Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಾಟ
Share:
Poems July 21, 2024 ಜ್ಯೋತಿಲಿಂಗಪ್ಪ

ಹುಡುಕಾಟ

ಈ
ಹುಡುಕಾಟ
ಒಂದು ಹುಡುಗಾಟಿಕೆ
ಯಾರು
ಏನನು ಏತಕಾಗಿ ಹುಡುಕುವುದು
ಇರುವುದ
ಹೇಳಲಾರರು ಕಂಡುದ ಕಾಣಲಾರರು

ಇಲ್ಲಿಂದ
ಆಚೆಯದು ಕನಸು
ಅಲ್ಲಿಂದ
ಈಚೆಯದೂ ಕನಸು

ಕನಸಿನ
ಆಚೆ ಈಚೆಯೂ ಕನಸು

ಅಂಗ ಸುಖ
ಹಿಂಗುವವರೆ ಅಂಗನೆಯ ಸಂಗ

ಬೇರು ಸಾಯುವ ಮರ
ದೇವರು ಸತ್ತ ಸುದ್ದಿ ನಿಜವೇ…

ಈ
ಕತ್ತಲು ಕಂಡವರು
ನಾನೋ…ಕಣ್ಣೋ…

ಕಣ್ಣ
ಮುಚ್ಚ ಬಹುದು
ಮರೆ ಮಾಡಲಾದೀತೇ…

ದೀಪದ ಅಹಂ ಈ ಬೆಳಕು
ಉರಿದು ಹಾರಿಹೋಯಿತು

ಈ ಬದುಕೊಂದು ರಹಸ್ಯ
ಬಗೆದಷ್ಟೂ ಹೊಸಹೊಸತು

ಹುಟ್ಟೇ ಇಲ್ಲದ ಬದುಕಿಗೆ
ಸಾವಂತೂ ಇಲ್ಲವೇ ಇಲ್ಲ

ಸಾವಿಗೆ ಸರಸವಿಲ್ಲಾ

ರಾತ್ರಿ ಎಂಬ ಹಗಲು
ಹಗಲು ಎಂಬ ರಾತ್ರಿ
ಬೆಳಕಿನಾಟ

ಎಲ್ಲಾ ಹುಡುಗಾಟಿಕೆ
ಖಾಲೀ
ಆಗುವತನಕ.. ಕಾಯುವುದು

ಈಗಷ್ಟೇ ಕಂಡಿರುವೆ
ಕನಸು ಕಂಗಳ ಸುಖ ಹಿಂಗದು.

Previous post ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
Next post ನೀನು ನಾನಲ್ಲ…
ನೀನು ನಾನಲ್ಲ…

Related Posts

ನಾನುವಿನ ಉಪಟಳ
Share:
Poems

ನಾನುವಿನ ಉಪಟಳ

December 13, 2024 ಕೆ.ಆರ್ ಮಂಗಳಾ
ಕಣ್ಣಪಾಪೆಯಲಿ ನಾನವಿತು ಕುಳಿತಿರಲು ಕಾಣುವ ನೋಟಗಳಿಗೆ ಲೆಕ್ಕ ಹಾಕುವರಾರು? ತಲೆಯೊಳಗೆ ನಾನೆಂಬುದು ತತ್ತಿ ಇಟ್ಟಿರುವಾಗ ಬರುವ ಯೋಚನೆಗಳನು ಎಣಿಸಿದವರಾರು? ಮನದ ಮೂಲೆಮೂಲೆಯಲು...
ನಾನೊಂದು ನೀರ್ಗುಳ್ಳೆ
Share:
Poems

ನಾನೊಂದು ನೀರ್ಗುಳ್ಳೆ

September 6, 2023 ಕೆ.ಆರ್ ಮಂಗಳಾ
ಕಾಲದ ಊದುಗೊಳವೆಯಲಿ ನಿರಂತರವಾಗಿ ಉಕ್ಕುತಿವೆ ಅನಂತಾನಂತ ನೀರ್ಗುಳ್ಳೆ ಎಲ್ಲಕೂ ಒಂದೇ ಹುಟ್ಟು ಒಂದೇ ಬಗೆಯ ಸಂಯೋಜನೆ ನಾ ಬೇರೆ ನೀ ಬೇರೆ ಅಂವ ಬೇರೆ ಇಂವ ಬೇರೆ ನಾ ಮೇಲು ನೀ ಕೆಳಗೆ...

Comments 2

  1. ಜಯರಾಮ್ ಭರಣಿ
    Jul 25, 2024 Reply

    ಹುಡುಕೋದು ಯಾವುದಂತ ಗೊತ್ತಿಲ್ಲದೆ, ಏನು ಹುಡುಕೋದು, ಎಲ್ಲಿ ಹುಡಕೋದು… ಮನುಷ್ಯನ ಭ್ರಮೆಯೋ, ಮಾಯೆಯೋ ಕಂಡವರಾರು? ಗೊಂದಲಗಳು ರಹಸ್ಯ ಸೃಷ್ಟಿಸುವ ವಿಧಿಯೋ?

  2. ಪ್ರವೀಣ್ ಜವಳಿ
    Jul 30, 2024 Reply

    ಬೆಳಕು ದೀಪದ ಅಹಂ ಆಗುವುದಾದರೆ, ಜೀವ ದೇಹದ ಅಹಂ ಎಂದಾಗುವುದಿಲ್ಲವೇ?

Leave a Reply to ಪ್ರವೀಣ್ ಜವಳಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ಲಿಂಗಪೂಜೆ – ಜಂಗಮಸೇವೆ
ಲಿಂಗಪೂಜೆ – ಜಂಗಮಸೇವೆ
March 12, 2022
ಗಾಳಿ ಬುರುಡೆ
ಗಾಳಿ ಬುರುಡೆ
June 17, 2020
ಯೋಗ – ಶಿವಯೋಗ
ಯೋಗ – ಶಿವಯೋಗ
August 2, 2019
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
March 6, 2024
ನೀರು… ಬರಿ ನೀರೇ?
ನೀರು… ಬರಿ ನೀರೇ?
December 13, 2024
ಕಾಲ ಮತ್ತು ದೇಶ
ಕಾಲ ಮತ್ತು ದೇಶ
September 13, 2025
ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
June 5, 2021
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
Copyright © 2026 Bayalu