Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿಲುಗಡೆಯಿಲ್ಲದ ಪಯಣ…
Share:
Poems September 6, 2026 ಕೆ.ಆರ್ ಮಂಗಳಾ

ನಿಲುಗಡೆಯಿಲ್ಲದ ಪಯಣ…

ಕಡಲ ತೀರದ ಜೊತೆಗಲ್ಲುಗಳ
ನಡುನಡುವೆ
ಒಪ್ಪಾಗಿ ಒರಗಿದ್ದ
ನಿನ್ನನೆತ್ತಿಕೊಂಡಾಗ
ಕಂಡದ್ದು ನನ್ನದೇ ಬಿಂಬ…
ನೆನಪಾದದ್ದು ಬ್ಲೇಕ್ ಹೇಳಿದ
ಅನಂತದ ಪ್ರತಿಬಿಂಬ

ಸಾಗರದ ಕತೆಗಳಿವೆ
ನಿನ್ನ ಒಡಲಿನಲಿ
ಗಾಳಿಯ ಮಾತುಗಳಿವೆ
ನಿನ್ನ ಚಲನೆಯಲಿ
ಮರಮರಳಿ ಬಂದು
ಸೆಳೆದೊಯ್ಯುವ
ನೀರಲೆಗಳ ಏರಿಳಿತಕೆ
ನಿನ್ನನೊಪ್ಪಿಸಿ
ಹೊರಟದ್ದಾದರೂ ಎಲ್ಲಿಗೆ?

ಕಡಲಗರ್ಭಕೆ ಬೆದರದೆ
ತೆರೆಯ ರಭಸಕೆ ಬೆಚ್ಚದೆ
ಮುಳುಗುತ ಏಳುತ
ದಡದಲಿ ಹೊರಳುತ
ನಿಲುಗಡೆಯಿಲ್ಲದ
ಬಯಲುದಾರಿಯಲಿ
ಕಾಯುತ್ತಿರುವುದು ಯಾರಿಗೆ?

ಆದಿ-ಅಂತ್ಯದ ಕೊನೆಗಳೇ ಇಲ್ಲದ
ದೇಶ-ಕಾಲಗಳ ಗಡಿಗಳೂ ಇಲ್ಲದ
ನಿಲ್ಲದ ಮುಗಿಯದ
ನಿತ್ಯ ಪಯಣದಲಿ
ಬಂಡೆಯಾಗಿದ್ದೆಯೋ ಬೆಟ್ಟವಾಗಿದ್ದೆಯೋ
ಕಂಡವರಾದರೂ ಯಾರು?
ಬಂಡೆ-ಬೆಟ್ಟಗಳೂ ಬದಲಾವಣೆಯೊಳಗು
ನಿನ್ನ ಮೂಲವ ಬಲ್ಲವರಾರು?

ಯಾವ ನೀರಿನಲಿ ಯಾವ ನೆಲದಲಿ
ಅದಾವ ಮಣ್ಣ ಮಸೆತದಲಿ
ಕರಗಿ ಹೋಯಿತು
ನಿನ್ನ ಒರಟು ಮೈಚಗರ?
ಹೆಗಲು ಕೊಟ್ಟವರಾರು
ಮಸೆದು ನಕ್ಕವರಾರು
ನೋಡಿ ಕಂಡವರಾರು
ಪರಿವರ್ತನೆಯ ಪರ್ವ…

ಅನಂತ ಜಲರಾಶಿಯ
ಅನಾಹತ ಗಾನಕೆ
ಮೌನವಾಗಿ ಮೆದುವಾದದ್ದು
ನೀನೊಬ್ಬನೇ ಅಲ್ಲ;
ನಾನಾದರೂ ಯಾರು…
ಅದೇ ಹಾದಿಯ
ಮತ್ತೊಬ್ಬ ಅನಾಮಿಕ.

Previous post ಅನಿಶಾ…
ಅನಿಶಾ…
Next post ಪಾದಪೂಜೆಯ ಪ್ರಸ್ತುತತೆ…
ಪಾದಪೂಜೆಯ ಪ್ರಸ್ತುತತೆ…

Related Posts

ಗುರುವಿಗೆ ನಮನ…
Share:
Poems

ಗುರುವಿಗೆ ನಮನ…

January 8, 2023 ಕೆ.ಆರ್ ಮಂಗಳಾ
ನೋಟದ ನಂಜನು ಕೂಟದ ತೊಡಕನು ಭವದ ಹುಟ್ಟನು ಹುಟ್ಟಿನ ಗುಟ್ಟನು ಬಿಡಿಸಲು ಕಲಿಸಿದ ಗುರುವಿಗೆ ನಮನ ಭಾವದ ಒಳಗನು ವಿಷಯದ ಹುರುಳನು ವಿದೇಹದ ಇರುವನು ತ್ರಿಪುಟಿಯ ತಿರುಳನು ಹುರಿಯಲು...
ಆ ದಾರಿಯೇನು ಕುರುಡೇ…
Share:
Poems

ಆ ದಾರಿಯೇನು ಕುರುಡೇ…

June 5, 2021 ಜ್ಯೋತಿಲಿಂಗಪ್ಪ
ಅಪ್ಪ ಬೆಳೆಸಿದ ಆಲ ಬಯಲ ಮುಟ್ಟಲಿಲ್ಲ ಮಗ ಕಡಿದ ಬಿಳಿಲು ನೆಲ ಮುಟ್ಟಲಿಲ್ಲ ಈಗ ಆಲದ ಬುಡ ಬಯಲೊಳಗೆ ನೆಲಕಂಟಿದೆ ಈ ಹುಣುಸೇ ಮರದ ಹುಳಿಗೇನು ಮುಪ್ಪೇ ಕನ್ಯೆಯ ಬೆನ್ನ ಬೆವರ ಉಪ್ಪು...

Comments 1

  1. ಡಾ. ಮಲ್ಲೇಶ್
    Sep 25, 2026 Reply

    ಕವನ ಇಷ್ಟ ಆಯ್ತು. ಕಲ್ಲು ನಯವಾದದ್ದನ್ನು ಹೇಳ್ತಾರೆ ಅನ್ಕೊಂಡು ಆತುರದಿಂದ ಓದಿದೆ. ಕೊನೆಯ ಎರಡರಲ್ಲಿ ತುಂಬಾ ಹೃದ್ಯವಾಗಿ ಬಂದಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮುಖ- ಮುಖವಾಡ
ಮುಖ- ಮುಖವಾಡ
February 7, 2021
ನಾಥರು ಮತ್ತು ಶರಣರು-2
ನಾಥರು ಮತ್ತು ಶರಣರು-2
April 5, 2026
ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ
November 9, 2021
ಹುಡುಕಾಟ
ಹುಡುಕಾಟ
January 15, 2026
ಅವಿರಳ ಅನುಭಾವಿ-4
ಅವಿರಳ ಅನುಭಾವಿ-4
June 17, 2020
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
ಅರಿವಿಗೆ ಬಂದ ಆರು ಸ್ಥಲಗಳು
ಅರಿವಿಗೆ ಬಂದ ಆರು ಸ್ಥಲಗಳು
August 11, 2025
ಆಕಾಶ, ಭೂಮಿ, ನಾನು…
ಆಕಾಶ, ಭೂಮಿ, ನಾನು…
October 13, 2026
ಲಿಂಗ ಕೂಡಲ ಸಂಗಮ
ಲಿಂಗ ಕೂಡಲ ಸಂಗಮ
April 29, 2018
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
Copyright © 2026 Bayalu