Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುವೆ ಸುಜ್ಞಾನವೇ…
Share:
Poems September 7, 2021 ಕೆ.ಆರ್ ಮಂಗಳಾ

ಗುರುವೆ ಸುಜ್ಞಾನವೇ…

ಇದೆ ಎಂದೊಲಿದದ್ದು ಇಲ್ಲ
ಹಾಗೇನೂ ಅಲ್ಲ
ಎಂದು ಬಲವಾಗಿ ನಂಬಿದ್ದೂ
ಇಲ್ಲವೇ ಇಲ್ಲ…

ಹಂಬಲಿಸಿ ಹಿಡಿದಿದ್ದೆ
ಹಟ ತೊಟ್ಟು ಪಡೆದಿದ್ದೆ
ಹಬ್ಬಿಸಿಕೊಂಡಿದ್ದೇ
ಕುಸುರಿ ಭಾವಗಳ,
ಮನದ ಕವಾಟಗಳಲ್ಲಿ
ಮಧುರ ಮಾತುಗಳಲ್ಲಿ…

ಬಣ್ಣಗೆಟ್ಟವು
ದಿಕ್ಕು ಬದಲಿಸಿದವು
ನಾನೆಂಬ ದಿಬ್ಬವನು
ಒದ್ದು ಓಡಿದವು
ಕಾಲಸರಿದಂತೆಲ್ಲ
ಎಲ್ಲೋ ಮಾಯವಾದವು.
ಆದರೂ…
ಹಳಹಳಿಸಿದ ಮನ
ಮರೆವ ಕೊಡವಲಿಲ್ಲ
ಕಣ್ಣಲ್ಲಿ ಕಣ್ಣಿಟ್ಟು
ನಿಜವ ಹುಡುಕಲಿಲ್ಲ
ನಿಶೆ ಇಳಿದ ಮೇಲಾದರೂ
ಹಗಲಾಗ ಬೇಕಿತ್ತು…

ಪೊರೆಗಟ್ಟಿದ ಕಣ್ಣಲಿ
ಬೆಳಕಿನೆಳೆಗಳು
ತೂರುವುದು ಉಂಟೆ?
ಕಂಬಳಿ ಹೊದ್ದ ಎದೆಗೆ
ತಿಳಿಗಾಳಿಯಲೆ
ನುಸುಳ ಬಲ್ಲುದೆ?
ಉಸಿರಿಗೆ ತಡೆಯಾದ
ಹೊದಿಕೆಯ ಸರಿಸಲು
ಗಮನಕೆ ಅಡ್ಡಿಯಾದ
ಪೊರೆಯ ಕತ್ತರಿಸಲು
ನಿಂತ ಕಾಲುಗಳಿಗೆ
ನಡೆಯ ತೋರಿಸಲು
ಓ ಗುರುವೇ…
ನೀನೇ ಬರಬೇಕಾಯಿತು
ಕೈಹಿಡಿದು
ಭಾವ ಕಂದಕವನು
ದಾಟುವುದ ಕಲಿಸಲು.

Previous post ಕಣ್ಣ ದೀಪ
ಕಣ್ಣ ದೀಪ
Next post ವಚನಗಳ ಮಹತ್ವ
ವಚನಗಳ ಮಹತ್ವ

Related Posts

ಕಾಣದ ಬೆಳಕ ಜಾಡನರಸಿ…
Share:
Poems

ಕಾಣದ ಬೆಳಕ ಜಾಡನರಸಿ…

December 13, 2024 ಜಬೀವುಲ್ಲಾ ಎಂ.ಅಸದ್
ಮರೆತ ಇಳಿ ಸಂಜೆಯೊಂದು ಮುಂಜಾನೆಗೆ ಕಾಡುವಾಗ ಕಾಫಿ ಮುಗಿದ ಕಪ್ಪಿನಲಿ ತುಂಬಿ ಚೆಲ್ಲಿದೆ ವೈರಾಗ್ಯ ಶೂನ್ಯ ಹೀರಿದವನೆ ವಶ ಕಾಲು ಮುರಿದ ಕುರ್ಚಿಯ ಮೇಲು ಕಾಲಿನ ಮೇಲೆ ಕಾಲು ಹಾಕಿ...
ಗಂಟಿನ ನಂಟು
Share:
Poems

ಗಂಟಿನ ನಂಟು

November 7, 2020 ಕೆ.ಆರ್ ಮಂಗಳಾ
ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ ನೂಲುವಾಗ ಗೊತ್ತಾಗಲೇ ಇಲ್ಲ ಎಂಥ ಸಿಕ್ಕುಗಳು ಅಂತೀರಿ! ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು ಅಹಮಿಕೆಗೆ ಆಕ್ರೋಶದ ಗಂಟು ಆಕ್ರೋಶಕೆ...

Comments 3

  1. Chandrika
    Sep 11, 2021 Reply

    ಭಾವದ ಭವವನ್ನು ದಾಟಲು ಗುರುವಿನ ಕೈಹಿಡಿದು ನಡೆವ ಬಗೆ ಸುಂದರವಾಗಿ ಅಭಿವ್ಯಕ್ತವಾಗಿದೆ.

  2. ಕೆ. ಎಸ್. ಮಲ್ಲೇಶ್
    Oct 8, 2021 Reply

    ಸರಳ ಹಾಗೂ ನೇರ ಪದಗಳಲ್ಲಿ ಅನುಪಮ ರೂಪಕಗಳ ಮೂಲಕ ಗುರುವಿನ ಮಹತ್ವವನ್ನು ಮನಮುಟ್ಟುವಂತೆ ತಿಳಿಸುವ ಕವನ. ಐಹಿಕ ಬದುಕಿನ ತೋರಿಕೆಯ ಆವರಣದೊಳಗೆ ಸಿಲುಕಿದ ಜೀವಕ್ಕೆ ಕೊನೆಗೂ ಗುರು ನಿಲುಕಿದ್ದು -ಇದೇ ಭವಕ್ಕೆ ಅನುಭಾವದ ಸಿಂಚನ

  3. SHARAN swami
    Oct 14, 2021 Reply

    ಗುರು ಶಿಷ್ಯರ ಸಂಬಂಧದ ಮಹತ್ವ ಮಧುರ ರೀತಿಯಲ್ಲಿ ಭಾವಗಳ ಮೂಲಕ ವ್ಯಕ್ತಪಡಿಸಿದ್ಧಿರಿ. ಶರಣು ಶರಣಾರ್ಥಿ

Leave a Reply to Chandrika Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
September 7, 2020
ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)
September 13, 2025
ಎಲ್ಲಿದ್ದೇನೆ ನಾನು?
ಎಲ್ಲಿದ್ದೇನೆ ನಾನು?
February 10, 2023
ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
May 6, 2020
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ಅಳಿದು ಕೂಡುವುದು- ಅಳಿಯದೆ ಕೂಡುವುದು
ಅಳಿದು ಕೂಡುವುದು- ಅಳಿಯದೆ ಕೂಡುವುದು
March 9, 2023
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಆಫ್ರಿಕಾದ ಸೂರ್ಯ
ಆಫ್ರಿಕಾದ ಸೂರ್ಯ
December 13, 2024
ಕೈಗೆಟುಕಿದ ಭಾವ ಬುತ್ತಿ
ಕೈಗೆಟುಕಿದ ಭಾವ ಬುತ್ತಿ
July 10, 2025
Copyright © 2025 Bayalu