Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುವೆಂಬೋ ಬೆಳಗು…
Share:
Poems February 6, 2025 ಕೆ.ಆರ್ ಮಂಗಳಾ

ಗುರುವೆಂಬೋ ಬೆಳಗು…

ಒಳಗಿರುವುದೆಲ್ಲವೂ
ಕೂಡಿಸಿಟ್ಟುಕೊಂಡದ್ದೇ
ಬುದ್ಧಿ ಬಲಿತಾಗಿನಿಂದ
ಗೊತ್ತಿದ್ದೋ… ಇಲ್ಲದೆಯೋ

ನನಗೆ ನೆನಪಿದೆ
ಕಂಡದ್ದು ಉಂಡದ್ದು
ಮುಟ್ಟಿದ್ದು ಮೂಸಿದ್ದು
ತಟ್ಟಿದ್ದು ಸೆಳೆದದ್ದು
ನಕ್ಕಿದ್ದು ನಗಿಸಿದ್ದು
ಅತ್ತದ್ದು ಅಳಿಸಿದ್ದು..
ಎಲ್ಲ ಒಳಗಿಳಿದು
ಕಡು ಕೆಂಪಗಾಗಿ
ನರನಾಡಿಗಳಿಗೆಲ್ಲ ನುಗ್ಗಿ
ಲೆಕ್ಕಕ್ಕೆ ಸಿಗದಷ್ಟು
ಕತೆಗಳನು ಹೇಳೋ
ನೆನಪಿನ ಕೋಶಗಳಾಗಿ
ಹೆಜ್ಜೆಹಜ್ಜೆಗೂ ಕುರುಹಾಗಿ
ಕೆಣಕುತಿರುವುದೆಲ್ಲವೂ
ಹಿಂದಣ ಹಂಗು…

ಇಂದಲ್ಲ ನಾಳೆ
ಮತ್ತೆ ಯಾವಾಗಲಾದರೂ
ಸಿಕ್ಕೀತು, ದಕ್ಕೀತು
ಎನುವ ಬಯಕೆಗಳೆಲ್ಲ
ಕನವರಿಕೆಗಳಾಗಿ
ನಾಳೆಗಳ ಹಳವಂಡಗಳಾಗಿ
ಅದಾಗಿದ್ದರೆ ಇದಾಗಿದ್ದರೆ
ಎನುವ ರೆಗಳ ಲೋಕವಾಗಿ
ಹಾಗಾದರೆ ಹೀಗಾದರೆ
ಎನುವ ಲೆಕ್ಕಾಚಾರಗಳಾಗಿ
ಆಸೆಗಳಾಗಿ ಮೋಹವಾಗಿ
ನಿರೀಕ್ಷೆಯ ಭಾರವಾದದ್ದೆಲ್ಲಾ
ಮುಂದಣ ಮಾಯೆ…

ಹಿಂದು-ಮುಂದುಗಳ
ಸೆಳೆತದ ಸುಳಿಯೊಳಗೆ
ಸಮಯ ಸರಿದದ್ದು ಗೊತ್ತಾಗಿ
ಎಲ್ಲೋ ಎಡವಟ್ಟಾಯ್ತಲ್ಲ
ಅಯ್ಯೋ ಸಾಕೆನಗೆಂದು
ಜೀವ ಬಸವಳಿದಾಗ…
ಪ್ರಾಣವಾಯುವಿನಂತೆ
ಉಸಿರಾದ ನನ್ನ ಗುರು
ಅರಿವಾಗಿ, ಬೆಳಕಾಗಿ
ಎಚ್ಚರದ ಗಂಟೆಯಾಗಿ
ಇರುವಿಕೆಯ ಬಯಲಾಗಿ
ಕೈಹಿಡಿದ ತಾಯಾಗಿ!

Previous post ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
Next post ಅನಿಮಿಷನ ಕಥೆ- 6
ಅನಿಮಿಷನ ಕಥೆ- 6

Related Posts

ಕಣ್ಣ ಪರಿಧಿ
Share:
Poems

ಕಣ್ಣ ಪರಿಧಿ

February 10, 2023 ಜ್ಯೋತಿಲಿಂಗಪ್ಪ
ಕಣ್ಣ ಬಿಚ್ಚಿ ಕಾಣುವುದು ಏನು ಏನೂ ಇಲ್ಲ ಕಣ್ಣ ಮುಚ್ಚಿ ಕಾಣುವುದು ಏನು ಏನೂ ಇಲ್ಲ ಕಣ್ಣ ಒಳಗ ಕಾಣುವುದು ಕಾಣು ಕಾಣು ಕಾಣು ಏನು ಏನೂ ಇಲ್ಲ ಕಣ್ಣ ಪರದೆಯ ದಾಟಿ ಹೋದವರು ಯಾರು...
ನೀನು ನಾನಲ್ಲ…
Share:
Poems

ನೀನು ನಾನಲ್ಲ…

July 21, 2024 ಕೆ.ಆರ್ ಮಂಗಳಾ
ಹಿಂದಿನ ಹೆಜ್ಜೆಗಳಲಿ ತನ್ನನ್ನೇ ಅರಸುವ ಮುಂದಿನ ದಿನಗಳಲಿ ತನ್ನನ್ನೇ ಮೆರೆಯಿಸುವ ಅಸ್ತಿತ್ವದ ಹುಡುಕಾಟವೇ ನೀನು ನಾನಲ್ಲ ಎಂದೋ ಆದುದನು ಜತನದಲಿ ಕೂಡಿಟ್ಟು ಎಲ್ಲವನೂ ಎಲ್ಲರನೂ ಆ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ- 2
July 21, 2024
ಪ್ರಭುವಿನ ಗುರು ಅನಿಮಿಷಯೋಗಿ
ಪ್ರಭುವಿನ ಗುರು ಅನಿಮಿಷಯೋಗಿ
July 21, 2024
ಗಜಲ್…
ಗಜಲ್…
February 16, 2026
ಸತ್ಯದ ಬೆನ್ನು ಹತ್ತಿ…
ಸತ್ಯದ ಬೆನ್ನು ಹತ್ತಿ…
April 29, 2018
ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2
August 10, 2023
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
November 7, 2020
ನೆಟ್ಟ ನಂಜು ಹಾಲೀಂಟದು
ನೆಟ್ಟ ನಂಜು ಹಾಲೀಂಟದು
June 5, 2021
Copyright © 2026 Bayalu