Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಣ್ಣಲ್ಲಿ ಹುಟ್ಟಿ…
Share:
Poems February 6, 2025 ಜ್ಯೋತಿಲಿಂಗಪ್ಪ

ಮಣ್ಣಲ್ಲಿ ಹುಟ್ಟಿ…

ಬರಿದಾಗದ ಕನಸುಗಳು ಮರೆವಿಗೆ ಸರಿಯವೇ..
ಕನಸುಗಳ ನುಂಗಿ ನುಂಗಿ ಕಣ್ಣೇನೂ ಬತ್ತವು

ತುಂಬಲು ಆಸೆಯೇ ಇಲ್ಲ
ಖಾಲಿ ಆಗುವುದು ಏನೂ ಇರದು

ಆಸೆ ಹೊತ್ತ ಮನವಿಲ್ಲ
ನಿರಾಸೆ ಎಂಬುದೇನೋ ಗೊತ್ತಿಲ್ಲ
ಕಾಯಕೆ ವಿಷ ಊಡಿಸುವ ಖ್ಯಾತಿ ಈ ಕರಣಂಗಳಿಗೇ ಸರಿ

“ನಾನು” ಇಲ್ಲದ ‘ನನ್ನ ಪ್ರಜ್ಞೆ’ಯೇ …
ಏನೆಲ್ಲವೂ ಅರಿವಿನ ಮರೆವು, ಮರೆವಿನೊಳಗಣ ಅರಿವು

ಬೆಳಕ ನಂದಿಸಲಾಗದು
ಉರಿವ ಕೆಂಡವ ನಂದಿಸಲಹುದು

ಮಣ್ಣಲ್ಲಿ ಹುಟ್ಟಿ ಬಯಲೊಳಗೆ ಬಯಲು
ದಾರಿಯಲಿ ಜೊತೆಯಾದ ಪಯಣಿಗ
ದಾರಿ ಕಳೆದ…
ಸಾವೇನು ಕೇಡೇ…

Previous post ಬರಿದಾಗುವ ಬೆರಗು
ಬರಿದಾಗುವ ಬೆರಗು
Next post ಗುರುವೆಂಬೋ ಬೆಳಗು…
ಗುರುವೆಂಬೋ ಬೆಳಗು…

Related Posts

ನೆಟ್ಟ ನಂಜು ಹಾಲೀಂಟದು
Share:
Poems

ನೆಟ್ಟ ನಂಜು ಹಾಲೀಂಟದು

June 5, 2021 Bayalu
ಯಾರ ಮನೆ ಯಾರ ತೆನೆ ಯಾರ ಅನ್ನ ಯಾರ ಚಿನ್ನ ಸಾವಲಿ ಜೊತೆ ಬರಲಿಹುದೆ ಕಟ್ಟಿ ಒಯ್ಯಲಾಗುವುದೆ ಆ ಬಂಧು ಈ ಬಳಗ ಆ ಹಣವು ಈ ಎಣೆಯು ಕಟ್ಟು ಕಟ್ಟಿ ಇಟ್ಟ ಗಂಟು ಯಾರಿಗೊ ಹೋಗಲಿಕುಂಟು...
ಮಾಯದ ಗಾಯ
Share:
Poems

ಮಾಯದ ಗಾಯ

October 19, 2025 ಜ್ಯೋತಿಲಿಂಗಪ್ಪ
ಯಾವಾಗ ಮಳೆ ಬರುವುದೋ ಕಾಯುವ ಆ ದಿನ ಯಾವಾಗ ಮಳೆ ನಿಲ್ಲುವುದೋ ಕಾಯುವ ಈ ದಿನ ದಿನಾ ಕಾಯುವ ಈ ದಿನಕರ ತೋಯಗಳಲಿ ತುಯ್ಯಲಾಟ ಘನವ ನಾನೇನು ಬಲ್ಲೆ ಗೂಡು ಕಟ್ಟಿದ ಹಕ್ಕಿ ಅಂಗಣದಲಿ...

Comments 2

  1. ಅಮಿತ್ ಜೆ
    Feb 18, 2025 Reply

    ಬಯಲು ಕವನಗಳು ಮತ್ತೆ ಮತ್ತೆ ಓದಿಸಿಕೊಳ್ಳುವಂತಿವೆ👌👌👌

  2. ವೀರಭದ್ರ ಸವಣೂರು
    Feb 22, 2025 Reply

    ಮಣ್ಣಲ್ಲೇ ಹುಟ್ಟಿ, ಮಣ್ಣಲ್ಲೇ ಮಣ್ಣಾಗುವ ದಾರಿಯಲ್ಲಿ ಸಿಕ್ಕಿದ್ದು, ಕಂಡಿದ್ದು ಈ ‘ನಾನು’!!!

Leave a Reply to ವೀರಭದ್ರ ಸವಣೂರು Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
September 5, 2019
ಲಿಂಗಾಯತ ಧರ್ಮದ ನಿಜದ ನಿಲುವು
ಲಿಂಗಾಯತ ಧರ್ಮದ ನಿಜದ ನಿಲುವು
April 29, 2018
ಈ ಕನ್ನಡಿ
ಈ ಕನ್ನಡಿ
March 6, 2024
ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
June 5, 2021
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
ಸತ್ಯದ ಬೆನ್ನು ಹತ್ತಿ…
ಸತ್ಯದ ಬೆನ್ನು ಹತ್ತಿ…
April 29, 2018
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
April 29, 2018
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
Copyright © 2025 Bayalu