Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿನ್ನದೊಂದು ಸ್ಪರ್ಶ
Share:
Poems February 16, 2026 ಕೆ.ಆರ್ ಮಂಗಳಾ

ನಿನ್ನದೊಂದು ಸ್ಪರ್ಶ

ಅಷ್ಟು ಸಲೀಸಲ್ಲಾ ಬಿಡು
ನಿನ್ನ ಕೈ ಹಿಡಿಯುವುದು
ಎದುರಿದ್ದೂ ಅವಿತಿರುವ
ನಿನ್ನಿರುವಿಗೆ ಅಡಿಯಿಡುವುದು…

ಇಲ್ಲೇ, ಇದೇ ಗಳಿಗೆಯಲ್ಲೇ…
ಈ ಕ್ಷಣವೇ…
ನೀನು ಪ್ರತ್ಯಕ್ಷವಂತೆ!
ಯಾರಾದರೂ ಬಂದಾರೆಯೇ
ಎಂದು ಕೈಚಾಚಿ
ಕಾಯುತ್ತಿರುವೆಯಂತೆ
ಗುರು ಹೀಗೆ ಹೇಳಿದಾಗ
ಎಷ್ಟು ಸುಲಭವೆಂದೆಣಿಸಿದ್ದೆ…

ಅಂದಿನಿಂದ ದಿನಬೆಳಗಾದರೆ
ನಿನ್ನ ಮುಟ್ಟುವ
ಒಂದೇ ಕೋರಿಕೆ
ಹಗಲು-ರಾತ್ರಿ
ನಿನ್ನದೊಂದು ಸ್ಪರ್ಶಕೆ
ಹಾತೊರೆವ ಮನಸ್ಸೇ
ನಿನ್ನ ತಲುಪದಂತೆ
ನೋಡಿಕೊಳ್ಳುವ ಸಂಚ
ತಿಳಿದು ಕಂಗಾಲಾದೆ!
ಹಂಬಲಿಸುವ ಮನದ
ಹುನ್ನಾರಗಳು ಒಂದೇ ಎರಡೇ…

ನೋಟದ ಮಿತಿಗೆ
ತೆರೆದು ನಿಂತ ಆಗಸವೂ
ಕಂಗಳೊಳಗೆ ಇಳಿಯದು!
ಕೇಳುವ ಮಿತಿಗೆ
ಮೌನದ ಭಾಷೆ ಕೇಳಿಸದು!
ಬಿಡದ ವಾಸನೆಗಳ ನಂಟು
ಬಗಲ ಮುಳ್ಳಾಗಿಹುದು!

ನಿನ್ನೂರ ನಕ್ಷೆ ಹಿಡಿದು
ಉಸಿರ ಎಳೆಯಗುಂಟ
ಇಳಿದುಬರುವಾಗ
ಮಾಯಗಾರನಂತೆ ನುಗ್ಗಿ
ಮೌನಕೆಡಸಿ ಮಾತಿಗೆಳೆದು
ದಿಕ್ಕುತಪ್ಪಿಸುವ ಚಿತ್ತದ ಕೇಡ
ಹೇಳಲಿ ಯಾರಿಗೆ?

ನಿನ್ನ ಜಾಡ ಹಿಡಿದು
ಎಚ್ಚರದಿ ನಡೆವಾಗಲೂ
ಯಾವುದೋ ನೆನಪುಗಳು
ಯಾರದೋ ಸದ್ದುಗಳು
ಒಂದರೊಳೊಂದು ತೂರಿ
ಎತ್ತೊಯ್ಯುವವು ದೂರಕೆ… ಬಹು ದೂರಕೆ…
ಅಂಗುಲಂಗುಲಕೆ ಸೀಳುವ
ಅಸಂಖ್ಯ ಹಾದಿಗಳತ್ತ
ಹೊರಹೊರಳಿ ದಣಿವವು ಕಾಲುಗಳು…
ಮತ್ತೆ ಆ ಗವ್ವನೆಯ ಕತ್ತಲೆ
ಗಪ್ಪೆಂದು ಅಮರಿಕೊಳ್ಳುವುದು.

ಅತ್ತ ತನ್ನ ಅಸ್ತಿತ್ವಕ್ಕಾಗಿ
ಚಡಪಡಿಸುವ ಮನಸೇ
ಶೂನ್ಯವಾಗಲೂ ಬಯಸುತ್ತಿದೆ…
ಇತ್ತ ತನ್ನ ಕೋಟಿ ರೂಪಗಳ
ತಾನೇ ಕೊಲ್ಲಲು
ಹಿಂದೇಟೂ ಹಾಕುತ್ತದೆ…
ಭವದೊಳು ಮುಳುಗಿಸಿ
ಬೆಪ್ಪಾಗಿ ನಿಲ್ಲುತ್ತದೆ…

ಬಲ್ಲೆ ನಾನು
ನನ್ನಿರುವಿಕೆಯಲ್ಲಿಯೇ
ನೀನಿರುವ ಗುಟ್ಟು!
ಏನ ಮಾಡಲಿ ಹೇಳು
ಈಜು ಬಲ್ಲವಳಲ್ಲಾ
ಒಳಸುಳಿವುಗಳ ಹರಿವು
ಅರಿತವಳಲ್ಲಾ
ಗುರುವಿನಂಗಿಯ ಚುಂಗ ಹಿಡಿದು
ಮಹಾಮೌನದ ಸಂಜ್ಞೆಗೆ
ಶರಣು ಬಂದಿರುವೆ.

Previous post ಕುರುಹೇ ಬಯಲು
ಕುರುಹೇ ಬಯಲು
Next post ನಾಥರು ಮತ್ತು ಶರಣರು-2
ನಾಥರು ಮತ್ತು ಶರಣರು-2

Related Posts

ಗುರುಪಥ
Share:
Poems

ಗುರುಪಥ

January 4, 2020 ಕೆ.ಆರ್ ಮಂಗಳಾ
ಎಲ್ಲೆಲ್ಲಿಯೋ ಸುತ್ತಿ, ಎಲ್ಲೆಲ್ಲಿಯೋ ಅಲೆದು ಕಂಡಕಂಡವರನ್ನೆಲ್ಲ ಕೇಳಿ ಓದುಬಲ್ಲವರನ್ನೆಲ್ಲ ಹುಡುಕಿ ಸುಸ್ತಾದದ್ದೆ ಬಂತು, ದಾರಿ ಸಿಗಲಿಲ್ಲ ಹೇಳುವದನ್ನೆಲ್ಲ ಹಿಡಿದು...
ನೀರು… ಬರಿ ನೀರೇ?
Share:
Poems

ನೀರು… ಬರಿ ನೀರೇ?

December 13, 2024 ಜ್ಯೋತಿಲಿಂಗಪ್ಪ
ಕತ್ತಲೆಂಬುದು ಕಣ್ಣ ಮುಂದೋ ಕಣ್ಣ ಹಿಂದೋ… ಜ್ಞಾನ ಎಂಬುದು ಅರಿವಲ್ಲ ಅರಿದರೆ ಅಜ್ಞಾನ… ಕತ್ತಲ ಒಳಗಣ ಬೆಳಕ ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ ಜ್ಞಾನವೇನು...

Comments 2

  1. K S Mallesh
    Feb 17, 2026 Reply

    ನಿನ್ನದೊಂದು ಸ್ಪರ್ಷ ಒಳ್ಳೆಯ ಕವನ. ಕವನ ಎನ್ನುವುದಕ್ಕಿಂತಲೂ ಒಂದು ನಿಜ ಹಂಬಲಹೊತ್ತು ಹುಡುಕಾಡುತ್ತಿರುವ ವ್ಯಕ್ತಿಯೊಬ್ಬರ ಆತ್ಮಗಾಥೆ. ಬಿಡದ ಲೌಕಿಕದ ಸೆಳೆತಗಳಲ್ಲಿ ಸಿಲುಕಿ ಬೇಸತ್ತು  ಅಲೌಕಿಕಗಳೆಡೆಗೆ ಕಾತರಿಸುವ ಮನಕ್ಕೆ ಕಿಂಚಿತ್ ಅನುಗ್ರಹ ಸ್ಪರ್ಶ ರೂಪದಲ್ಲಿ
    ಸಿಕ್ಕರೆ ಸಾಕೆನಿಸಿದೆ.  ಸರಳ ಪದಗಳಲ್ಲಿ ತುಂಡು ಸಾಲುಗಳಲ್ಲಿ ಭಾವನೆಗಳ ಹೂಗೊಂಚಲಿದೆ. ನಿಮಗೆ ನಮನಗಳು

  2. ಜ್ಯೋತಿಲಿಂಗಪ್ಪ, ಬೆಂಗಳೂರು
    Feb 24, 2026 Reply

    ಸ್ಪರ್ಶ…ಒಳ್ಳೆಯ ಸ್ಪರ್ಶ..ಓದು
    ತುಂಬಾ ಮುದ.

Leave a Reply to ಜ್ಯೋತಿಲಿಂಗಪ್ಪ, ಬೆಂಗಳೂರು Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಎಲ್ಲಿದೆ ಈ ಕ್ಷಣ?
ಎಲ್ಲಿದೆ ಈ ಕ್ಷಣ?
October 21, 2024
ನೆಮ್ಮದಿ
ನೆಮ್ಮದಿ
April 6, 2020
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
October 10, 2023
ನಾನೊಂದು ನೀರ್ಗುಳ್ಳೆ
ನಾನೊಂದು ನೀರ್ಗುಳ್ಳೆ
September 6, 2023
ಸೂರ್ಯ
ಸೂರ್ಯ
January 8, 2023
ನಿಜ ನನಸಿನ ತಾವ…
ನಿಜ ನನಸಿನ ತಾವ…
July 10, 2023
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2
August 10, 2023
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
December 9, 2025
ಗುರುವಿಗೆ ನಮನ…
ಗುರುವಿಗೆ ನಮನ…
January 8, 2023
Copyright © 2026 Bayalu