Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಲಿಂಗದ ಹಂಗೇ…
Share:
Poems September 10, 2022 ಜ್ಯೋತಿಲಿಂಗಪ್ಪ

ಲಿಂಗದ ಹಂಗೇ…

ಹೊದಿಯೋಕೊಂದು ಆಕಾಶ
ಮಲಗೋಕೊಂದು ನೆಲ
ಕುಡಿಯೋಕೊಂದು ಸಿಂಧು
ಉಣ್ಣೋಕೆ ಒಂದಿಷ್ಟು ಭಿಕ್ಷೆ
ಹಾಡೋಕೊಂದು ತಂಬೂರಿ
ಕೇಳೋಕೊಂದು ಕಿವಿ
ಇನ್ನೇನು

ಆಂ ಮರೆತೇ

ಮೆರೆಯಲು ಒಂದು ಮರೆವು
ಅಹಂಕಾರ ಹೊತ್ತೊಯ್ಯಲು ನಾಲ್ಕು ಹೆಗಲು

ಸಾಕು

ಸೊನ್ನೆಯೊಳಗೊಂದು ಸೊನ್ನೆ ಹುಡುಕುವೆ

ಈಗ
ನನ್ನಲಿ
ಕ್ರೋಧವಿಲ್ಲ ದ್ವೇಷವಿಲ್ಲ
ಲೋಭವಿಲ್ಲ ಮತ್ಸರವಿಲ್ಲ
ಬಯಕೆಯಿಲ್ಲ ದುಃಖವಿಲ್ಲ
ಮೋಹವಿಲ್ಲ ಮದವಿಲ್ಲ
ಈ ಲಿಂಗದ ಹಂಗೇ
ನನಗೆ ನಾನೇ ಪ್ರಮಾಣ
ನನ್ನ ಲಜ್ಜೆಯ ಏನ ಹೇಳಲೀ…

Previous post ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
Next post ಭವ ರಾಟಾಳ
ಭವ ರಾಟಾಳ

Related Posts

ನಿಮ್ಮಿಂದಲೇ ನಾನು
Share:
Poems

ನಿಮ್ಮಿಂದಲೇ ನಾನು

February 11, 2022 ಜ್ಯೋತಿಲಿಂಗಪ್ಪ
ನಾನು ಹುಟ್ಟಿದ ಮೇಲೆ ಹುಟ್ಟಿತು ನನ್ನ ಇತಿಹಾಸ ನಾನು ಸತ್ತ ಮೇಲೆ ಹುಟ್ಟಿದ್ದು ನನ್ನ ಚರಿತ್ರೆ ಈ ನಡುವಿನ ಅಂತರ ನಾನು ಇದ್ದುದ್ದು ನನ್ನ ಸುಳ್ಳು ನಿಜ ನಾನು ಹೇಳಬಲ್ಲನೇ ನನ್ನ...
ಕೊನೆಯಿರದ ಚಕ್ರದ ಉರುಳು
Share:
Poems

ಕೊನೆಯಿರದ ಚಕ್ರದ ಉರುಳು

April 11, 2025 ಜಬೀವುಲ್ಲಾ ಎಂ.ಅಸದ್
ಬೆಳಗು ಕತ್ತಲಿನೊಳಗೊ ಕತ್ತಲು ಬೆಳಗಿನೊಳಗೊ ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ ಎಲ್ಲಾ ಬಯಲಾಗಿ ಬಯಲೊಳಗೊ… ಸತ್ಯ ಸುಳ್ಳಿನೊಳಗೊ ಸುಳ್ಳು ಸತ್ಯದೊಳಗೊ ಹತ್ತಿ...

Comments 2

  1. ಪೆರೂರು ಜಾರು, ಉಡುಪಿ
    Sep 18, 2022 Reply

    ಹಂಗಿಲ್ಲದ್ದಕ್ಕೆ ಲಂಗಿಲ್ಲ ಲಗಾಮಿಲ್ಲ.

  2. ಲಲಿತಾ ಜವಳಿ. ವಿಜಯಪುರ
    Sep 18, 2022 Reply

    ನನಗೆ ನಾನೇ ಪ್ರಮಾಣ- ಎನ್ನುವುದು ಒಪ್ಪತಕ್ಕ ಮಾತು. ಆದರೆ ಲಜ್ಜೆ ಯಾಕೆ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದಡ ಸೋಂಕದ ಅಲೆಗಳು
ದಡ ಸೋಂಕದ ಅಲೆಗಳು
July 10, 2025
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ
June 12, 2025
ವಚನ – ಚಿಂತನ
ವಚನ – ಚಿಂತನ
October 10, 2023
ನಿಜ ನನಸಿನ ತಾವ…
ನಿಜ ನನಸಿನ ತಾವ…
July 10, 2023
ದಾರಿಯಲ್ಲದ ದಾರಿ…
ದಾರಿಯಲ್ಲದ ದಾರಿ…
October 10, 2023
ನೆಲದ ನಿಧಾನ
ನೆಲದ ನಿಧಾನ
April 29, 2018
ದಂಪತಿಗಳಲ್ಲಿ ಅನುಭಾವ ಚಿಂತನ
ದಂಪತಿಗಳಲ್ಲಿ ಅನುಭಾವ ಚಿಂತನ
March 12, 2022
ಹುಡುಕಾಟ
ಹುಡುಕಾಟ
July 21, 2024
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
Copyright © 2026 Bayalu