Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಲಿಂಗದ ಹಂಗೇ…
Share:
Poems September 10, 2022 ಜ್ಯೋತಿಲಿಂಗಪ್ಪ

ಲಿಂಗದ ಹಂಗೇ…

ಹೊದಿಯೋಕೊಂದು ಆಕಾಶ
ಮಲಗೋಕೊಂದು ನೆಲ
ಕುಡಿಯೋಕೊಂದು ಸಿಂಧು
ಉಣ್ಣೋಕೆ ಒಂದಿಷ್ಟು ಭಿಕ್ಷೆ
ಹಾಡೋಕೊಂದು ತಂಬೂರಿ
ಕೇಳೋಕೊಂದು ಕಿವಿ
ಇನ್ನೇನು

ಆಂ ಮರೆತೇ

ಮೆರೆಯಲು ಒಂದು ಮರೆವು
ಅಹಂಕಾರ ಹೊತ್ತೊಯ್ಯಲು ನಾಲ್ಕು ಹೆಗಲು

ಸಾಕು

ಸೊನ್ನೆಯೊಳಗೊಂದು ಸೊನ್ನೆ ಹುಡುಕುವೆ

ಈಗ
ನನ್ನಲಿ
ಕ್ರೋಧವಿಲ್ಲ ದ್ವೇಷವಿಲ್ಲ
ಲೋಭವಿಲ್ಲ ಮತ್ಸರವಿಲ್ಲ
ಬಯಕೆಯಿಲ್ಲ ದುಃಖವಿಲ್ಲ
ಮೋಹವಿಲ್ಲ ಮದವಿಲ್ಲ
ಈ ಲಿಂಗದ ಹಂಗೇ
ನನಗೆ ನಾನೇ ಪ್ರಮಾಣ
ನನ್ನ ಲಜ್ಜೆಯ ಏನ ಹೇಳಲೀ…

Previous post ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
Next post ಭವ ರಾಟಾಳ
ಭವ ರಾಟಾಳ

Related Posts

ಆಕಾರ-ನಿರಾಕಾರ
Share:
Poems

ಆಕಾರ-ನಿರಾಕಾರ

January 7, 2022 ಜ್ಯೋತಿಲಿಂಗಪ್ಪ
ಇರಯ್ಯಾ ಕಾಯುವವನೇ ಇರದಿರುವಾಗ ನಿನಗೇತರ ಅವಸರ ಕಾಯುತ್ತಾನೆಂದು ಕಾಯುವೆಯಲ್ಲಾ ಸಾವ ಕಾಯುವ ನ್ಯಾಯ ಅದಾವುದಯ್ಯಾ ಕೇಡಿಲ್ಲ ಅಳಿಯೆನೆಂದು ಹಲ್ಲ ಮಸೆಯದಿರು ಕಾಯ ಕಾಯದು ಆಕಾರಕೆ...
ಸುತ್ತಿ ಸುಳಿವ ಆಟ
Share:
Poems

ಸುತ್ತಿ ಸುಳಿವ ಆಟ

May 6, 2021 ಕೆ.ಆರ್ ಮಂಗಳಾ
ಜೀವದ ಗೆಳೆಯಾ ಅಂತ ಕಟ್ಟಿಕೊಂಡೆ ಪ್ರಾಣ ಹಿಂಡೊ ಗಂಡನಾಗಿ ನನ್ನ ಆಳುತಾನವ್ವ ಜೇನಿನಂಥ ಮಾತುಗಳ ನಂಬಿಬಿಟ್ಟೆ ಗಾಳಿಯಲ್ಲಿ ಅವನ ಜೊತೆ ತೇಲಿಬಿಟ್ಟೆ ಗಿರಿಗಿಟ್ಲೆ ಆಟದಲ್ಲಿ...

Comments 2

  1. ಪೆರೂರು ಜಾರು, ಉಡುಪಿ
    Sep 18, 2022 Reply

    ಹಂಗಿಲ್ಲದ್ದಕ್ಕೆ ಲಂಗಿಲ್ಲ ಲಗಾಮಿಲ್ಲ.

  2. ಲಲಿತಾ ಜವಳಿ. ವಿಜಯಪುರ
    Sep 18, 2022 Reply

    ನನಗೆ ನಾನೇ ಪ್ರಮಾಣ- ಎನ್ನುವುದು ಒಪ್ಪತಕ್ಕ ಮಾತು. ಆದರೆ ಲಜ್ಜೆ ಯಾಕೆ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…
June 14, 2024
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
May 8, 2024
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
ಕುವೆಂಪು ಕಣ್ಣಲ್ಲಿ ಬಸವಣ್ಣ
ಕುವೆಂಪು ಕಣ್ಣಲ್ಲಿ ಬಸವಣ್ಣ
October 19, 2025
ಲಿಂಗಾಯತರು ಮತ್ತು ಬಸವತತ್ವ
ಲಿಂಗಾಯತರು ಮತ್ತು ಬಸವತತ್ವ
May 10, 2023
Copyright © 2026 Bayalu