Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಣದ ಬೆಳಕ ಜಾಡನರಸಿ…
Share:
Poems December 13, 2024 ಜಬೀವುಲ್ಲಾ ಎಂ.ಅಸದ್

ಕಾಣದ ಬೆಳಕ ಜಾಡನರಸಿ…

ಮರೆತ ಇಳಿ ಸಂಜೆಯೊಂದು
ಮುಂಜಾನೆಗೆ ಕಾಡುವಾಗ
ಕಾಫಿ ಮುಗಿದ ಕಪ್ಪಿನಲಿ
ತುಂಬಿ ಚೆಲ್ಲಿದೆ ವೈರಾಗ್ಯ
ಶೂನ್ಯ ಹೀರಿದವನೆ ವಶ

ಕಾಲು ಮುರಿದ ಕುರ್ಚಿಯ ಮೇಲು
ಕಾಲಿನ ಮೇಲೆ ಕಾಲು ಹಾಕಿ ಕೂತು
ಕನಿಕರವಿಲ್ಲದೆ
ನೆನಪುಗಳು ಕೂಡಿ ನಗುವಾಗ
ನಿಂತಂತೆ ಶ್ವಾಸ

ಒಲೆಯ ಮೇಲೆ ಅನ್ನ ಕುದಿವ ಸದ್ದಿಗೆ
ಮನಸೆಲ್ಲಾ ಒದ್ದೆ ಮುದ್ದೆ
ಮಳೆಯಿಲ್ಲ ಹೊರಗೆ
ಕಡಲ ಮೊರೆತ ಒಳಗೆ
ನೋವಿನ ಹಿಡಿಯಲ್ಲಿ ನಲುಗಿದಂತೆ ಸಂತಸ

ಕತ್ತಲ ಕೋಣೆಯ ಹಾಡು
ಇಂಪಾಗಿ ಕೇಳುತಿದೆ ಏಕೋ?!
ಎದ್ದು ಹೊರಡಬೇಕು ಇಲ್ಲಿಂದ ಮೊದಲು
ಕಾಣದ ಬೆಳಕ ಜಾಡ ಅರಸಿ
ಬಯಲು ಕರೆದಂತೆ ಭಾಸ.

Previous post ಯಾಲಪದದ ಸೊಗಡು
ಯಾಲಪದದ ಸೊಗಡು
Next post ನೀರು… ಬರಿ ನೀರೇ?
ನೀರು… ಬರಿ ನೀರೇ?

Related Posts

ಅನಿಶಾ…
Share:
Poems

ಅನಿಶಾ…

September 6, 2026 ಜ್ಯೋತಿಲಿಂಗಪ್ಪ
ನಾನು ನಡೆದಷ್ಟೇ ನನ್ನ ದಾರಿ ಹಾಕಿದ ಹೆಜ್ಜೆಗೆ ದೂರ ಅಂಜಿಕೆಯೇ ಗುರಿ ಇಲ್ಲದ ಪಯಣಕೆ ದಿಕ್ಕಿಲ್ಲ ದಿಕ್ಕು ನೋಡಿ ಹರಿದೀತೇ ಬೆಳಕು ಈ ದಿಕ್ಕಿಗೆ ಹೆಸರಿಟ್ಟವನು ನಾನಲ್ಲವೇ ಒಂದು...
ಈ ಕ್ಷಣದ ಸತ್ಯ
Share:
Poems

ಈ ಕ್ಷಣದ ಸತ್ಯ

March 12, 2022 ಕೆ.ಆರ್ ಮಂಗಳಾ
ಧಗಧಗಿಸಿ ಮೇಲೇರುತಿಹ ಕೆನ್ನಾಲಿಗೆಯ ಈ ಬೆಂಕಿ ಅಡಗಿತ್ತು ಎಲ್ಲಿ? ಮರದ ಬೊಡ್ಡೆಯಲೋ? ಒಣಗಿದ ಸೌದೆಯಲೋ, ಮದ್ದಗೀರಿದ ಕಡ್ಡಿಯಲ್ಲೋ, ಊದುತಿಹ ಗಾಳಿಯಲ್ಲೋ? ಎಲ್ಲಿಂದ ಬಂತು ಕಣ್ಣ...

Comments 2

  1. Padmalaya
    Dec 13, 2024 Reply

    ಒಗಟು ಜಿಗಟಿನ ಕಾವ್ಯ ಪಿತಾಮಹ ಜೋತಿಲಿಂಗಪ್ಪನವರ ಕಾವ್ಯ ಒಂದು ಕಣ್ಕಟ್ಟು ವಿದ್ಯೆ ಯಂತೆ ತೋರಿ ಅಡಗುತ್ತದೆ

  2. ಸಂತೋಷ್ ಬಿರಾದಾರ
    Dec 18, 2024 Reply

    ಎದ್ದು ಹೊರಡಬೇಕು… ಕುದಿವ ಮನಕೆ ತಂಗಾಳಿ ಹರಿದುಬರುವಲ್ಲಿಗೆ, ಎರಡು-ಮೂರು ಸಲ ಓದಿಸಿಕೊಂಡ ಕವನದ ಅಂತರಾಳಕ್ಕೆ ಒಪ್ಪುವಂತಿದೆ ಚಿತ್ರ 🫡

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
August 11, 2025
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
ನಾನೆಂಬುದ ಅಳಿದು…
ನಾನೆಂಬುದ ಅಳಿದು…
April 6, 2023
ಕಣ್ಣ ಮುಂದಿನ ಬೆಳಕು
ಕಣ್ಣ ಮುಂದಿನ ಬೆಳಕು
September 6, 2026
ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…
June 14, 2024
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
April 29, 2018
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
Copyright © 2026 Bayalu