Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪಾದಕೂ ನೆಲಕೂ…
Share:
Poems June 14, 2024 ಜ್ಯೋತಿಲಿಂಗಪ್ಪ

ಪಾದಕೂ ನೆಲಕೂ…

ಕಣ್ಣೇ ಸೋತಿರಲು
ಈ ಮಾಯಾಂಗನೆ ಬೆತ್ತಲೆ ಆಗುವಳು

ನದಿ
ಒಣಗಿದೆ ಒರತೆಯಲೂ ನೀರು ಜಿನುಗದು

ಕಣ್ಣ
ಒಳಗಣ ದೀಪ ಮಂಕು

ಯಾರಿಗೆ ಗೊತ್ತು
ಯಾವ ದಾರಿ ಎಲ್ಲಿಗೋ
ಪಾದಕೂ ನೆಲಕೂ ಎನಿತು ಅಂತರ

ಈ
ಕಣ್ಣ ಪಾಪೆ ಹೀರಿದ್ದಷ್ಟೇ ಬೆಳಕು
ಪಾಪೆ ಸುಕ್ಕು

ಮೊದಲು ಉಂಡಿಟ್ಟ ತಟ್ಟೆಗಳನೆಲ್ಲಾ ತಿಕ್ಕಿ ತೊಳೆಯಬೇಕು

ಈ ನನ್ನ ಗೆಳತಿಗೆ ಹೇಳುವುದೇನಿದೆ
ಎಲ್ಲಾ ಅರಿತೂ ಅರಿಯದಂತೆ
ಅರಿಯದಿರಲೂ ಅರಿದಂತೆಯೇ ಒಡನಾಡುವ ಚತುರೆ

ಈ
ಧ್ಯಾನದೊಳು ಏನಿದೆಯೋ…
ಏನಿಲ್ಲವೋ…

ಅಳಿಸಲಾಗದು
ಅಂಗೈಯ ಗೆರೆ
ಸಾವು ಎಂಬುದು ಅಮೂರ್ತ.

Previous post ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
Next post ಚಿತ್ತ ಸತ್ಯ…
ಚಿತ್ತ ಸತ್ಯ…

Related Posts

ಶಾಂತಿ
Share:
Poems

ಶಾಂತಿ

April 11, 2025 Bayalu
ಪಯಣದ ಉಬ್ಬುತಗ್ಗು ಹಾದಿಯಲಿ, ಗಂಧದ ಕಣವಾಗು ಬಯಲಲಿ, ಸುಮದ ದಳವಾಗು ವನದಲಿ, ಓ ಮನವೇ, ಕಂದನ ಮುಗ್ದ ನಗುವಾಗು.| ೧ | ಹರುಷ ದುಗುಡಗಳ ಮೇಳದಲಿ, ಮಧುರ ನೆನಪುಗಳ ಹೊಳೆಯಾಗು,...
ಬೆಳಕ ಬೆಂಬತ್ತಿ…
Share:
Poems

ಬೆಳಕ ಬೆಂಬತ್ತಿ…

November 9, 2021 ಕೆ.ಆರ್ ಮಂಗಳಾ
ಸಾಲು ಸಾಲು ಹಣತೆಗಳ ಹಚ್ಚಿ ನೋಡುತ್ತಲೇ ಇದೆ ಆಸೆಯಿಂದ ಈ ಮನ ಬೆಳಕ ಗೋರಲು… ಒಳಗ ಬೆಳಗಲು… ಕತ್ತಲೆಯ ಭಯವೋ, ಬೆಳಕಿನ ಮೋಹವೋ.. ಒಳಗೆ ಇಳಿದಷ್ಟೂ, ಹೆಜ್ಜೆ ಇಟ್ಟಷ್ಟೂ ಅನಾದಿ ಕಾಲದ...

Comments 4

  1. Padmalaya
    Jun 14, 2024 Reply

    ಅತ್ಯಂತ….ಅತ್ಯಂತ…ಆಳ..ಕಣ್ಣಿಗೂ ಮೆದುಳಿಗೂ ಸಿಲುಕದಷ್ಟು ದೂರ…ದೂರ

  2. Giri Devaraj
    Jun 16, 2024 Reply

    ಸಾವು ಅಮೂರ್ತ- ಕವನ ಅನುಭಾವಿಕ ನೆಲೆಯಲ್ಲಿ ಮಾತಾಡುತ್ತದೆ🙏🏿

  3. ಬಸವ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ
    Jun 17, 2024 Reply

    ಜ್ಯೋತಿಲಿಂಗಪ್ಪ ಅಣ್ಣಾವ್ರು ನಿಗೂಢ, ನಿಲುಕದ, ಪ್ರಜ್ಞೆ ಆಚೆಗಿನ ಕವಿ ಅನಿಸಿ ಮಿಂಚಿನಂತೆ ಅಲ್ಪ ಸ್ವಲ್ಪ ಅರ್ಥ ಗೋಚರಿಸಿ ನನ್ನ ಮಂದ ಮತಿಯ ಮಿತಿಯಿದು ಅನಿಸುತ್ತದೆ… ಚಿಂತನೆಗೆ, mysticism ಗೆ ದಾರಿ ತೋರುವ ಅವರಿಗೆ ಧನ್ಯವಾದಗಳು, ಕೃತಜ್ಞತೆಗಳು.

  4. Vishwa Loki
    Jul 1, 2024 Reply

    ಉಂಡಿಟ್ಟ ತಟ್ಟೆಗಳನ್ನೆಲ್ಲಾ ತಿಕ್ಕಿ ತೊಳೆಯುವುದೇ ಬದುಕಾಗಿದೆ. ಉಣ್ಣದೆ ಇರಲು ಸಾಧ್ಯವೇ? ತಿಕ್ಕಿ ತೊಳೆಯುವುದರಿಂದ ಮುಕ್ತಿ ಇಲ್ಲವೇ?

Leave a Reply to ಬಸವ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗುರುವಂದನೆ
ಗುರುವಂದನೆ
October 13, 2022
ಧರೆಗೆ ಸೂತಕವುಂಟೆ?
ಧರೆಗೆ ಸೂತಕವುಂಟೆ?
August 11, 2025
ತೊತ್ತುಗೆಲಸವ ಮಾಡು
ತೊತ್ತುಗೆಲಸವ ಮಾಡು
June 5, 2021
ಹಾಯ್ಕು
ಹಾಯ್ಕು
September 6, 2023
ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
February 5, 2020
ಪ್ರಭುವಿನ ಗುರು ಅನಿಮಿಷಯೋಗಿ
ಪ್ರಭುವಿನ ಗುರು ಅನಿಮಿಷಯೋಗಿ
July 21, 2024
ಗುರುವಿಗೆ ನಮನ…
ಗುರುವಿಗೆ ನಮನ…
January 8, 2023
ಪ್ರಮಾಣಗಳಿಂದ ಅಪ್ರಮಾಣದೆಡೆ…
ಪ್ರಮಾಣಗಳಿಂದ ಅಪ್ರಮಾಣದೆಡೆ…
July 10, 2025
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ನನ್ನೊಳಗಿನ ನೀನು
ನನ್ನೊಳಗಿನ ನೀನು
April 29, 2018
Copyright © 2026 Bayalu