Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮನಸ್ಸು
Share:
Poems September 7, 2020 ಕೆ.ಆರ್ ಮಂಗಳಾ

ಮನಸ್ಸು

ಏನ ಹೇಳಲಿ ಗುರುವೇ ಮನಸಿನ ಬಗೆಗೆ?
ಹಿಂದಕ್ಕೆ ಜಾರುತ್ತಾ
ಮುಂದಕ್ಕೆ ತುಯ್ಯುತ್ತಾ
ಜೋಕಾಲಿಯಾಟದಲಿ ಮೈಮರೆಸಿಬಿಟ್ಟಿದೆ
ಇದಾವ ಮರದ ಕೊಂಬೆಗೆ
ನೇತು ಹಾಕಿಕೊಂಡಿದೆ…

ಎಂದು ಕಟ್ಟಿದೆನೋ
ಅದ್ಹೇಗೆ ಏರಿ ಕೊಂಡೆನೋ
ಹಿಗ್ಗುತ್ತಾ ಹತ್ತಿ ಕೂತವಳನು
ತೂಗಿದ ಮೊದಲ ಕೈ ಅದಾವುದೋ?
ಪರಂಪರೆಯ ಉದ್ದಕ್ಕೂ
ಮೂಲ ಹುಡುಕುವುದೆಲ್ಲಿ…

ಜೀಕುವ ಆಟಕ್ಕೆ ಜೋತು ಬಿದ್ದಾಗಿದೆ
ಇಷ್ಟಾನಿಷ್ಟಗಳ ಖಯಾಲಿ
ಗಾಳಿಯಲಿ ತೇಲುವ ಸುಖ
ನೆಲಕೆ ಕಾಲಿಡಲೊಲ್ಲದ ಮರೆವು
ತೂಗಿಸಿದ ಹಗ್ಗ ಬಂಧನದ ಪಾಶವಾದದ್ದು
ತಿಳಿಯಲೇ ಇಲ್ಲ ಈ ಜೀಕಾಟದಲ್ಲಿ!

ಅತ್ತಿಂದಿತ್ತ ಇತ್ತಿಂದತ್ತ
ಕಾಲ ಸವೆಸುವ ಆಟ
ಹುಟ್ಟುತ್ತಾ- ಹೊಂದುತ್ತಾ,
ಜೀವವನೊತ್ತೆ ಇಟ್ಟು
ಜೀಕಿಕೊಳ್ಳುತ್ತಲೇ ಇದ್ದೇನೆ
ಹಿಂದಕ್ಕೆ ಮುಂದಕ್ಕೆ ಮತ್ತೆ ಮತ್ತೆ…

Previous post ಸಂತೆಯ ಸಂತ
ಸಂತೆಯ ಸಂತ
Next post ನದಿಯನರಸುತ್ತಾ…
ನದಿಯನರಸುತ್ತಾ…

Related Posts

ಅಂದು-ಇಂದು
Share:
Poems

ಅಂದು-ಇಂದು

December 8, 2021 ಕೆ.ಆರ್ ಮಂಗಳಾ
ಅಂದು- ಹೇಗೋ ಎಂತೋ ಸುರುಸುರುಳಿಯಾಗಿ ಬಗೆಬಗೆಯಲಿ ಪರಿಪರಿಯಲಿ ಸುತ್ತಿಕೊಂಡಿದ್ದು- ಮೆತ್ತಿಕೊಂಡಿದ್ದು ಬೆಳೆಯುತ್ತಾ-ಬಲಿಯುತ್ತಾ ನಂಟಾಗಿ- ಗಂಟಾಗಿ ಯಮಯಾತನೆಯ ಹೊರೆಯಾಗಿ...
ಹುಡುಕಾಟ
Share:
Poems

ಹುಡುಕಾಟ

January 15, 2026 ಜಬೀವುಲ್ಲಾ ಎಂ.ಅಸದ್
ಭವದ ಒಡಲಿಗೆ ಬಿದ್ದ ಮೇಲೆ ಇನ್ನೆಲ್ಲಿಯ ಬಿಡುಗಡೆ ಇಹದ ಬಾಳು ಬಯಕೆಗಳ ಸಂಕೋಲೆ ಜಡಿದ ಬೇಗುದಿಯ ಕಡಲು ಈಜಬೇಕಷ್ಟೆ ಕಾಣದ ತೀರ ಭೂಮಿ, ಬಾನು ಒಂದಾದಂತೆ ಕಾಣುವ ದಿಗಂತ ಕಣ್ಣಿಗೆ...

Comments 1

  1. Ganesh A.P
    Sep 13, 2020 Reply

    ಕವನದ ಜೋಲಿಯಲ್ಲಿ ನಾನೂ ತೂಗುತ್ತಿದ್ದೇನೆ. ಅರ್ಥಗರ್ಭಿತ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಬರಿದಾಗುವ ಬೆರಗು
ಬರಿದಾಗುವ ಬೆರಗು
February 6, 2025
ತತ್ವಪದಗಳ ಜಾಡು ಹಿಡಿದು…
ತತ್ವಪದಗಳ ಜಾಡು ಹಿಡಿದು…
October 6, 2020
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
April 29, 2018
ಸಾವಿನ ಸುತ್ತ…
ಸಾವಿನ ಸುತ್ತ…
January 8, 2023
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
April 11, 2025
ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
June 5, 2021
Copyright © 2026 Bayalu