ಪಾದಕೂ ನೆಲಕೂ…
ಕಣ್ಣೇ ಸೋತಿರಲು
ಈ ಮಾಯಾಂಗನೆ ಬೆತ್ತಲೆ ಆಗುವಳು
ನದಿ
ಒಣಗಿದೆ ಒರತೆಯಲೂ ನೀರು ಜಿನುಗದು
ಕಣ್ಣ
ಒಳಗಣ ದೀಪ ಮಂಕು
ಯಾರಿಗೆ ಗೊತ್ತು
ಯಾವ ದಾರಿ ಎಲ್ಲಿಗೋ
ಪಾದಕೂ ನೆಲಕೂ ಎನಿತು ಅಂತರ
ಈ
ಕಣ್ಣ ಪಾಪೆ ಹೀರಿದ್ದಷ್ಟೇ ಬೆಳಕು
ಪಾಪೆ ಸುಕ್ಕು
ಮೊದಲು ಉಂಡಿಟ್ಟ ತಟ್ಟೆಗಳನೆಲ್ಲಾ ತಿಕ್ಕಿ ತೊಳೆಯಬೇಕು
ಈ ನನ್ನ ಗೆಳತಿಗೆ ಹೇಳುವುದೇನಿದೆ
ಎಲ್ಲಾ ಅರಿತೂ ಅರಿಯದಂತೆ
ಅರಿಯದಿರಲೂ ಅರಿದಂತೆಯೇ ಒಡನಾಡುವ ಚತುರೆ
ಈ
ಧ್ಯಾನದೊಳು ಏನಿದೆಯೋ…
ಏನಿಲ್ಲವೋ…
ಅಳಿಸಲಾಗದು
ಅಂಗೈಯ ಗೆರೆ
ಸಾವು ಎಂಬುದು ಅಮೂರ್ತ.
Comments 4
Padmalaya
Jun 14, 2024ಅತ್ಯಂತ….ಅತ್ಯಂತ…ಆಳ..ಕಣ್ಣಿಗೂ ಮೆದುಳಿಗೂ ಸಿಲುಕದಷ್ಟು ದೂರ…ದೂರ
Giri Devaraj
Jun 16, 2024ಸಾವು ಅಮೂರ್ತ- ಕವನ ಅನುಭಾವಿಕ ನೆಲೆಯಲ್ಲಿ ಮಾತಾಡುತ್ತದೆ🙏🏿
ಬಸವ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ
Jun 17, 2024ಜ್ಯೋತಿಲಿಂಗಪ್ಪ ಅಣ್ಣಾವ್ರು ನಿಗೂಢ, ನಿಲುಕದ, ಪ್ರಜ್ಞೆ ಆಚೆಗಿನ ಕವಿ ಅನಿಸಿ ಮಿಂಚಿನಂತೆ ಅಲ್ಪ ಸ್ವಲ್ಪ ಅರ್ಥ ಗೋಚರಿಸಿ ನನ್ನ ಮಂದ ಮತಿಯ ಮಿತಿಯಿದು ಅನಿಸುತ್ತದೆ… ಚಿಂತನೆಗೆ, mysticism ಗೆ ದಾರಿ ತೋರುವ ಅವರಿಗೆ ಧನ್ಯವಾದಗಳು, ಕೃತಜ್ಞತೆಗಳು.
Vishwa Loki
Jul 1, 2024ಉಂಡಿಟ್ಟ ತಟ್ಟೆಗಳನ್ನೆಲ್ಲಾ ತಿಕ್ಕಿ ತೊಳೆಯುವುದೇ ಬದುಕಾಗಿದೆ. ಉಣ್ಣದೆ ಇರಲು ಸಾಧ್ಯವೇ? ತಿಕ್ಕಿ ತೊಳೆಯುವುದರಿಂದ ಮುಕ್ತಿ ಇಲ್ಲವೇ?