
ಗುರುಪಥ
ಎಲ್ಲೆಲ್ಲಿಯೋ ಸುತ್ತಿ, ಎಲ್ಲೆಲ್ಲಿಯೋ ಅಲೆದು
ಕಂಡಕಂಡವರನ್ನೆಲ್ಲ ಕೇಳಿ
ಓದುಬಲ್ಲವರನ್ನೆಲ್ಲ ಹುಡುಕಿ
ಸುಸ್ತಾದದ್ದೆ ಬಂತು,
ದಾರಿ ಸಿಗಲಿಲ್ಲ
ಹೇಳುವದನ್ನೆಲ್ಲ ಹಿಡಿದು
ಓದಿದುದನ್ನೆಲ್ಲ ನಂಬಿ
ಕೇಳಿ ಅರಿತದ್ದೆ ನಿಜವೆಂದು
ಇಲ್ಲೇನೋ ಇದೆ, ಅಲ್ಲೇನೋ ಇದೆ
ಎಂದು ಅಡಿಗಡಿಗೆ ಕನವರಿಸಿದ್ದೆ ಬಂತು,
ದಾರಿ ಸಿಗಲಿಲ್ಲ.
ಬೆಳಕಿನ ಭ್ರಮೆ ಹೊತ್ತು
ಯೋಗದ ಹಠ ಹಿಡಿದು
ಹಗಲು ರಾತ್ರಿಗಳ ಪರವೆಯಿಲ್ಲದೆ
ಎಚ್ಚರಾದಾಗೆಲ್ಲ ಎದ್ದು ಕುಳಿತು
ಕಣ್ಮುಚ್ಚಿ ಕಣ್ತೆರೆದು ಹುಡುಕಿದ್ದೆ ಬಂತು,
ದಾರಿ ಸಿಗಲಿಲ್ಲ.
ವಚನ ವ್ಯಾಖ್ಯಾನಗಳಲಿ
ಭಾವಾರ್ಥಗಳ ಬೆಂಬತ್ತಿ
ಹುಡುಕಿದ್ದೆ ತಡಕಿದ್ದೆ ದಣಿದಿದ್ದೆ
ಮಾತು ಮಾತು ಮಥಿಸಿ
ವಾದ ವಿವಾದಗಳ ದೂಳೆದ್ದಿತೇ ವಿನಃ,
ದಾರಿ ಸಿಗಲಿಲ್ಲ.
ನೀನೇನೇ ಬಯಸಿದೊಡೆ ಅದ ಸಾಧಿಸಲು
ಬ್ರಹ್ಮಾಂಡವೇ ನಿನಗೆ ನೆರವಾಗಲು ಸಂಚುಹೂಡುವುದೆಂಬ
ಪಾಲೊ ಕೊಯಿಲೊ ಮಾತು
ನಿಜವಾಗೋ ಕಾಲ ಈಗ ಬಂದಿತ್ತು
ಗೊತ್ತಿರದ ಮೂಲೆಯ ಮಂದಬೆಳಕಿನಲಿ
ಗುರುಪಥ ಕಂಡಿತ್ತು, ಎದೆ ಹಗುರವಾಗಿತ್ತು
ಮಹದಾರಿ ಸಿಕ್ಕಿತ್ತು.
Comments 2
Jyothilingappa
Jan 6, 2020ಕಂಡ
ಗುರು ಪಥ
ದಲಿ ದಾರಿ ಸಿಕ್ಕಿತೇ ಹೇಳಿ
ನಿಜ
ದಾರಿ ಆವುದು ‘ಬಯಲು’ವಿಗೆ.
Madhukar Bannuru
Jan 16, 2020ಅಕ್ಕಾ, ನಿಮಗೆ ಸಿಕ್ಕ ಗುರುಪಥ ಯಾವುದು? ನಮಗೂ ತೋರಿಸಿ.