ಸೂರ್ಯ
ಸೂರ್ಯ
ಈ ಸಂತೆಯೊಳಗೇನು
ಹುಡುಕುತಿರುವೇ…?
ನಿಶ್ಶಬ್ದ, ಮಾರುವುದಿಲ್ಲವೇ…!
ಅದು ಮಂದಿರ ಮಸೀದಿ ಚರ್ಚು ಮಠಗಳ ಹಕ್ಕು
ಸುಮ್ಮನೇ
ಕುಳಿತು ಕಣ್ಣೊಳಗಣ
ಬೆಳಕ ಸದ್ದು ಕೇಳು
ಈ
ಸಂತೆಗೆ
ಬಂದವರೆಲ್ಲಾ ಬೆಳಕ
ಕದ್ದೇ ಬಂದವರೇ ಕಣ್ಣಮುಚ್ಚಿ
ಈ
ಸಂತೆಯಲಿ
ಸಿಂತೇ ಮಾಡುವವ
ನೀನೊಬ್ಬನೇ ನೋಡು
ಸಂತೇ ಕಟ್ಟುವ ಹೊತ್ತಾಯಿತು
ಬಿಡು ದಾರಿ.
Comments 1
ಪೆರೂರು ಜಾರು, ಉಡುಪಿ
Jan 16, 2023ನೇಸರ ನಿತ್ಯ ಗಾಡಿ ಕಟ್ಟಿದರೂ ಬೇಸರ ಸಂತೆಗಲ್ಲ, ಸಂತೆಯ ಒಳಗಿಟ್ಟು ಬೆಳಕುರಿಸಿದವರಿಗೆ.