Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಾತು ಮಾಯೆ
Share:
Poems July 4, 2021 ಕೆ.ಆರ್ ಮಂಗಳಾ

ಮಾತು ಮಾಯೆ

ಶಬ್ದಗಳ ಅರಣ್ಯದಲಿ
ಕಳೆದು ಹೋಗಿದ್ದೀ
ನಾನಿನ್ನು ಮಾತನಾಡಲಾರೆ
ನಿನ್ನ ನೀನೇ ಹುಡುಕಿಕೋ-
ಅಂದ ಗುರು
ಹೀಗೊಂದು ದಿನ ಮೌನವಾಗಿಬಿಟ್ಟ!

ಸುಳ್ಳಲ್ಲ ನಿಜ,
ಅವರ ಒಂದೊಂದು
ನುಡಿಗಳೂ ಹೊಸದಾಗಿದ್ದವು
ಎಲ್ಲಿಯೂ ಯಾರಿಂದಲೂ ಕೇಳಿರದವು
ಯಾವ ಹೊತ್ತಿಗೆಯಲೂ ಓದದವು
ತಲೆ ಒಪ್ಪುವಂತೆ
ಹೃದಯ ಅರಳುವಂತೆ
ಕೈಮರದ ತಂಗಾಳಿಯಂತೆ…

ಮರುಳಾಯಿತೆ ಮನ ಶಬ್ದಸುಖಕೆ?
ಎಲ್ಲಿದ್ದೇನೆ ಈಗ?
ಮಾತುಗಳ ಕಟ್ಟುವ ಮನಸ್ಸಲ್ಲೋ
ಪೇರಿಸಿಟ್ಟುಕೊಂಡ ಜ್ಞಾನದಲ್ಲೋ
ಅವು ತೋರಲೆತ್ನಿಸುತಿಹ ಹಾದಿಯಲ್ಲೋ…

Previous post ನಾನು… ನನ್ನದು
ನಾನು… ನನ್ನದು
Next post ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು

Related Posts

ಕಾಯದೊಳಗಣ ಬಯಲು
Share:
Poems

ಕಾಯದೊಳಗಣ ಬಯಲು

November 7, 2020 ಜ್ಯೋತಿಲಿಂಗಪ್ಪ
ಈ ಬಯಲು ಗುರುತಿಸಲಾರೆ ನನ್ನ ಕಣ್ಣ ಎದುರು ನಾನು ಬಯಸುವ ರೂಹು ಇಲ್ಲ ಕಣ್ಣು ಹೇಳಿದುದು ಸುಳ್ಳೇ ನೀ ಬಿಟ್ಟ ಉಸಿರಲೊಂದು ದನಿ ಇದೆ ನಾ ಕೇಳಲಾರೆ ಉಸಿರು ಒಳಗಣ ದನಿ ಉಸಿರು ನುಂಗಿತು...
ಬಯಲಾದ ದೇವರು
Share:
Poems

ಬಯಲಾದ ದೇವರು

January 15, 2026 ಜ್ಯೋತಿಲಿಂಗಪ್ಪ
ಈ ದೇವರು ಒಂದು ಕನಸು ನಿಜವೂ ಅಹುದು ಸುಳ್ಳೂ ಅಹುದು ಕಲ್ಪನೆಯ ಹಾಗೆ ಕಾಣುವುದು ಕಾಣದು ನಂಬಿದರೆ ಕೇಡಿಲ್ಲ ನಂಬದಿರಲೂ ಕೇಡಿಲ್ಲ ಕೇಡೆಲ್ಲವೂ ನನ್ನವು ಈ ಸುಳ್ಳಿಗೊಂದು ಕಾಣಿಸಲಾರೆ...

Comments 2

  1. ಡಾ.ಬಸವರಾಜ ಸಬರದ
    Jul 5, 2021 Reply

    ಮಂಗಳಾ ಅವರ ಕವಿತೆ ಅರ್ಥಪೂರ್ಣವಾಗಿದೆ.ಒಂದೊಂದು ಸಾಲೂ ಚಿಂತನೆಗೆ ಹಚ್ಚುತ್ತದೆ.

  2. Padmalaya
    Jul 9, 2021 Reply

    ಬದುಕಿನ ಸಮಸ್ಯೆಗಳೊಂದಿಗೆ ಇದ್ದದ್ದು ಇದ್ದಂಗೆ ಬರೆಯಮ್ಮ….ಒಳ್ಳೆಯ ಕಾವ್ಯ ಮೂಡಬಹುದು

Leave a Reply to ಡಾ.ಬಸವರಾಜ ಸಬರದ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮನವೇ ಮನವೇ…
ಮನವೇ ಮನವೇ…
May 6, 2020
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಮೊಗ್ಗಾಯಿತು ಅರಿವಿಗೆ ಹಿಗ್ಗಾಯ್ತು: (ಅನಿಮಿಷ 12)
ಮೊಗ್ಗಾಯಿತು ಅರಿವಿಗೆ ಹಿಗ್ಗಾಯ್ತು: (ಅನಿಮಿಷ 12)
December 9, 2025
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
ಅಲ್ಲಮಪ್ರಭು ಮತ್ತು ಮಾಯೆ
ಅಲ್ಲಮಪ್ರಭು ಮತ್ತು ಮಾಯೆ
January 7, 2022
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
June 3, 2019
  ಅವಿರಳ ಅನುಭಾವಿ-3
  ಅವಿರಳ ಅನುಭಾವಿ-3
May 6, 2020
ಧಾರ್ಮಿಕ ಮೌಢ್ಯಗಳು
ಧಾರ್ಮಿಕ ಮೌಢ್ಯಗಳು
February 5, 2020
ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…
September 7, 2021
Copyright © 2026 Bayalu