ಹುಡುಕಾಟ
ಈ
ಹುಡುಕಾಟ
ಒಂದು ಹುಡುಗಾಟಿಕೆ
ಯಾರು
ಏನನು ಏತಕಾಗಿ ಹುಡುಕುವುದು
ಇರುವುದ
ಹೇಳಲಾರರು ಕಂಡುದ ಕಾಣಲಾರರು
ಇಲ್ಲಿಂದ
ಆಚೆಯದು ಕನಸು
ಅಲ್ಲಿಂದ
ಈಚೆಯದೂ ಕನಸು
ಕನಸಿನ
ಆಚೆ ಈಚೆಯೂ ಕನಸು
ಅಂಗ ಸುಖ
ಹಿಂಗುವವರೆ ಅಂಗನೆಯ ಸಂಗ
ಬೇರು ಸಾಯುವ ಮರ
ದೇವರು ಸತ್ತ ಸುದ್ದಿ ನಿಜವೇ…
ಈ
ಕತ್ತಲು ಕಂಡವರು
ನಾನೋ…ಕಣ್ಣೋ…
ಕಣ್ಣ
ಮುಚ್ಚ ಬಹುದು
ಮರೆ ಮಾಡಲಾದೀತೇ…
ದೀಪದ ಅಹಂ ಈ ಬೆಳಕು
ಉರಿದು ಹಾರಿಹೋಯಿತು
ಈ ಬದುಕೊಂದು ರಹಸ್ಯ
ಬಗೆದಷ್ಟೂ ಹೊಸಹೊಸತು
ಹುಟ್ಟೇ ಇಲ್ಲದ ಬದುಕಿಗೆ
ಸಾವಂತೂ ಇಲ್ಲವೇ ಇಲ್ಲ
ಸಾವಿಗೆ ಸರಸವಿಲ್ಲಾ
ರಾತ್ರಿ ಎಂಬ ಹಗಲು
ಹಗಲು ಎಂಬ ರಾತ್ರಿ
ಬೆಳಕಿನಾಟ
ಎಲ್ಲಾ ಹುಡುಗಾಟಿಕೆ
ಖಾಲೀ
ಆಗುವತನಕ.. ಕಾಯುವುದು
ಈಗಷ್ಟೇ ಕಂಡಿರುವೆ
ಕನಸು ಕಂಗಳ ಸುಖ ಹಿಂಗದು.
Comments 2
ಜಯರಾಮ್ ಭರಣಿ
Jul 25, 2024ಹುಡುಕೋದು ಯಾವುದಂತ ಗೊತ್ತಿಲ್ಲದೆ, ಏನು ಹುಡುಕೋದು, ಎಲ್ಲಿ ಹುಡಕೋದು… ಮನುಷ್ಯನ ಭ್ರಮೆಯೋ, ಮಾಯೆಯೋ ಕಂಡವರಾರು? ಗೊಂದಲಗಳು ರಹಸ್ಯ ಸೃಷ್ಟಿಸುವ ವಿಧಿಯೋ?
ಪ್ರವೀಣ್ ಜವಳಿ
Jul 30, 2024ಬೆಳಕು ದೀಪದ ಅಹಂ ಆಗುವುದಾದರೆ, ಜೀವ ದೇಹದ ಅಹಂ ಎಂದಾಗುವುದಿಲ್ಲವೇ?