
ಬೆಂಕಿಯೊಳಗಣ ಬೆಳಕು
ನಿಜದ ಮುಖವ ಬಲ್ಲೆಯಾ
ಅವರ ಮುಖವ ಇವರು ನೋಡುವುದು
ಇವರ ಮುಖವ ಅವರು ನೋಡುವುದು
ಅವರವರ ಮುಖವ ಅವರರಿಯರು
ಇಚ್ಛೆಯನರಿದು ಮಾತಾಡಿದರೆ ಮೆಚ್ಚುಗೆ
ಹನಿ ಹನಿ ಹರಿದು ಹಳ್ಳ
ಹಳ್ಳ ಹಳ್ಳ ಹರಿದು ಕೊಳ್ಳ
ಕೊಳ್ಳ ಕೊಳ್ಳ ಹರಿದು ಅಬ್ಧಿ
ಹಿರಿದು ಕಿರಿದುಂಟೇ ನೀರಿಗೆ
ಬೆಳಕು ಕಾಣುವ ಕಣ್ಣು
ನೆಲ ಮುಟ್ಟುವ ಪಾದ ಸಯವೇ
ಬೆಂಕಿ ಒಳಗಣ ಬೆಳಕು ಕಣ್ಣ ಸುಟ್ಟಿತ್ತು
ಇದೇನು ಮರೆವೆಯೋ
ಸಾವಿಲ್ಲದೆ ಹುಟ್ಟು ಹೇಗಾದೀತು
ಹುಟ್ಟಿದವುಗಳನೆಲ್ಲಾ ಕೊಲ್ಲುವ ವೇದಿಕೆ ಈ ಜಗತ್ತು
ನೋಡದೆಯೇ ಕಾಣ ಬಂದುದೇ ಜ್ಞಾನ
ನೋಡಿಯೂ ಕಾಣದುದೇ ಅಜ್ಞಾನ
ಕತ್ತಲ ಸುಡುವ ಬೆಂಕಿ ತಮಂಧ
ಘನ ಅರಿಯದೇ….
ಈ ನುಡಿಗಳೆಲ್ಲಾ ನಿನ್ನೆಯದು
ನಾಳೆ ಎಂಬುದು ಏನು…
Comments 2
Dr. K.s.Mallesh, Mysuru
Jun 12, 2025ಬೆಂಕಿಯೊಳಗನ ಬೆಳಕು ಕವನ ಗತಿ ಚೆಂದ ಆದರೆ ಇಲ್ಲಿನ ಸಾಲುಗಳ ಭಾವಾರ್ಥ ತಿಳಿಯಲಿಲ್ಲ.
ಸುಮತಿ ರವೀಂದ್ರ
Jun 22, 2025ಅನಂತದ ಹುಡುಕಾಟದಲ್ಲಿ ನಾಳೆ ಎಂಬುದು ಏನು- ಅನುಭಾವಿಯ ಪ್ರಶ್ನೆ.