Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಯಾಕೀ ಗೊಡವೆ?
Share:
Poems August 10, 2023 ಜ್ಯೋತಿಲಿಂಗಪ್ಪ

ಯಾಕೀ ಗೊಡವೆ?

ಸಾಯುವುದು
ಒಂದು ದಿನ ಇದ್ದೇ ಇದೆ
ಬಿಡು
ದಿನಾ ಏಕೆ ಸಾಯುವುದು

ದಿನಕೆ ಸಾವಿಲ್ಲವೇ
ಹುಟ್ಟುವ ಭರವಸೆ ಖಂಡಿತಾ

ಹುಟ್ಟೇ ಒಂದು ಮದ
ಸಾವರಿತರೆ ಮದ ಸಾವುದು
ನಿತ್ಯ ಸತ್ಯದ ಗೊಡವೆ ಬೇಕೇ

ಅಲುಗಿಗೆ ಸವರಿದ ತುಪ್ಪ
ಮೂಗಿಗೆ ರುಚಿ ನಾಲಿಗೆಗೆ ಅರುಚಿ

ಕಡಲಾಳ ಅಳೆಯಲು ಮುಳುಗಿರುವೆ
ಮೇಲೇಳದೆ ಅಳೆಯೆ ಆಳ
ಆಳ ಅಳೆದರೆ ಮೇಲೇರಲಾರೆ

ಹೀಗೆ ಬಂದು ಹಾಗೆ ಹೋಗುವುದೇ ಈ ಜೀವ
ಯಾವುದಕ್ಕೂ ಯಾವ ಉದ್ದೇಶವೂ ಇಲ್ಲ

ಸಾಯುವುದು ಇಂದು
ಅಳುವುದು ನಾಳೆಯೇ

ತಳ ಕಾಣದ ಬಾವಿಯಲಿ
ಸೇದಿದಷ್ಟೂ ನೀರು

ಊರ ಬೀದಿಯಲಿ ಆಡುತ್ತಾ
ಹಾಡುತ್ತಾ ಅಲೆದಾಡುವ
ತಥಾಗತ ನಾನಲ್ಲವೇ?

ನನಗೇಕೆ ಈ ಗೊಡವೆ
ನಾನುಂಟು ನನ್ನ ಬದುಕುಂಟು.

Previous post ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
Next post ಎರವಲು ಮನೆ…
ಎರವಲು ಮನೆ…

Related Posts

ದಾರಿಯಲ್ಲದ ದಾರಿ…
Share:
Poems

ದಾರಿಯಲ್ಲದ ದಾರಿ…

October 10, 2023 ಕೆ.ಆರ್ ಮಂಗಳಾ
ಗುರು ತೋರಿದ ದಾರಿಯಲಿ ಬಂಡೆಗಳ ಸಿಡಿಸಬೇಕು ಗುಡ್ಡಗಳ ಒಡೆಯಬೇಕು ಕಮರಿ, ಹೊಳ್ಳ ದಾಟಬೇಕು ಮುಳ್ಳುಗಂಟಿ ಕಿತ್ತಬೇಕು ಇಷ್ಟಪಟ್ಟು ನಡೆಯದಿದ್ದರೆ ಇದು ಬಲು ಕಷ್ಟದ ದಾರಿ...
ಗಡಿಯಲ್ಲಿ ನಿಂತು…
Share:
Poems

ಗಡಿಯಲ್ಲಿ ನಿಂತು…

May 6, 2021 ಜ್ಯೋತಿಲಿಂಗಪ್ಪ
ಈ ಬಯಲಲಿ ಕುಳಿತು ಹಿಂದಣ ಹೆಜ್ಜೆಗಳ ಎಣಿಸುತಿರುವೆ ಖಾಲಿ ಮುಖವಿಲ್ಲದ ನಾಳೆಗಳು ಮುಖವಾಡದ ನಿನ್ನೆಗಳು ಮುಖಾಮುಖಿ ಯ ಇಂದು ಈ ಅರಳಿದ ಅರಳೆ ರಾಟೆಯಲಿ ಸಿಲುಕಿ ನೂಲು ಹಾಸು ಹೊಕ್ಕು...

Comments 2

  1. Jayaraj Unakal
    Aug 16, 2023 Reply

    ಸಾವರಿತರೆ ಹುಟ್ಟಿನ ಮದ ಸಾಯುವುದು… ಬ್ಯೂಟಿಫುಲ್ ಸಾಲುಗಳು.

  2. Gangadhara Koppal
    Aug 25, 2023 Reply

    ತಳ ಕಾಣದ ಬಾವಿಯಲಿ
    ಸೇದಿದಷ್ಟೂ ನೀರು- wonderful.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
ತುಮ್ಹಾರೆ ಸಿವಾ ಔರ್ ಕೋಯಿ ನಹಿ…
ತುಮ್ಹಾರೆ ಸಿವಾ ಔರ್ ಕೋಯಿ ನಹಿ…
July 10, 2023
ವಚನ–ಶ್ರಮಣಧಾರೆಗಳ ಸಂಧಿಭೂಮಿ
ವಚನ–ಶ್ರಮಣಧಾರೆಗಳ ಸಂಧಿಭೂಮಿ
April 5, 2026
ಶರಣರು ತೋರಿದ ಆಚಾರಗಳು
ಶರಣರು ತೋರಿದ ಆಚಾರಗಳು
March 17, 2021
ಮನವೇ ಮನವೇ…
ಮನವೇ ಮನವೇ…
May 6, 2020
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
June 14, 2024
ಬದುಕಲು ಇನ್ನೆಷ್ಟು ಬೇಕು?
ಬದುಕಲು ಇನ್ನೆಷ್ಟು ಬೇಕು?
October 13, 2026
ಅರಸೊತ್ತಿಗೆಯಿಂದ ಅರಿವಿನೆಡೆಗೆ
ಅರಸೊತ್ತಿಗೆಯಿಂದ ಅರಿವಿನೆಡೆಗೆ
April 29, 2018
ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
May 10, 2022
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
Copyright © 2026 Bayalu