Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಾಯೋ ಗುರುವೇ…
Share:
Poems February 11, 2022 ಕೆ.ಆರ್ ಮಂಗಳಾ

ಕಾಯೋ ಗುರುವೇ…

ನಾನು:

ಗಾಳಿಯೇ ಆಡದ, ಕತ್ತಲ ಕೋಣ್ಯಾಗ
ಕಳೆದು ಹೋಗಿನಿ ನನ ಗುರುವೆ
ಚಿಲಕವ ಸರಿಸಿ, ಬಾಗಿಲು ತೆಗೆದು
ಬೆಳಕಾ ತೋರಿಸು ನನ ಗುರುವೆ

ತಡವುತ ಎಡವುತ, ಅಲ್ಲಲ್ಲೇ ಸುತ್ತುತ
ಹೈರಾಣಾಗಿಹೆ ನನ ಗುರುವೆ
ರಾಗವೂ ಬೇಡ, ಮೋಹವೂ ಬೇಡ
ಆಗಸ ತೋರಿಸು ನನ ಗುರುವೆ

ಕನಸಲಿ ಕರಗುತ, ಭವದಲಿ ಬೇಯುತ
ಬಸವಳಿದಿರುವೆ ನನ ಗುರುವೆ
ಅಂಟನು ಬಿಡಿಸಿ, ವಿಷಯವ ಹರಿಸಿ
ಮುಕ್ತಿಯ ತೋರೊ ನನ ಗುರುವೆ

ಗುರು:

ಕೋಣೆಯೂ ಇಲ್ಲ, ಕತ್ತಲೂ ಇಲ್ಲ
ಬಾಗಿಲು ಎಲ್ಲಿದೆ ಹೇಳಮ್ಮಾ
ಇಲ್ಲದ ಕೋಣೆಗೆ ಚಿಲಕವ ಜಡಿದು
ಒಳಗೆ ಅಡಗಿದೆ ಯಾಕಮ್ಮಾ?

ಕಣ್ಣನು ತೆರೆದು ಕಸವನು ತೆಗೆದು
ನಿಜವನು ತಿಳಿದು ನೋಡಮ್ಮ
ಭ್ರಮೆಯನು ಜಾಡಿಸಿ, ಮನಸನು ಕೊಡವಲು
ಅಲ್ಲೇ ಬಯಲಿದೆ ಕಾಣಮ್ಮ

ನೀನೇ ಬೆಳಗು, ನೀನೇ ಆಗಸ
ನೀನೇ ಲಿಂಗವು ಅರಿಯಮ್ಮಾ.

Previous post ನಿಮ್ಮಿಂದಲೇ ನಾನು
ನಿಮ್ಮಿಂದಲೇ ನಾನು
Next post ದಂಪತಿಗಳಲ್ಲಿ ಅನುಭಾವ ಚಿಂತನ
ದಂಪತಿಗಳಲ್ಲಿ ಅನುಭಾವ ಚಿಂತನ

Related Posts

ಒಂದಾಗಿ ನಿಂತೆ…
Share:
Poems

ಒಂದಾಗಿ ನಿಂತೆ…

April 6, 2024 ಕೆ.ಆರ್ ಮಂಗಳಾ
ಆಗೀಗ ನೀರು ಕಾಣುವ ಮಧುಮಾಲತಿ ಬಳ್ಳಿಯಲಿ ತೊನೆವ ಕೆಂಪು-ಬಿಳಿ ಹೂಗಳು ಪಕ್ಕದಲ್ಲೇ ನಸುಗಂಪಿನ ದುಂಡು ಮಲ್ಲಿಗೆಯ ದಂಡು ದೇಟಿನ ತುಂಬ ಬಣ್ಣಬಣ್ಣದ ದಾಸವಾಳ, ಅರೆಬೆತ್ತಲಾದ ಸಂಪಿಗೆ...
ಎರಡು ಎಲ್ಲಿ?
Share:
Poems

ಎರಡು ಎಲ್ಲಿ?

October 5, 2021 ಕೆ.ಆರ್ ಮಂಗಳಾ
ನಾನು ದ್ವೈತವೋ ಅದ್ವೈತವೋ ಹೀಗೊಂದು ಪ್ರಶ್ನೆ ಎದ್ದದ್ದೇ ತಡ ನಡೆದಿತ್ತು ಒಳಗೊಂದು ತಾಕಲಾಟ- ಒಂದೆಡೆ- ನೆನಪುಗಳಿಗೆ, ಕನಸುಗಳಿಗೆ ಪ್ರೀತಿಯ ಕನವರಿಕೆಗಳಿಗೆ ಎದೆಯ ಹಂಬಲಗಳಿಗೆಲ್ಲ...

Comments 5

  1. nynitha
    Feb 12, 2022 Reply

    ಕಾಯೋ ಗುರುವೆ ಕವನ ಬಹಳ ಸೊಗಸಾಗಿದೆ!

  2. Manohara acharya
    Feb 12, 2022 Reply

    Very nice

  3. Padmalaya
    Feb 17, 2022 Reply

    ವಾವ್…ಸೂಪರ್

  4. Perooru Jaru
    Feb 17, 2022 Reply

    ಬಾಗಿಲು ನೀವು ಹಾಕಿಕೊಂಡಿಲ್ಲ, ಈ ಸಮಾಜ ಹಾಕಿದೆ. ಯಾವ ಗುರುವೂ ಈ ಸಮಾಜದ ಸೆರೆಮನೆಯಿಂದ ನಿಮ್ಮನ್ನು ಸಾವಿನ ತನಕ ಬಿಡಿಸಲಾರ.

  5. Suma
    Feb 17, 2022 Reply

    Amazing ..eloquently written

Leave a Reply to Perooru Jaru Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗ್ರಹಣ
ಗ್ರಹಣ
December 9, 2025
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
ಭಾರ
ಭಾರ
October 6, 2020
ಬೆಳಕು ನುಂಗಿದ ಕತ್ತಲು
ಬೆಳಕು ನುಂಗಿದ ಕತ್ತಲು
December 9, 2025
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
October 10, 2023
ನಾನೆಂಬುದ ಅಳಿದು…
ನಾನೆಂಬುದ ಅಳಿದು…
April 6, 2023
ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
September 14, 2024
ಮನೆ ನೋಡಾ ಬಡವರು
ಮನೆ ನೋಡಾ ಬಡವರು
April 29, 2018
ಈ ಕನ್ನಡಿ
ಈ ಕನ್ನಡಿ
March 6, 2024
Copyright © 2026 Bayalu