Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮರೆತೆ…
Share:
Poems July 4, 2022 ಜ್ಯೋತಿಲಿಂಗಪ್ಪ

ಮರೆತೆ…

ಮಗುವಾಗಬೇಕು ನಿಜ
ಮರಳದು ಚೈತನ್ಯ ಮರೆತೆ

ಹೂಳಲಾಗದು ನೆಳಲು ನಿಜ
ನೆಳಲು ಹಿಂಬಾಲಿಸುವುದು ಮರೆತೆ

ನೆರಳು ಯಾವಾಗಲೂ ಇರದು ನಿಜ
ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ

ಸಮಯ ಕಳೆಯುವುದು ನಿಜ
ಕಳೆದ ಸಮಯ ಕಳೆದುದು ಮರೆತೆ

ಸಮಯಕೆ ಸಾವಿಲ್ಲ ನಿಜ
ಸಾಯುವ ಸಮಯ ಬರುವುದು ಮರೆತೆ

ಸುಖವೇನೂ ಸುಮ್ಮನೆ ಬರುವುದಿಲ್ಲ ನಿಜ
ದುಃಖವೂ ಜೊತೆಗೆ ಇರುವುದು ಮರೆತೆ

ಖಾಲೀ ಮಡಿಕೆ ಶಬ್ದ ಮಾಡುವುದು ನಿಜ
ಖಾಲಿಯಲಿ ಬಯಲು ತುಂಬುವುದು ಮರೆತೆ

ಏಕಾಂತ ಒಂಟಿತನವಲ್ಲ ನಿಜ
ಒಂಟಿತನವ ಏಕಾಂತವಾಗಿಸುವುದು ಮರೆತೆ

ಸತ್ಯದ ಮುಖವ ಕಾಣಿಸದು ಕತ್ತಲು ನಿಜ
ಕತ್ತಲೊಳಗೂ ಸತ್ಯ ಇರುವುದು ಮರೆತೆ

ಧ್ಯಾನವೇ ಸಾಧನೆಯಲ್ಲ ನಿಜ
ಸಾಧಿಸಿದುದೆಲ್ಲವೂ ಧ್ಯಾನ ಮರೆತೆ

ಬಯಲು ಓದಲು ಬಯಲಿಗಿಳಿದೆ ನಿಜ
ಬಯಲು ಬೆತ್ತಲಾಗಿಸಿ ಬಟ್ಟೆ ತೊಟ್ಟುದ ಮರೆತೆ.

ಬೇರಿಲ್ಲದೆ ಎಲೆಗಳಿರವು ನಿಜ
ಎಲೆಗಳಿರದೆ ಬೇರೂ ನಿಲ್ಲದು ಮರೆತೆ.

ಬೇರು ನೆಲದೊಳಗಿಳೀಯುವಾಗ ಎಲೆಗಳು ನಗುವವು ನಿಜ
ಎಲೆಗಳು ಒಣಗಿ ನೆಲಕುದುರುವಾಗ ಬೇರು ನಗುವುದು ಮರೆತೆ.

Previous post ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
Next post ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…

Related Posts

ಆಸರೆ
Share:
Poems

ಆಸರೆ

August 6, 2022 ಜ್ಯೋತಿಲಿಂಗಪ್ಪ
ಅರಿವಿನ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತಿರುವೆ ನಿಂತು ನೀಡುವರು ಯಾರು ಮನೆ ಖಾಲಿ ಅರಿಯದೆ ಅರಿವು ನಿಲ್ಲದು ಊರ ಹೊರಗೆ ನಿಂತು ಒಳಗೆ ಹೋಗುವ ದಾರಿ ಕೇಳುತಿರುವೆ ಹೇಳರು. ಗಾಳಿಯ...
ಆ ದಾರಿಯೇನು ಕುರುಡೇ…
Share:
Poems

ಆ ದಾರಿಯೇನು ಕುರುಡೇ…

June 5, 2021 ಜ್ಯೋತಿಲಿಂಗಪ್ಪ
ಅಪ್ಪ ಬೆಳೆಸಿದ ಆಲ ಬಯಲ ಮುಟ್ಟಲಿಲ್ಲ ಮಗ ಕಡಿದ ಬಿಳಿಲು ನೆಲ ಮುಟ್ಟಲಿಲ್ಲ ಈಗ ಆಲದ ಬುಡ ಬಯಲೊಳಗೆ ನೆಲಕಂಟಿದೆ ಈ ಹುಣುಸೇ ಮರದ ಹುಳಿಗೇನು ಮುಪ್ಪೇ ಕನ್ಯೆಯ ಬೆನ್ನ ಬೆವರ ಉಪ್ಪು...

Comments 2

  1. Praveen Kammar
    Jul 5, 2022 Reply

    ಮರೆತದ್ದೇನು, ಅರಿತದ್ದೇನು? ದ್ವಂದ್ವಗಳಲ್ಲಿ ಸಿಕ್ಕಿದ್ದೇನು? ಸುಂದರ ಕವನ.

  2. Channabasappa B
    Jul 7, 2022 Reply

    ಮರೆಯಬೇಕಾದವುಗಳನ್ನು ಮರೆತಾಗಲೇ ಅರಿವು ಕಣ್ಣುತೆರೆಯುವುದು, ಬಯಲು ಸಾಕ್ಷಾತ್ಕಾರವಾಗುವುದು!!!

Leave a Reply to Praveen Kammar Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಅನಿಮಿಷ- ಕಾದು ಗಾರಾದ ಮಣ್ಣು(7)
ಅನಿಮಿಷ- ಕಾದು ಗಾರಾದ ಮಣ್ಣು(7)
June 12, 2025
ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2
August 10, 2023
ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?
December 3, 2018
ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
May 10, 2022
ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
September 7, 2021
ಕಣ್ಣ ಪರಿಧಿ
ಕಣ್ಣ ಪರಿಧಿ
February 10, 2023
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
August 2, 2020
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
Copyright © 2025 Bayalu