ಬಯಲಾಟ
ಆ
ಮನೆ
ಬಿಟ್ಟು ಬಂದಿರುವೆ
ಎಂಬುದು
ಈಗಲೂ ಇದೆ ಆ
ಮನೆ
ಇದೆಯೇ
ಎಂಬುದು ಈಗಲೂ ಇದೆ ನಿಜ
ಸುಳ್ಳು
ಎಂಬುದು
ನನ್ನ ಹಿತ ಆ
ಮನೆ
ಸಮುದ್ರ
ದಾಟಲು ಹಾರುವ ಚಿಟ್ಟೆ
ಹುಡುಕುತಿರುವೆ
ಇನ್ನೂ
ಚಿಟ್ಟೆಯೇ ಬಂದಿಲ್ಲ ಆಗಲೇ ಏರಿ
ಹಾರುತಿರುವೆ
ಅವ್ವನ
ಸಮಾಧಿ ಬದಿಯ
ಆಲ
ಒಂದೇ
ಕನಸು ಅಪ್ಪ ಬಯಲು
ಆಗುವನೇ…
Comments 1
Pallavi
Mar 20, 2021ಕವನದ ಆಶಯ ಸ್ಪಷ್ಟವಾಗಿ ತಿಳಿಯದಿದ್ದರೂ ಕವಿ ಬದುಕಿನ ಒಳಗುಟ್ಟು ಹೇಳಲು ಪ್ರಯತ್ನಿಸಿದಂತಿದೆ.