ನೆಟ್ಟ ನಂಜು ಹಾಲೀಂಟದು
ಯಾರ ಮನೆ ಯಾರ ತೆನೆ
ಯಾರ ಅನ್ನ ಯಾರ ಚಿನ್ನ
ಸಾವಲಿ ಜೊತೆ ಬರಲಿಹುದೆ
ಕಟ್ಟಿ ಒಯ್ಯಲಾಗುವುದೆ
ಆ ಬಂಧು ಈ ಬಳಗ
ಆ ಹಣವು ಈ ಎಣೆಯು
ಕಟ್ಟು ಕಟ್ಟಿ ಇಟ್ಟ ಗಂಟು
ಯಾರಿಗೊ ಹೋಗಲಿಕುಂಟು
ಉಂಡ ಕಯ್ಯಲ್ಲಿ ಕಾಗೆ
ಓಡಿಸದ ಜಿಪುಣನ ಬಾಳ್ಗೆ
ಆದರೆಲ್ಲ ಹೊರ ಪಾಲು
ನೆಟ್ಟ ನಂಜು ಕೊಟ್ಟೀತೆ ಹಾಲು
ಹುಟ್ಟಿದವರಿಗುಂಟು ಮರಣ
ನಡು ನ್ಯಾಯ ನೀತಿಯಾಭರಣ
ದೂಷಣೆ ಹೊತ್ತು ಹೋಗದಿರು
ಮತ್ಸರ ತುಂಬಿ ನಿಲ್ಲದಿರು
-ಪೇಜಾPJ
Comments 1
Girish Mysuru
Jun 7, 2021ಹುಟ್ಟಿದವರಿಗುಂಟು ಮರಣ…. ಕವನ ಅರ್ಥಪೂರ್ಣವಾಗಿದೆ.