ಮಾತು ಮಾಯೆ
ಶಬ್ದಗಳ ಅರಣ್ಯದಲಿ
ಕಳೆದು ಹೋಗಿದ್ದೀ
ನಾನಿನ್ನು ಮಾತನಾಡಲಾರೆ
ನಿನ್ನ ನೀನೇ ಹುಡುಕಿಕೋ-
ಅಂದ ಗುರು
ಹೀಗೊಂದು ದಿನ ಮೌನವಾಗಿಬಿಟ್ಟ!
ಸುಳ್ಳಲ್ಲ ನಿಜ,
ಅವರ ಒಂದೊಂದು
ನುಡಿಗಳೂ ಹೊಸದಾಗಿದ್ದವು
ಎಲ್ಲಿಯೂ ಯಾರಿಂದಲೂ ಕೇಳಿರದವು
ಯಾವ ಹೊತ್ತಿಗೆಯಲೂ ಓದದವು
ತಲೆ ಒಪ್ಪುವಂತೆ
ಹೃದಯ ಅರಳುವಂತೆ
ಕೈಮರದ ತಂಗಾಳಿಯಂತೆ…
ಮರುಳಾಯಿತೆ ಮನ ಶಬ್ದಸುಖಕೆ?
ಎಲ್ಲಿದ್ದೇನೆ ಈಗ?
ಮಾತುಗಳ ಕಟ್ಟುವ ಮನಸ್ಸಲ್ಲೋ
ಪೇರಿಸಿಟ್ಟುಕೊಂಡ ಜ್ಞಾನದಲ್ಲೋ
ಅವು ತೋರಲೆತ್ನಿಸುತಿಹ ಹಾದಿಯಲ್ಲೋ…
Comments 2
ಡಾ.ಬಸವರಾಜ ಸಬರದ
Jul 5, 2021ಮಂಗಳಾ ಅವರ ಕವಿತೆ ಅರ್ಥಪೂರ್ಣವಾಗಿದೆ.ಒಂದೊಂದು ಸಾಲೂ ಚಿಂತನೆಗೆ ಹಚ್ಚುತ್ತದೆ.
Padmalaya
Jul 9, 2021ಬದುಕಿನ ಸಮಸ್ಯೆಗಳೊಂದಿಗೆ ಇದ್ದದ್ದು ಇದ್ದಂಗೆ ಬರೆಯಮ್ಮ….ಒಳ್ಳೆಯ ಕಾವ್ಯ ಮೂಡಬಹುದು