Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕುರುಹೇ ಬಯಲು
Share:
Poems February 16, 2026 ಜ್ಯೋತಿಲಿಂಗಪ್ಪ

ಕುರುಹೇ ಬಯಲು

ದೇವರಿಗೆ ಕುರುಹು ಇಲ್ಲ ಕುರುಹುವಿಗೆ ದೇವರು ಉಂಟು

ಬೆರಳು ಮಡಿಚಿದರೆ ನಾನು ಬೆರಳು ಬಿಚ್ಚಿದರೆ ನೀನು

ಹೆಜ್ಜೆ ಹೆಜ್ಜೆಯಲಿ ಸದ್ದಿಲ್ಲದ ನಡೆ
ಬಿಲ್ಲು ಇಲ್ಲದ ಬಾಣ ಮುಟ್ಟೀತೇ ಗುರಿ

ಕೆರೆಯ ದಡದ ನೀರ ಅಂಚಿನಲಿ ಕಾಯುವ ಹಕ್ಕಿ
ಹಸಿವು ಇಲ್ಲದೆ ಹಾರೀತೇ…

ಕಂಬದ ಮೇಲೆ ಕುಳಿತಿದೆ ಹದ್ದು

ಕಣ್ಣ ಹಸಿವಿಗೆ ಕಂಡ ಕಂಡ ಕುರುಹುಗಳೆಲ್ಲಾ ದೇವರೇ
ತೀಡಬಲ್ಲೆನೇ ಈ ಕುರುಹುವಿನ ಡೊಂಕು

ಕಾಯದ ಹಸಿವಿಗೆ ಅನ್ನವೇ ಕುರುಹು
ಕಣ್ಣ ಹಸಿವಿಗೆ ಈ ದೇವರೇ ಅನ್ನ

ಈ ನೆಲಕಂಟದ ಬಯಲಿಗೆ ಕುರುಹೇ …
ಈ ಬಯಲಿಗಂಟಿರುವ ನೆಲಕೆ ಕುರುಹೇ ಬಯಲು.

Previous post ಗಜಲ್…
ಗಜಲ್…
Next post ನಿನ್ನದೊಂದು ಸ್ಪರ್ಶ
ನಿನ್ನದೊಂದು ಸ್ಪರ್ಶ

Related Posts

ನಾನುವಿನ ಉಪಟಳ
Share:
Poems

ನಾನುವಿನ ಉಪಟಳ

December 13, 2024 ಕೆ.ಆರ್ ಮಂಗಳಾ
ಕಣ್ಣಪಾಪೆಯಲಿ ನಾನವಿತು ಕುಳಿತಿರಲು ಕಾಣುವ ನೋಟಗಳಿಗೆ ಲೆಕ್ಕ ಹಾಕುವರಾರು? ತಲೆಯೊಳಗೆ ನಾನೆಂಬುದು ತತ್ತಿ ಇಟ್ಟಿರುವಾಗ ಬರುವ ಯೋಚನೆಗಳನು ಎಣಿಸಿದವರಾರು? ಮನದ ಮೂಲೆಮೂಲೆಯಲು...
ಕಾಣದ ಬೆಳಕ ಜಾಡನರಸಿ…
Share:
Poems

ಕಾಣದ ಬೆಳಕ ಜಾಡನರಸಿ…

December 13, 2024 ಜಬೀವುಲ್ಲಾ ಎಂ.ಅಸದ್
ಮರೆತ ಇಳಿ ಸಂಜೆಯೊಂದು ಮುಂಜಾನೆಗೆ ಕಾಡುವಾಗ ಕಾಫಿ ಮುಗಿದ ಕಪ್ಪಿನಲಿ ತುಂಬಿ ಚೆಲ್ಲಿದೆ ವೈರಾಗ್ಯ ಶೂನ್ಯ ಹೀರಿದವನೆ ವಶ ಕಾಲು ಮುರಿದ ಕುರ್ಚಿಯ ಮೇಲು ಕಾಲಿನ ಮೇಲೆ ಕಾಲು ಹಾಕಿ...

Comments 3

  1. ಭಾಗ್ಯಾ ವಿಜಯ್
    Feb 19, 2026 Reply

    ಕವನದ ಒಂದೊಂದು ಸಾಲೂ ಒಂದೊಂದು quotes ಇದ್ದ ಹಾಗಿವೆ. ಓದಲು ಏನೋ ಸೊಗಸು, ಅರ್ಥ ಬಲು ಆಳ.

    • GH JYOTILINGAPPA
      Feb 24, 2026 Reply

      ನಿಮ್ಮ ಓದಿಗೆ ಧನ್ಯವಾದಗಳು

  2. ಸುರೇಶ್ ಬಾಬು
    Feb 24, 2026 Reply

    ಕುರುಹನ್ನು, ಅರುಹನ್ನು ಎರಡನ್ನೂ ಬಯಲಾಗಿಸಿದ ಶರಣರ ಸಾರ ಈ ಕವನದಲ್ಲಿದೆ.🙏

Leave a Reply to GH JYOTILINGAPPA Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೀನು ನಾನಲ್ಲ…
ನೀನು ನಾನಲ್ಲ…
July 21, 2024
ನಡೆಯ ಎಡೆ…
ನಡೆಯ ಎಡೆ…
April 5, 2026
ಹಣತೆಯ ಹಂಗು
ಹಣತೆಯ ಹಂಗು
October 19, 2025
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಸೂರ್ಯ
ಸೂರ್ಯ
January 8, 2023
ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
September 14, 2024
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?
November 10, 2022
Copyright © 2026 Bayalu