ಗೆರೆ ಎಳೆಯದೆ…
ನೀನು
ಕೂಗುವ ತನಕ
ನನ್ನ
ಕಿವಿಯಲಿ ಸದ್ದಿರಲಿಲ್ಲ
ನನ್ನ
ಸದ್ದಲಿ ನಿನ್ನ ಕಿವಿಯು
ತೆರೆಯಲಿಲ್ಲ
ನನ್ನ ನಿನ್ನ ಪ್ರತಿಷ್ಠೆ
ಕಣ್ಣಲಿ ಬೆಳಕಾಗಲಿಲ್ಲ
ಈ
ಗಾಯಕೆ ಮುಲಾಮು
ನಿನ್ನಿಂದ ದೂರವಾಗುವುದು
ಬಿಸಿಲಿಗೆ ಮೋಡವೂ ಬೆವರುವುದು
ಕಣ್ಣಲಿ ನೋಡಿದು ಕಣ್ಣಲಿ ಕಾಣಲಿಲ್ಲ
ಕಣ್ಣಲಿ ಕಂಡುದು ಕಣ್ಣು ನೋಡಲಿಲ್ಲ
ಪರಿಚಿತ ಬೆಳಕಿಗೆ ಅಪರಿಚಿತ ನೆರಳು
ನೆರಳೂ ಅದೇ ಬೆಳಕೂ ಅದೇ
ಕೇಳಿದಷ್ಟು ಶಬ್ದದ ಉಲಿ
ನೋಡಿದಷ್ಟೂ ಕಣ್ಣ ಸುಳಿ
ಕಣ್ಣು ತುಂಬಿದೆ ನೋಡೆ
ಕಿವಿ ತುಂಬಿದೆ ಕೇಳೆ
ನಾನು ಓಡಿದಷ್ಟೂ ನೀನೂ ಓಡುವೆಯಾ…
ಗೆರೆ ಎಳೆಯದೆ ಆಚೆ ಈಚೆ ಎಂಬುದಿಲ್ಲ.
Comments 2
L.S. Patil
Oct 18, 2022ಪರಿಚಿತ ಬೆಳಕಿಗೆ ಅಪರಿಚಿತ ನೆರಳು
ನೆರಳೂ ಅದೇ ಬೆಳಕೂ ಅದೇ…
ಜೋಡು ಸಾಲುಗಳ ಕವನದ ಆಂತರ್ಯ ಗೆರೆ ಎಳೆಯುತ್ತಿರುವ ಮನುಷ್ಯನ ಪ್ರವೃತ್ತಿಯನ್ನು ಅಣಕಿಸುವಂತಿದೆ.
Chaitanya Indudhar
Oct 18, 2022ಗೆರೆ ಎಳೆದು ವೈವಿಧ್ಯತೆಗೆ ತೆರೆದುಕೊಳ್ಳಬೇಕೋ, ಗೆರೆ ಅಳಿಸಿ ಸಾಮರಸ್ಯ ಸಾಧಿಸಬೇಕೋ?