Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅನಿಶಾ…
Share:
Poems September 6, 2026 ಜ್ಯೋತಿಲಿಂಗಪ್ಪ

ಅನಿಶಾ…

ನಾನು ನಡೆದಷ್ಟೇ ನನ್ನ ದಾರಿ
ಹಾಕಿದ ಹೆಜ್ಜೆಗೆ ದೂರ ಅಂಜಿಕೆಯೇ

ಗುರಿ ಇಲ್ಲದ ಪಯಣಕೆ ದಿಕ್ಕಿಲ್ಲ
ದಿಕ್ಕು ನೋಡಿ ಹರಿದೀತೇ ಬೆಳಕು

ಈ ದಿಕ್ಕಿಗೆ ಹೆಸರಿಟ್ಟವನು ನಾನಲ್ಲವೇ

ಒಂದು ಹೆಜ್ಜೆ ಹಿಂದಾಗದೆ ಮುಂದಾಗಲಾರೆ

ರೆಕ್ಕೆ ಇಲ್ಲದ ಹಕ್ಕಿ ಹಾರುವ ಕ್ಷಣ ಬಲ್ಲೆಯಾ
ಬಂದಂತೆ ಹೋಗುವ ಈ ತ್ರಾಣ ಅದೇನು ಹಕ್ಕಿಯೇ ಹಾರಲು

ಈ ಆಸೆ ಸಾಯದೆ ಆ ಆಸೆ ಹುಟ್ಟದು
ಕುರುಹಾದ ದೇವರಿಗೆ ಹಿರಿದಾ ಬಯಲು

ಯಾವ ದಾರಿಯೂ ಕದಳಿಗೆ ಕರೆದೊಯ್ಯದು ನನ್ನ
ಅದು ಅನಿಶಾ
ನನ್ನ ತನು ಕದಳಿಯಲ್ಲ ಮನ ಕದಳಿಯಲ್ಲ
ಈ ಭಾವ ಭ್ರಮೆಗೆ ಅಂಜಿಕೆಯೇ
ಭಾವ ನಿಷ್ಠೆ ಇಲ್ಲದವರು ಧ್ಯಾನದಲಿ ಗೆಲರು.

Previous post ಶೂನ್ಯ ತುಂಬಿಕೊಂಡ ಬಿಂದಿಗೆ
ಶೂನ್ಯ ತುಂಬಿಕೊಂಡ ಬಿಂದಿಗೆ
Next post ನಿಲುಗಡೆಯಿಲ್ಲದ ಪಯಣ…
ನಿಲುಗಡೆಯಿಲ್ಲದ ಪಯಣ…

Related Posts

ನೀರು… ಬರಿ ನೀರೇ?
Share:
Poems

ನೀರು… ಬರಿ ನೀರೇ?

December 13, 2024 ಜ್ಯೋತಿಲಿಂಗಪ್ಪ
ಕತ್ತಲೆಂಬುದು ಕಣ್ಣ ಮುಂದೋ ಕಣ್ಣ ಹಿಂದೋ… ಜ್ಞಾನ ಎಂಬುದು ಅರಿವಲ್ಲ ಅರಿದರೆ ಅಜ್ಞಾನ… ಕತ್ತಲ ಒಳಗಣ ಬೆಳಕ ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ ಜ್ಞಾನವೇನು...
ಎರವಲು ಮನೆ…
Share:
Poems

ಎರವಲು ಮನೆ…

August 10, 2023 ಕೆ.ಆರ್ ಮಂಗಳಾ
ಬೆಂಕಿ ಬಿದ್ದಿತ್ತು ಥಳುಕಿನ ಮಹಲಿಗೆ ಉರಿದುರಿದು ಬೂದಿಯಾಗಿತ್ತು ಪೇರಿಸಿ ಇಟ್ಟ ಸಿರಿ-ಸಂಪತ್ತು ಆರಿಸ ಹೋದರೆ ಕೈ ಸುಟ್ಟಿತ್ತು ಹಲುಬಿಹೆನೆಂದರೆ ದನಿ ಅಡಗಿತ್ತು ಕೂಗಲು ಹೋದರೆ...

Comments 5

  1. Thippeswamy D
    Sep 8, 2026 Reply

    ನಿಮ್ಮ ಕವನ ಮನಸನ್ನು ಆಳವಾಗಿ ತಟ್ಟುತ್ತದೆ ಹಾಗೂ ಬರವಣಿಗೆಯು ಸಹ ತುಂಬಾ ಮಾಗಿದೆ

  2. ಜಯಾ ಎಂ ಮರಡಿ
    Sep 8, 2026 Reply

    ಕವನ ಒಗಟೊಗಟಿನಂತಿದೆ. ಅನಿಶಾ ಬಹಳ ಆಕರ್ಷಕ ಹೆಸರು. ಕನ್ನಡ ಶಬ್ದವೇ?

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Sep 13, 2026 Reply

      ವಚನಕಾರರು ಬಳಸಿದ ಅಚ್ಚ ಕನ್ನಡ.. ಪದ
      ಅರ್ಥ… ಅಚಲ,ನಿರಂತರ, ಯಾವಾಗಲೂ, ರಾತ್ರಿ ಇಲ್ಲದುದು,ಬಯಲು

  3. Somanatha
    Sep 11, 2026 Reply

    Anisha is a deep philosophical poem.

  4. ಭಾರತಿ ಚಿಲಕವಾಡಿ
    Sep 30, 2026 Reply

    ಸರ್, ಅನಿಶಾ ಪದಕ್ಕೆ ನೀವು ಕೊಟ್ಟ ಅರ್ಥಗಳನ್ನಿಟ್ಟು ಓದಿದರೆ, ಕವನಕ್ಕೆ ಮತ್ತಷ್ಟು ಹೊಳಪು ಮೂಡಿತು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಣ್ಣ ದೀಪ
ಕಣ್ಣ ದೀಪ
September 7, 2021
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
April 29, 2018
ಆಫ್ರಿಕಾದ ಸೂರ್ಯ
ಆಫ್ರಿಕಾದ ಸೂರ್ಯ
December 13, 2024
ಹೀಗೊಂದು ತಲಪರಿಗೆ (ಭಾಗ-2)
ಹೀಗೊಂದು ತಲಪರಿಗೆ (ಭಾಗ-2)
July 4, 2021
ರಾಜಸತ್ತೆಯ ವಿರುದ್ಧದ ಪ್ರಜಾಸತ್ತೆ
ರಾಜಸತ್ತೆಯ ವಿರುದ್ಧದ ಪ್ರಜಾಸತ್ತೆ
October 13, 2026
ಶರಣನಾಗುವುದು…
ಶರಣನಾಗುವುದು…
February 10, 2023
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
ನಿನ್ನದೊಂದು ಸ್ಪರ್ಶ
ನಿನ್ನದೊಂದು ಸ್ಪರ್ಶ
February 16, 2026
Copyright © 2026 Bayalu