆಟಗೇರಿ
    Feb 5, 2026 Reply

    ನಿಜ, ಸುಳ್ಳು ಎರಡೂ ಆಗಿರುವುದರಿಂದಲೇ ಆ ದೇವರು ಮನುಷ್ಯನ ಹಳಬಂಡ ಕನಸು, ಕವನ ಚೆನ್ನಾಗಿದೆ.

Leave a Reply to Vijaya Bagevadi Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
April 11, 2025
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
October 13, 2022
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ಅಲ್ಲೀ ಸಾಹೇಬರು
ಅಲ್ಲೀ ಸಾಹೇಬರು
February 16, 2026
ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್
August 11, 2025
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
ಶಿವನ ಕುದುರೆ…
ಶಿವನ ಕುದುರೆ…
May 1, 2019
ಸತ್ಯದ ಬೆನ್ನು ಹತ್ತಿ…
ಸತ್ಯದ ಬೆನ್ನು ಹತ್ತಿ…
April 29, 2018
ಹೆಸರಿಲ್ಲದಾ ಊರಿನ ಹಾಡು
ಹೆಸರಿಲ್ಲದಾ ಊರಿನ ಹಾಡು
May 6, 2020
Copyright © 2026 Bayalu