Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬದುಕಲು ಇನ್ನೆಷ್ಟು ಬೇಕು?
Share:
Poems October 13, 2026 ಜಬೀವುಲ್ಲಾ ಎಂ.ಅಸದ್

ಬದುಕಲು ಇನ್ನೆಷ್ಟು ಬೇಕು?

ನಾನು ಸಾಯುತ್ತೇನೆ
ನೀನೂ, ಎಲ್ಲರೂ ಸಹ
ಇಂದಿಲ್ಲದಿದ್ದರೆ ನಾಳೆ
ಸಾವು ಮಾತ್ರ ಶತ:ಸಿದ್ಧ
ಮತ್ತು ಅಷ್ಟೇ ಸಹಜ

ಒಳಿತು ಕೆಡುಕಾಗುವುದು
ಕೆಡುಕು ಕಾಣದಾಗುವುದು
ಕಣ್ಣಿದ್ದು ಕುರುಡು
ಕಿವಿ ಇದ್ದು ಕಿವುಡು
ಮುಂಜಾನೆ ಅರಳಿದ ಹೂ
ಸಂಜೆಗೆ ಬಾಡುವುದು
ಇಷ್ಟೇ ಬದುಕು

ಕಟ್ಟಿಸಿದ ಆ ಮನೆ
ಹೊತ್ತು ತಿರುಗುವ ಈ ದೇಹ
ಬೆಳೆದು ನಿಂತ ಮರ
ಎಲ್ಲವೂ ಒಂದೇ
ಬಿದ್ದುಹೋಗುವವು
ಇರುವಂತೆಯೆ…

ಕೂಡಿಟ್ಟ ಕಾಸು
ಬಚ್ಚಿಟ್ಟ ಒಡವೆ
ಬಯಕೆಗಳ ಕಾವು
ಉದರದ ಹಸಿವು
ಸಂತಸ, ನೋವು
ಎಲ್ಲಾ ಇಲ್ಲವಾಗುವುದು

ಸೋಲುವ ಕಾಲು
ಸವೆಯದ ದಾರಿ
ಸಾಗಬೇಕಿದೆ ಸುಮ್ಮನೆ
ಗಮ್ಯವ ಹುಡುಕುತಲಿ
ಕಾಣದ ನಂಬುಗೆಯ
ಭರವಸೆಯ ಬೆರಳ್ಹಿಡಿದು

ಬೆಳಗುವ ಅರಿವಿನ ದೀಪ
ನಿನ್ನೊಳಗಿನ ಜ್ಞಾನದ ಸ್ವರೂಪ
ಮೊದಲು ಹೊತ್ತಿಸು ಅದನು
ಕವಿದ ಕತ್ತಲು ನಿನ್ನ
ಪೂರ್ಣ ಆವರಿಸುವ ಮುನ್ನ

ಪಡೆದದ್ದಲ್ಲಿ ಕಳೆದದ್ದೆ ಕಡಿಮೆ
ಬದುಕಿನ ಪರಿಪಾಠದಿ
ಅನುಭವದ ಮಹಿಮೆ
ಬೇಕು ಅನ್ನುವುದೆಲ್ಲಾ ಇನ್ನೂ ಸಾಕು
ಬಯಕೆಗಳಿಗೆ ಬೇಲಿ ಹಾಕು
ಬದುಕಲು ಇನ್ನೆಷ್ಟು ಬೇಕು

ಇನ್ನೆಷ್ಟು ಬೇಕು?

Previous post ಸಾಧನಾ ಚತುಷ್ಟಯಗಳು
ಸಾಧನಾ ಚತುಷ್ಟಯಗಳು
Next post ಸದ್ದ ಸಂಭ್ರಮ
ಸದ್ದ ಸಂಭ್ರಮ

Related Posts

ಎರಡು ಎಲ್ಲಿ?
Share:
Poems

ಎರಡು ಎಲ್ಲಿ?

October 5, 2021 ಕೆ.ಆರ್ ಮಂಗಳಾ
ನಾನು ದ್ವೈತವೋ ಅದ್ವೈತವೋ ಹೀಗೊಂದು ಪ್ರಶ್ನೆ ಎದ್ದದ್ದೇ ತಡ ನಡೆದಿತ್ತು ಒಳಗೊಂದು ತಾಕಲಾಟ- ಒಂದೆಡೆ- ನೆನಪುಗಳಿಗೆ, ಕನಸುಗಳಿಗೆ ಪ್ರೀತಿಯ ಕನವರಿಕೆಗಳಿಗೆ ಎದೆಯ ಹಂಬಲಗಳಿಗೆಲ್ಲ...
ಹೀಗೊಂದು ಸಂವಾದ…
Share:
Poems

ಹೀಗೊಂದು ಸಂವಾದ…

April 6, 2023 ಕೆ.ಆರ್ ಮಂಗಳಾ
ಶಿಷ್ಯೆ: ಮರೆವಿನ ಹಿಡಿತಕೆ ಮನ ಸಿಲುಕಿಹುದು ಬಯಕೆಯ ಸೆಲೆಗೆ ಮರುಳಾಗಿಹುದು ಕಾಣುವೆನೆಂತು ಜೀವದ ಸೊಬಗ ಅರಿಯುವುದೆಂತು ಪ್ರಾಣದ ಹೊಲಬ ಗೊತ್ತಿಲ್ಲದ ನಡಿಗೆ ಕತ್ತಲ ದಾರಿ...

Comments 2

  1. ಭರತ್ ಪಿ
    Oct 20, 2026 Reply

    ಬಯಕೆಗಳಿಗೆ ಬೇಲಿ ಹಾಕಲು ಸಾಧ್ಯವೆ? ಹೊಸಹೊಸ ಬೇಕುಗಳನ್ನು ಬೆನ್ನತ್ತುವ ಮನಸ್ಸಿಗೆ ಬೇಲಿ ಹಾಕೋದು ಹೇಗೆ?

  2. ಸೋಮು ಧಾರವಾಡ
    Oct 27, 2026 Reply

    ಬದುಕಲು ನಿಜಕ್ಕೂ ಎಷ್ಟು ಬೇಕು, ಏನು ಬೇಕು ಅನ್ನೋ ಗೊಂದಲದಲ್ಲೇ ಮನುಷ್ಯ ಲೋಕ ಬಳಲುತ್ತಿದೆ😦

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮನವೇ ಮನವೇ…
ಮನವೇ ಮನವೇ…
May 6, 2020
ಮುಖ- ಮುಖವಾಡ
ಮುಖ- ಮುಖವಾಡ
February 7, 2021
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
July 10, 2025
ಬಸವನಾ ಯೋಗದಿಂ…
ಬಸವನಾ ಯೋಗದಿಂ…
July 1, 2018
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
Copyright © 2026 Bayalu