
ಮಣ್ಣಲ್ಲಿ ಹುಟ್ಟಿ…
ಬರಿದಾಗದ ಕನಸುಗಳು ಮರೆವಿಗೆ ಸರಿಯವೇ..
ಕನಸುಗಳ ನುಂಗಿ ನುಂಗಿ ಕಣ್ಣೇನೂ ಬತ್ತವು
ತುಂಬಲು ಆಸೆಯೇ ಇಲ್ಲ
ಖಾಲಿ ಆಗುವುದು ಏನೂ ಇರದು
ಆಸೆ ಹೊತ್ತ ಮನವಿಲ್ಲ
ನಿರಾಸೆ ಎಂಬುದೇನೋ ಗೊತ್ತಿಲ್ಲ
ಕಾಯಕೆ ವಿಷ ಊಡಿಸುವ ಖ್ಯಾತಿ ಈ ಕರಣಂಗಳಿಗೇ ಸರಿ
“ನಾನು” ಇಲ್ಲದ ‘ನನ್ನ ಪ್ರಜ್ಞೆ’ಯೇ …
ಏನೆಲ್ಲವೂ ಅರಿವಿನ ಮರೆವು, ಮರೆವಿನೊಳಗಣ ಅರಿವು
ಬೆಳಕ ನಂದಿಸಲಾಗದು
ಉರಿವ ಕೆಂಡವ ನಂದಿಸಲಹುದು
ಮಣ್ಣಲ್ಲಿ ಹುಟ್ಟಿ ಬಯಲೊಳಗೆ ಬಯಲು
ದಾರಿಯಲಿ ಜೊತೆಯಾದ ಪಯಣಿಗ
ದಾರಿ ಕಳೆದ…
ಸಾವೇನು ಕೇಡೇ…
Comments 2
ಅಮಿತ್ ಜೆ
Feb 18, 2025ಬಯಲು ಕವನಗಳು ಮತ್ತೆ ಮತ್ತೆ ಓದಿಸಿಕೊಳ್ಳುವಂತಿವೆ👌👌👌
ವೀರಭದ್ರ ಸವಣೂರು
Feb 22, 2025ಮಣ್ಣಲ್ಲೇ ಹುಟ್ಟಿ, ಮಣ್ಣಲ್ಲೇ ಮಣ್ಣಾಗುವ ದಾರಿಯಲ್ಲಿ ಸಿಕ್ಕಿದ್ದು, ಕಂಡಿದ್ದು ಈ ‘ನಾನು’!!!