Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುವೆ ಸುಜ್ಞಾನವೇ…
Share:
Poems September 7, 2021 ಕೆ.ಆರ್ ಮಂಗಳಾ

ಗುರುವೆ ಸುಜ್ಞಾನವೇ…

ಇದೆ ಎಂದೊಲಿದದ್ದು ಇಲ್ಲ
ಹಾಗೇನೂ ಅಲ್ಲ
ಎಂದು ಬಲವಾಗಿ ನಂಬಿದ್ದೂ
ಇಲ್ಲವೇ ಇಲ್ಲ…

ಹಂಬಲಿಸಿ ಹಿಡಿದಿದ್ದೆ
ಹಟ ತೊಟ್ಟು ಪಡೆದಿದ್ದೆ
ಹಬ್ಬಿಸಿಕೊಂಡಿದ್ದೇ
ಕುಸುರಿ ಭಾವಗಳ,
ಮನದ ಕವಾಟಗಳಲ್ಲಿ
ಮಧುರ ಮಾತುಗಳಲ್ಲಿ…

ಬಣ್ಣಗೆಟ್ಟವು
ದಿಕ್ಕು ಬದಲಿಸಿದವು
ನಾನೆಂಬ ದಿಬ್ಬವನು
ಒದ್ದು ಓಡಿದವು
ಕಾಲಸರಿದಂತೆಲ್ಲ
ಎಲ್ಲೋ ಮಾಯವಾದವು.
ಆದರೂ…
ಹಳಹಳಿಸಿದ ಮನ
ಮರೆವ ಕೊಡವಲಿಲ್ಲ
ಕಣ್ಣಲ್ಲಿ ಕಣ್ಣಿಟ್ಟು
ನಿಜವ ಹುಡುಕಲಿಲ್ಲ
ನಿಶೆ ಇಳಿದ ಮೇಲಾದರೂ
ಹಗಲಾಗ ಬೇಕಿತ್ತು…

ಪೊರೆಗಟ್ಟಿದ ಕಣ್ಣಲಿ
ಬೆಳಕಿನೆಳೆಗಳು
ತೂರುವುದು ಉಂಟೆ?
ಕಂಬಳಿ ಹೊದ್ದ ಎದೆಗೆ
ತಿಳಿಗಾಳಿಯಲೆ
ನುಸುಳ ಬಲ್ಲುದೆ?
ಉಸಿರಿಗೆ ತಡೆಯಾದ
ಹೊದಿಕೆಯ ಸರಿಸಲು
ಗಮನಕೆ ಅಡ್ಡಿಯಾದ
ಪೊರೆಯ ಕತ್ತರಿಸಲು
ನಿಂತ ಕಾಲುಗಳಿಗೆ
ನಡೆಯ ತೋರಿಸಲು
ಓ ಗುರುವೇ…
ನೀನೇ ಬರಬೇಕಾಯಿತು
ಕೈಹಿಡಿದು
ಭಾವ ಕಂದಕವನು
ದಾಟುವುದ ಕಲಿಸಲು.

Previous post ಕಣ್ಣ ದೀಪ
ಕಣ್ಣ ದೀಪ
Next post ವಚನಗಳ ಮಹತ್ವ
ವಚನಗಳ ಮಹತ್ವ

Related Posts

ಬಯಲಾಟ
Share:
Poems

ಬಯಲಾಟ

March 17, 2021 ಜ್ಯೋತಿಲಿಂಗಪ್ಪ
ಆ ಮನೆ ಬಿಟ್ಟು ಬಂದಿರುವೆ ಎಂಬುದು ಈಗಲೂ ಇದೆ ಆ ಮನೆ ಇದೆಯೇ ಎಂಬುದು ಈಗಲೂ ಇದೆ ನಿಜ ಸುಳ್ಳು ಎಂಬುದು ನನ್ನ ಹಿತ ಆ ಮನೆ ಸಮುದ್ರ ದಾಟಲು ಹಾರುವ ಚಿಟ್ಟೆ ಹುಡುಕುತಿರುವೆ ಇನ್ನೂ...
ಈ ಬಳ್ಳಿ…
Share:
Poems

ಈ ಬಳ್ಳಿ…

October 21, 2024 ಜ್ಯೋತಿಲಿಂಗಪ್ಪ
ಗಾಳಿ ಉರಿಸುವುದು ಆರಿಸುವುದು ದೀಪ ಬೆಳಗಿಸುವುದು ಯಾರು…? ನಾನೂ ಒಂದು ದೀಪ ದ್ವೀಪದ ದಡ ಕಾಯುತ್ತಾ ಕಾಯುತ್ತಾ ಅಲೆ ಎಣಿಸುತಿರುವೆ ಈ ಸಂಖ್ಯೆ ಮೂರನ್ನು ದಾಟದೇ… ಈ...

Comments 3

  1. Chandrika
    Sep 11, 2021 Reply

    ಭಾವದ ಭವವನ್ನು ದಾಟಲು ಗುರುವಿನ ಕೈಹಿಡಿದು ನಡೆವ ಬಗೆ ಸುಂದರವಾಗಿ ಅಭಿವ್ಯಕ್ತವಾಗಿದೆ.

  2. ಕೆ. ಎಸ್. ಮಲ್ಲೇಶ್
    Oct 8, 2021 Reply

    ಸರಳ ಹಾಗೂ ನೇರ ಪದಗಳಲ್ಲಿ ಅನುಪಮ ರೂಪಕಗಳ ಮೂಲಕ ಗುರುವಿನ ಮಹತ್ವವನ್ನು ಮನಮುಟ್ಟುವಂತೆ ತಿಳಿಸುವ ಕವನ. ಐಹಿಕ ಬದುಕಿನ ತೋರಿಕೆಯ ಆವರಣದೊಳಗೆ ಸಿಲುಕಿದ ಜೀವಕ್ಕೆ ಕೊನೆಗೂ ಗುರು ನಿಲುಕಿದ್ದು -ಇದೇ ಭವಕ್ಕೆ ಅನುಭಾವದ ಸಿಂಚನ

  3. SHARAN swami
    Oct 14, 2021 Reply

    ಗುರು ಶಿಷ್ಯರ ಸಂಬಂಧದ ಮಹತ್ವ ಮಧುರ ರೀತಿಯಲ್ಲಿ ಭಾವಗಳ ಮೂಲಕ ವ್ಯಕ್ತಪಡಿಸಿದ್ಧಿರಿ. ಶರಣು ಶರಣಾರ್ಥಿ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗುಟುಕು ಆಸೆ…
ಗುಟುಕು ಆಸೆ…
May 8, 2024
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
July 10, 2023
ಗಂಟಿನ ನಂಟು
ಗಂಟಿನ ನಂಟು
November 7, 2020
  ಅವಿರಳ ಅನುಭಾವಿ-3
  ಅವಿರಳ ಅನುಭಾವಿ-3
May 6, 2020
ಲಿಂಗದ ಹಂಗೇ…
ಲಿಂಗದ ಹಂಗೇ…
September 10, 2022
ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
September 14, 2024
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
Copyright © 2026 Bayalu