Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನನ್ನು ಕ್ಷಮಿಸು
Share:
Poems April 5, 2026 ಜ್ಯೋತಿಲಿಂಗಪ್ಪ

ನನ್ನನ್ನು ಕ್ಷಮಿಸು

ಆಸೆಗಳಿರಲು ಆತಂಕ
ನಿಲ್ಲದು
ಆಯುಷ್ಯ ಇಳಿಯುವಾಗ ಆಯುಷ್ಯ ರೇಖೆಯ ಹುಡುಗಾಟ

ಹುಟ್ಟಿದರೆ ಸಾವು
ಹುಟ್ಟದಿರೆ ಸಾವಿಲ್ಲ
ಸಾವಿಗೇನು ಕೇಡೇ…

ಸಂತೆಯ ಸದ್ದಿನಲಿ
ಸಂತನಾಗುವೆಯಾದರೆ ಸಂತೆಗೂ ಸದ್ದಿಲ್ಲ

ಆಸೆ ಹುಟ್ಟಿದರೆ
ಆಸೆ ಸಾಯುವವರೆಗೂ ಹುಟ್ಟುತಲೇ ಇರುವೆ

ಸುಡದ ಬಯಕೆಗಳು
ಸುಡುತಲೇ ಇರುವವು

ನನ್ನನ್ನು ಕ್ಷಮಿಸು
ನಾನೇನು ಮಾಡುತ್ತಿದ್ದೇನೆಂದು
ನನಗೇ ಗೊತ್ತಿಲ್ಲ

ಈ
ಸರಿ ತಪ್ಪುಗಳೆಲ್ಲಾ ನನ್ನ
ಅಹಂಕಾರದ ಮುದ್ರೆಗಳು
ಸುಡಲೀ ಅಹಂ

ಸಿಟ್ಟು
ಸಂತಸದಲಿರುವಾಗ
ಮೌನ ಕ್ಷೇಮ

ಕ್ಷಮಿಸುವುದಾದರೆ
ನನ್ನ
ಅಹಂಕಾರವನ್ನ ಕ್ಷಮಿಸು
ಇಲ್ಲಾ
ಮರೆತು ಬಿಡು

ಹಾರಿದೆ
ಕ್ಷಿಪಣಿ; ಪರಿಣಾಮ
ಎದುರಿಸು

ಕಾದಾಟಗಳೆಲ್ಲಾ ಭ್ರಮೆ
ಭ್ರಮೆಗಳಿಗಾಗಿ ಕಾದಾಟ

ನನ್ನ
ರೂಹಿಂಗೆ ನಾನೇ ಮರುಳು
ಕನ್ನಡಿಯ ಹಂಗೇ…

Previous post ಅರ್ಥ – ವ್ಯರ್ಥ
ಅರ್ಥ – ವ್ಯರ್ಥ
Next post ನಡೆಯ ಎಡೆ…
ನಡೆಯ ಎಡೆ…

Related Posts

ಅನಾದಿ ಕಾಲದ ಗಂಟು…
Share:
Poems

ಅನಾದಿ ಕಾಲದ ಗಂಟು…

November 10, 2022 ಕೆ.ಆರ್ ಮಂಗಳಾ
ಹಗುರಾಗುತಿದೆ ಹೃದಯ ಹೆಗಲ ಹೊರೆ ಇಳಿದು ಭೂಮಿಗಿಂತಲೂ ವಜನ ಹತ್ತಿಗಿಂತಲೂ ಹಗುರ ಹೊರಲಾಗದ ಭಾರ ಹೊತ್ತಿದ್ದ ಎದೆಗೆ, ಈಗ ಎಂಥದೋ ನಿರಾಳ… ಕಣ್ಣುಬಿಟ್ಟಾಗಿನಿಂದ ಕಂಡದ್ದು ಎಲ್ಲೆಲ್ಲೋ...
ನಡೆಯ ಎಡೆ…
Share:
Poems

ನಡೆಯ ಎಡೆ…

April 5, 2026 ಕೆ.ಆರ್ ಮಂಗಳಾ
ಅತ್ತಿದ್ದು ನಕ್ಕಿದ್ದು ಒಳಗೊಳಗೇ ಬಿಕ್ಕಿದ್ದು ಮತ್ತೆ ಜಂಜಡಕೆ ಬೀಳಲಾರೆ ಇನ್ನು ಎಲ್ಲ ಕಲಿಸುವ ಬದುಕು ಎಲ್ಲ ತಿಳಿಸುವ ಗುರುವು ದಾಟಬಲ್ಲೆನು ಈಜಿ ನೂರು ಕಡಲು ಸುಖ-ದುಃಖ ಬರಹವನು...

Comments 3

  1. ಎನ್.ಪಿ.ಮಂಜುನಾಥ್
    Apr 9, 2026 Reply

    ಸುಡಲು ಸಾಧ್ಯವಾಗದ ಬಯಕೆಗಳು ಸುಡುತ್ತಲೇ ಇರುತ್ತವೆ… ಕಾವ್ಯದ ಚುಟುಕು ಸಾಲುಗಳಲ್ಲಿ ಚಿಂತನೆಗೆ ಹಚ್ಚುವ ಆಳ ವಿಚಾರಗಳಿವೆ…. ನಿಮ್ಮ ಕವನಗಳನ್ನು ತಪ್ಪದೇ ಓದುವೆ🙏

    • GH JYOTILINGAPPA
      Apr 10, 2026 Reply

      ನಿಮ್ಮ ಅಭಿಮಾನ ಮತ್ತು ಓದಿಗೆ ಮನ ತುಂಬಿತು.

  2. ಡಾ.ಉಮೇಶ್ ಸೊರಬ
    Apr 10, 2026 Reply

    ಸಮಕಾಲೀನ ಜಾಗತಿಕ ವಿದ್ಯಮಾನಗಳಿಗೆ ಬೀಜವಾಗಿರುವ ಅಹಮ್ ಅನ್ನು ಮೀರಲಾರದ ಮನಸ್ಥಿತಿ ಇಲ್ಲಿ ಸಜೀವ ಚಿತ್ರವಾಗಿ ರೂಪುಗೊಂಡಿದೆ. ಆಸೆ ಮತ್ತು ಆಯುಷ್ಯಗಳ ನಡುವೆ ಚಾಚಿಕೊಂಡಿರುವ ಮನುಷ್ಯನ ಕ್ರೌರ್ಯವನ್ನು ಒರೆಗೆ ಹಚ್ಚುವ ಈ ಕವಿತೆ ತನ್ನ ಎಲ್ಲಾ ಸಾಲುಗಳಲ್ಲೂ ವಿಷಾದದ ಜೊತೆಗೆ ವಿವೇಕವನ್ನೂ , ವಿವೇಕದ ಜೊತೆಗೆ ವ್ಯಂಗ್ಯವನ್ನೂ , ವ್ಯಂಗ್ಯದ ಜೊತೆಗೆ ವ್ಯಕ್ತಿತ್ವದ ಅವನತಿಯನ್ನು ರೂಪಕಗೊಳಿಸುವ ಬಗೆ ಅಪೂರ್ವವಾಗಿ ಮೂಡಿ ಬಂದಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾಲ ಮತ್ತು ದೇಶ
ಕಾಲ ಮತ್ತು ದೇಶ
September 13, 2025
ಅಲ್ಲಮಪ್ರಭು ಮತ್ತು ಮಾಯೆ
ಅಲ್ಲಮಪ್ರಭು ಮತ್ತು ಮಾಯೆ
January 7, 2022
ಪ್ರಭುವಿನ ಗುರು ಅನಿಮಿಷ -2
ಪ್ರಭುವಿನ ಗುರು ಅನಿಮಿಷ -2
September 14, 2024
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಸಕಾರವೋ… ನಕಾರವೋ…
ಸಕಾರವೋ… ನಕಾರವೋ…
July 5, 2019
ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
May 10, 2022
ದಾರಿಯಲ್ಲದ ದಾರಿ…
ದಾರಿಯಲ್ಲದ ದಾರಿ…
October 10, 2023
ನಿನಗೂ ನನಗೂ ಒಂದೇ ನಿಜ
ನಿನಗೂ ನನಗೂ ಒಂದೇ ನಿಜ
January 15, 2026
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
Copyright © 2026 Bayalu