
ಕಣ್ಣ ದೀಪ
ನನ್ನ
ಮನೆಯ ಅಂಗಳದಲ್ಲಿ
ಒಬ್ಬ ಬುದ್ಧನಿದ್ದಾನೆ
ಶೋ ಕೇಸಿನಲ್ಲಿ
ಒಬ್ಬ ಬುದ್ಧನಿದ್ದಾನೆ
ಗೋಡೆಯ ಮೇಲೆ
ಒಬ್ಬ ಬುದ್ಧನಿದ್ದಾನೆ
ಎಲ್ಲೆಲ್ಲೂ ಬುದ್ಧ ಬುದ್ಧ
ಒಳಗೆ ಖಾಲಿ
ಗೋಡೆಯ
ಹಿಂದೆ ದೀಪ ಇಟ್ಟು ಹೋದ
ಊರು
ತುಂಬಾ ಬಿಕ್ಕುಗಳೇ
ಬೇಡುವ
ಕೈ ಕೊಡುವ ಕೈಯ ಕಾಯುತಿದೆ
ಬಯಲ
ಹುಡುಕಿ ಹೊರಟಿದ್ದು ನಿಜ
ಬಯಲಾಗಲಿಲ್ಲ
ನಿಜದ
ದಾರಿಯಲಿ ಸಿಕ್ಕಿದ್ದು
ಬಯಲು
ಕಣ್ಣ
ದೀಪ ಆರಿಸುವ ಗಾಳಿ
ಕತ್ತಲು
ಈಗ
ಊರ ತುಂಬಾ ಬಸವಗಳೇ
ಲಿಂಗವಿಲ್ಲ
ಆ
ಪ್ರಾಣಿಗೆ ಹೊಟ್ಟೆ
ತುಂಬಿತೋ ಸಿಟ್ಟೆಲ್ಲಾ ಇಳಿಯಿತು
ಈ
ಪ್ರಾಣಕೆ ಹೊಟ್ಟೆಯೇ ಇಲ್ಲಾ
ಸಿಟ್ಟೇ ಎಲ್ಲಾ.
Comments 2
Rajesh Bhadravathi
Sep 9, 2021ನನ್ನ ಮನೆಯಲ್ಲೂ ಬುದ್ಧನ ಮೂರ್ತಿಗಳು ತುಂಬಿಕೊಂಡಿವೆ. ನಿಮ್ಮ ಕವನದ ಆಶಯ ನೇರ ನನ್ನ ಮನಸ್ಸನ್ನೇ ಕೆಣಕುವಂತೆ ತೋರಿತು.
Shrinivasa
Sep 23, 2021I absolutely love your blog, content and layout are amazing. I find many of your posts to be exactly what I am looking for. Thank you.