Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೀರು… ಬರಿ ನೀರೇ?
Share:
Poems December 13, 2024 ಜ್ಯೋತಿಲಿಂಗಪ್ಪ

ನೀರು… ಬರಿ ನೀರೇ?

ಕತ್ತಲೆಂಬುದು ಕಣ್ಣ ಮುಂದೋ
ಕಣ್ಣ ಹಿಂದೋ…

ಜ್ಞಾನ ಎಂಬುದು ಅರಿವಲ್ಲ
ಅರಿದರೆ ಅಜ್ಞಾನ…

ಕತ್ತಲ ಒಳಗಣ ಬೆಳಕ
ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ

ಜ್ಞಾನವೇನು ಮರವೆಯೇ…

ನದಿ ಯಾವುದು
ನೀರು ಯಾವುದು

ದೋಣಿ ಯಾವುದು
ಹುಟ್ಟು ಯಾವುದು

ನದಿ ದಾಟಿಸಿದುದು ದೋಣಿಯೋ ಹುಟ್ಟೋ…

ನೀರ ನಡುವಿನ ದಾರಿ
ಕೂಡಿ ಹರಿಯದೇ

ನೀರು ಹರಿದರೆ ಹಳ್ಳ
ನಿಂತರೆ ಕೊಳ್ಳ

ನೀರರಿದು ನಿಂತು ಅಬ್ಧಿ..

ಹಸಿವು ಇದ್ದಲ್ಲಿ ಉಣ್ಣುವುದೇ ಸೊಗಸು.

Previous post ಕಾಣದ ಬೆಳಕ ಜಾಡನರಸಿ…
ಕಾಣದ ಬೆಳಕ ಜಾಡನರಸಿ…
Next post ನಾನುವಿನ ಉಪಟಳ
ನಾನುವಿನ ಉಪಟಳ

Related Posts

ಗೇಣು ದಾರಿ
Share:
Poems

ಗೇಣು ದಾರಿ

July 10, 2023 ಜ್ಯೋತಿಲಿಂಗಪ್ಪ
ಮುಂದಿನ ಕಾಲು ಹಿಂದಕೆ ಬಾರದೇ ಹಿಂದಿನ ಕಾಲು ಮುಂದಕೆ ಬಾರದೇ ಹಿಂದು ಮುಂದು ಸಂತೆ ದಾರಿ ತನ್ನರಿವೇ ತನ್ನ ಕುರುಹು ತನ್ನ ಕುರುಹೇ ತನ್ನರಿವು ಹಿಂದು ಮುಂದಾದು ಪೂಜಿಸಿದೆ ಭಕ್ತಿ...
ಎರವಲು ಮನೆ…
Share:
Poems

ಎರವಲು ಮನೆ…

August 10, 2023 ಕೆ.ಆರ್ ಮಂಗಳಾ
ಬೆಂಕಿ ಬಿದ್ದಿತ್ತು ಥಳುಕಿನ ಮಹಲಿಗೆ ಉರಿದುರಿದು ಬೂದಿಯಾಗಿತ್ತು ಪೇರಿಸಿ ಇಟ್ಟ ಸಿರಿ-ಸಂಪತ್ತು ಆರಿಸ ಹೋದರೆ ಕೈ ಸುಟ್ಟಿತ್ತು ಹಲುಬಿಹೆನೆಂದರೆ ದನಿ ಅಡಗಿತ್ತು ಕೂಗಲು ಹೋದರೆ...

Comments 1

  1. ರವೀಶ್ ಜಗಲಿ
    Dec 18, 2024 Reply

    ಜ್ಞಾನಕ್ಕೆ ಅಜ್ಞಾನದ ಜಾಗ, ಕತ್ತಲಿಗೆ ಬೆಳಕಿನ ಒಡಲು… ಕವನ ಬೇರೆಲ್ಲಿಗೋ ದಾರಿ ತೋರುವಂತಿದೆ.👌👌

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ಸಂತೆಯ ಸಂತ
ಸಂತೆಯ ಸಂತ
September 7, 2020
…ಬಯಲನೆ ಬಿತ್ತಿ
…ಬಯಲನೆ ಬಿತ್ತಿ
August 11, 2025
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
ಗುರುವೆಂಬೋ ಬೆಳಗು…
ಗುರುವೆಂಬೋ ಬೆಳಗು…
February 6, 2025
Copyright © 2025 Bayalu