Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಂಕಿಯೊಳಗಣ ಬೆಳಕು
Share:
Poems June 12, 2025 ಜ್ಯೋತಿಲಿಂಗಪ್ಪ

ಬೆಂಕಿಯೊಳಗಣ ಬೆಳಕು

ನಿಜದ ಮುಖವ ಬಲ್ಲೆಯಾ
ಅವರ ಮುಖವ ಇವರು ನೋಡುವುದು
ಇವರ ಮುಖವ ಅವರು ನೋಡುವುದು
ಅವರವರ ಮುಖವ ಅವರರಿಯರು

ಇಚ್ಛೆಯನರಿದು ಮಾತಾಡಿದರೆ ಮೆಚ್ಚುಗೆ

ಹನಿ ಹನಿ ಹರಿದು ಹಳ್ಳ
ಹಳ್ಳ ಹಳ್ಳ ಹರಿದು ಕೊಳ್ಳ
ಕೊಳ್ಳ ಕೊಳ್ಳ ಹರಿದು ಅಬ್ಧಿ

ಹಿರಿದು ಕಿರಿದುಂಟೇ ನೀರಿಗೆ

ಬೆಳಕು ಕಾಣುವ ಕಣ್ಣು
ನೆಲ ಮುಟ್ಟುವ ಪಾದ ಸಯವೇ

ಬೆಂಕಿ ಒಳಗಣ ಬೆಳಕು ಕಣ್ಣ ಸುಟ್ಟಿತ್ತು
ಇದೇನು ಮರೆವೆಯೋ

ಸಾವಿಲ್ಲದೆ ಹುಟ್ಟು ಹೇಗಾದೀತು
ಹುಟ್ಟಿದವುಗಳನೆಲ್ಲಾ ಕೊಲ್ಲುವ ವೇದಿಕೆ ಈ ಜಗತ್ತು

ನೋಡದೆಯೇ ಕಾಣ ಬಂದುದೇ ಜ್ಞಾನ
ನೋಡಿಯೂ ಕಾಣದುದೇ ಅಜ್ಞಾನ

ಕತ್ತಲ ಸುಡುವ ಬೆಂಕಿ ತಮಂಧ
ಘನ ಅರಿಯದೇ….

ಈ ನುಡಿಗಳೆಲ್ಲಾ ನಿನ್ನೆಯದು
ನಾಳೆ ಎಂಬುದು ಏನು…

Previous post ಸನ್ಯಾಸ ದೀಕ್ಷೆ
ಸನ್ಯಾಸ ದೀಕ್ಷೆ
Next post ಹಾದಿಯ ಹಣತೆ…
ಹಾದಿಯ ಹಣತೆ…

Related Posts

ಪೊರೆವ ದನಿ…
Share:
Poems

ಪೊರೆವ ದನಿ…

August 11, 2025 ಕೆ.ಆರ್ ಮಂಗಳಾ
ಮೈಯೆಲ್ಲಾ ಕಿವಿಯಾಗಿ ಮನವೆಲ್ಲಾ ಕಣ್ಣಾಗಿ ಕೇಳಿಸಿಕೊಂಡೆನಯ್ಯಾ ನೀನಾಡಿದ ಒಂದೊಂದು ನುಡಿಯ ಮರೆತು ಹೋಗದಂತೆ ನಾಲಿಗೆಗೆ ಮಂತ್ರವಾಗಿಸಿದೆ ಜಾರಿಹೋಗದಂತೆ ಜೋಪಾನದಿ...
ವರದಿ ಕೊಡಬೇಕಿದೆ
Share:
Poems

ವರದಿ ಕೊಡಬೇಕಿದೆ

March 17, 2021 ಕೆ.ಆರ್ ಮಂಗಳಾ
ತನುವ ಭೇದಿಸಿ, ಮನವ ಶೋಧಿಸಿ ವರದಿ ಕೊಡಲು ಅಟ್ಟಿದ್ದಾನೆ ಗುರು ನನ್ನೊಳಗೆ ನನ್ನ… ಗೊಂದಲದ ಗೂಡೆಂದು ನೆಪ ಒಡ್ಡುವಂತಿಲ್ಲ ಮುಗ್ಗಲು ವಾಸನೆಯೆಂದು ಹಿಂದೆ ಬರುವಂತಿಲ್ಲ ಎಲ್ಲೋ...

Comments 2

  1. Dr. K.s.Mallesh, Mysuru
    Jun 12, 2025 Reply

    ಬೆಂಕಿಯೊಳಗನ ಬೆಳಕು ಕವನ ಗತಿ ಚೆಂದ ಆದರೆ ಇಲ್ಲಿನ ಸಾಲುಗಳ ಭಾವಾರ್ಥ ತಿಳಿಯಲಿಲ್ಲ.

  2. ಸುಮತಿ ರವೀಂದ್ರ
    Jun 22, 2025 Reply

    ಅನಂತದ ಹುಡುಕಾಟದಲ್ಲಿ ನಾಳೆ ಎಂಬುದು ಏನು- ಅನುಭಾವಿಯ ಪ್ರಶ್ನೆ.

Leave a Reply to Dr. K.s.Mallesh, Mysuru Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
June 5, 2021
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
ಒಳಗಣ ಮರ
ಒಳಗಣ ಮರ
March 12, 2022
ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)
September 13, 2025
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ವೀರ
ವೀರ
April 29, 2018
ಶರಣ- ಎಂದರೆ…
ಶರಣ- ಎಂದರೆ…
March 6, 2020
Copyright © 2025 Bayalu